ದಾವಣಗೆರೆ ಮೇ.11
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು
ಮತ್ತು ರೋಗಿಗಳನ್ನು ಉಳಿಸಲು ಜಿಲ್ಲಾ ಕೋವಿಡ್ ಆಸ್ಪತ್ರೆ
ಮತ್ತು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು,
ಜನರೂ ಕೂಡ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ
ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು
ಜಿಲ್ಲೆಯಲ್ಲಿ ಸುಮಾರು 526 ಕೋವಿಡ್ ರೋಗಿಗಳನ್ನು ತಪಾಸಣೆ
ಮಾಡಲು ಅಗತ್ಯವಿರುವಷ್ಟು ತಯಾರಿಯನ್ನು ಜಿಲ್ಲಾ ಕೋವಿಡ್
ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ.
ಒಂದು ತಿಂಗಳು ಜಿಲ್ಲೆಯಲ್ಲಿ ಯಾವುದೇ ಪ್ರಕರಣವಿಲ್ಲದೇ
ಗ್ರೀನ್ ಝೋನ್‍ಗೆ ಬಂದಿದ್ದು ಆ ಸಮಯದಲ್ಲೂ ಹಲವಾರು
ತಯಾರಿ ನಡೆಸಲಾಗಿದ್ದು ಅದು ಈಗ ಉಪಯೋಗಕ್ಕೆ ಬರುತ್ತಿದೆ
ಎಂದರು.
ನಗರದ ಎರಡು ಮೆಡಿಕಲ್ ಕಾಲೇಜುಗಳು, ಖಾಸಗಿ
ಆಸ್ಪತ್ರೆಯ ತಜ್ಞ ವೈದ್ಯರು, ಜಿಲ್ಲಾಸ್ಪತ್ರೆಯ ತಜ್ಞ ವೈದ್ಯರು
ಸೇರಿದಂತೆ ಎಲ್ಲ ವೈದ್ಯರ ಸಹಕಾರ ಚೆನ್ನಾಗಿದೆ. ಜಾಲಿನಗರ,
ಬಾಷಾನಗರ, ಇಮಾಮ್‍ನಗರ, ಎಸ್‍ಪಿಎಸ್ ನಗರ, ಬೇತೂರು ರಸ್ತೆ,
ಕೆಟಿಜೆ ನಗರ ಮತ್ತು ಶಿವನಗರಗಳಲ್ಲಿ ಒಟ್ಟು 7 ಕಡೆಗಳಲ್ಲಿ
ಕಂಟೈನ್‍ಮೆಂಟ್ ಝೋನ್ ಮಾಡಲಾಗಿದ್ದು, ನಿಯಮಾನುಸಾರ
ಸೀಲ್‍ಡೌನ್ ಮಾಡಿ ಮನೆ ಮನೆಗೆ ಅಗತ್ಯ ವಸ್ತುಗಳನ್ನು
ಪೂರೈಕೆ ಮಾಡಲಾಗುತ್ತಿದೆ. ಹಾಗೂ ಈ ಪ್ರದೇಶಗಳನ್ನು
ವ್ಯಾಪಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಲ್ಲ
ಪ್ರಾಥಮಿಕ ಮತ್ತು ದ್ವಿತೀಯ ಸೇರಿದಂತೆ ಕಂಟೈನ್‍ಮೆಂಟ್
ಝೋನ್‍ನಲ್ಲಿ ಬರುವ ಎಲ್ಲರ ಗಂಟಲುದ್ರವ ಮಾದರಿ ಪರೀಕ್ಷೆಗೆ
ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ದಿನಕ್ಕೆ 200 ಸ್ಯಾಂಪಲ್
ಕಳುಹಿಸುತ್ತಿದ್ದು ಇದನ್ನು 400 ರಿಂದ 500 ರವರೆಗೆ ಹೆಚ್ಚಿಸಲು
ಸೂಚಿಸಿದ್ದೇನೆ. ತೀವ್ರ ಉಸಿರಾಟದ ತೊಂದರೆ ಮತ್ತು ಶೀತ
ಜ್ವರದಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಯಾಂಪಲ್

ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹಾಗೂ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳ ಡ್ರೈವರ್,
ಕ್ಲೀನರ್‍ಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಮಾಹಿತಿ
ನೀಡಿದರು.
ಕೋವಿಡ್ ರೋಗಿಗಳನ್ನು ಉಳಿಸಲು ತಜ್ಞರ ತಂಡ :
ನಗರದಲ್ಲಿ ಎರಡು ವೈದ್ಯಕೀಯ ಕಾಲೇಜುಗಳು, ವಿವಿಧ
ನರ್ಸಿಂಗ್ ಹೋಂಗಳ ತಜ್ಞರು, ಜಿಲ್ಲಾಸ್ಪತ್ರೆಯ
ತಜ್ಞರುಗಳಿದ್ದು, ಇಎನ್‍ಟಿ, ಪಲ್ಮನಾಲಜಿ ಸೇರಿದಂತೆ ಇತರೆ ತಜ್ಞ
ವೈದ್ಯರನ್ನೊಳಗೊಂಡ ಎರಡು ತಜ್ಞ ವೈದ್ಯರ
ರಚಿಸಿಕೊಂಡು ಪ್ರತಿ ದಿನ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್
ರೋಗಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಪ್ರಸ್ತುತ 5
ರೋಗಿಗಳು ಹೈಫ್ಲೋ ಆಕ್ಸಿಜನ್ ಥೆರಪಿಯಲ್ಲಿದ್ದು, 1 ರೋಗಿ
ಗಂಭೀರ ಸ್ಥಿತಿ ತಲುಪಿತ್ತು. ಇದೀಗ ಆ ರೋಗಿಯೂ ಕೂಡ
ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಪ್ರತಿ ಪ್ರಕರಣಗಳಲ್ಲಿ ರೋಗಿಯ
ಜೀವ ಉಳಿಸಲು ಅವಿರತ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ
ಎಂದರು.
ನಗರದಲ್ಲಿನ ಖಾಸಗಿ ಆಸ್ಪತ್ರೆ ನರ್ಸಿಂಗ್ ಹೋಂಗಳ
ವೈದ್ಯಕೀಯ ಸಿಬ್ಬಂದಿಗಳು, ನರ್ಸ್‍ಗಳು ಬಂದು ಕರ್ತವ್ಯ
ನಿರ್ವಹಿಸುತ್ತಿಲ್ಲವೆಂದು ತಿಳಿದುಬಂದಿದೆ. ವೈದ್ಯಕೀಯ
ರಂಗದಲ್ಲಿರುವ ತಾವೇ ಅನಗತ್ಯವಾಗಿ ಹೆದರುವ ಅವಶ್ಯಕತೆ
ಇಲ್ಲ. ಜಿಲ್ಲಾಡಳಿತ ಎಲ್ಲರ ರಕ್ಷಣೆ ಬಗ್ಗೆ ಜವಾಬ್ದಾರಿ ಕೈಗೊಳ್ಳಲಿದೆ.
ಅನಾವಶ್ಯಕವಾಗಿ ಭಯ ಪಡದೇ ಕರ್ತವ್ಯ ಹಾಜರಾಗಿ ತಮ್ಮ
ಅಮೂಲ್ಯ ಸೇವೆಯನ್ನು ಸಲ್ಲಿಸಬೇಕೆಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದ ಪಡಿತರವನ್ನು ಕಂಟೈನ್‍ಮೆಂಟ್
ಝೋನ್‍ನಲ್ಲಿ ಶೇ.90 ವಿತರಣೆಯಾಗಿದ್ದು ಇನ್ನುಳಿದ ಶೇ 10 ನ್ನು
ಶೀಘ್ರದಲ್ಲೇ ವಿತರಣೆ ಮಾಡಲಾಗುವುದು.
ಹರಿಹರ ಮತ್ತು ಚನ್ನಗಿರಿಯ ಜನಸಂದಣಿ ಪ್ರದೇಶಗಳಲ್ಲಿ
ರ್ಯಾಂಡಮ್ ಆಗಿ ಗಂಟಲುದ್ರವ ಮಾದರಿ ಪರೀಕ್ಷೆ ಮಾಡಲು ಕ್ರಮ
ಕೈಗೊಳ್ಳುವಂತೆ ಸೂಚಿಸಿದ್ದೇನೆ.
ಓಬಿಜಿ &ಚಿmಠಿ; ಎಸ್‍ಎನ್‍ಸಿಯು ಶಿಫ್ಟ್ : ಸಿಜಿ ಕೋವಿಡ್ ಆಸ್ಪತ್ರೆಯಲ್ಲಿ ಕೇವಲ
ಕೊರೊನಾ ಪಾಸಿಟಿವ್ ಮತ್ತು ಐಸೊಲೇಷನ್ ಪ್ರಕರಣಗಳನ್ನು
ಮಾತ್ರ ಚಿಕಿತ್ಸೆ ನೀಡಲಾಗುವುದು. ಸಿಜಿ ಆಸ್ಪತ್ರೆ ಆವರಣದಲ್ಲಿರುವ
ಓಬಿಜಿ ಹೆರಿಗೆ ವಿಭಾಗವನ್ನು ಹಳೇ ಮಹಿಳಾ ಮತ್ತು ಮಕ್ಕಳ
ಆಸ್ಪತ್ರೆಗೆ ಹಾಗೂ ಓಪಿಡಿಯನ್ನು ಬಾಪೂಜಿ ಆಸ್ಪತ್ರೆಗೆ ಶಿಫ್ಟ್
ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇಂದು ಮೂರು ಹೊಸ ಕೊರೊನಾ ಪ್ರಕರಣ : ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಮಾತನಾಡಿ, ಇಂದು ಜಿಲ್ಲೆಯಲ್ಲಿ ಮೂರು
ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, ರೋಗಿ ಸಂಖ್ಯೆ 850 33
ವರ್ಷದ ಪುರುಷ ಇವರು ರೋಗಿ ಸಂಖ್ಯೆ 662 ರ ಪ್ರಾಥಮಿಕ
ಸಂಪರ್ಕ. ರೋಗಿ ಸಂಖ್ಯೆ 851 30 ವರ್ಷದ ಮಹಿಳೆ 6663 ರ
ಪ್ರಾಥಮಿಕ ಸಂಪರ್ಕ. 852 56 ವರ್ಷದ ಮಹಿಳೆ ಇವರು ರೋಗಿ
ಸಂಖ್ಯೆ 667 ರ ಪ್ರಾಥಮಿಕ ಸಂಪರ್ಕ ಹೊಂದಿದ್ದು ಇವರೆಲ್ಲ

ಜಾಲಿನಗರ ಕಂಟೈನ್‍ಮೆಂಟ್ ಝೊನ್‍ಗೆ ಒಳಪಟ್ಟಿರುತ್ತಾರೆ.
ಹೊಸ ಪ್ರದೇಶದ ಪ್ರಕರಣ ಆಗಿರುವುದಿಲ್ಲ.
ಇಂದು 240 ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ
ಕಳುಹಿಸಿದ್ದು ಒಟ್ಟು 404 ವರದಿ ಬಾಕಿ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 65
ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಎಸ್‍ಎಸ್ ಆಸ್ಪತ್ರೆಯ ಲ್ಯಾಬ್‍ಗೆ ಅವಶ್ಯಕವಾದ ಲಾಜಿಸ್ಟಿಕ್ ಪೂರೈಕೆ
ಇಂದು ಆಗಿದ್ದು ಪರೀಕ್ಷೆಗೆ ಎಲ್ಲ ತಯಾರಿ ನಡೆಸಿಕೊಳ್ಳುತ್ತಿದೆ.
ತಯಾರಿ ಪೂರ್ಣಗೊಂಡಲ್ಲಿ ನಾಳೆಯಿಂದಲೇ ಸುಮಾರು 100 ರಿಂದ
150 ಸ್ಯಾಂಪಲ್ ಪರೀಕ್ಷೆಗೆ ಸಿದ್ದವಾಗಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಕೊರೊನಾ ಪಾಸಿಟಿವ್
ರೋಗಿಗಳ ಮತ್ತು ಐಸೋಲೇಷನ್‍ನಲ್ಲಿರುವ ವ್ಯಕ್ತಿಗಳ
ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಆಯುಷ್
ಇಲಾಖೆಯ ಖಾದ್ಯಗಳು, ಸಿರಪ್‍ಗಳನ್ನು ನೀಡಲಾಗಿತ್ತಿದೆ
ಜೊತೆಗೆ ಮೈಸೂರಿನ ಸಿಎಫ್‍ಟಿಆರ್‍ಐ ನಿಂದ ಪೌಷ್ಟಿಕಾಂಶ ಭರಿತ
ಮತ್ತು ವಿಟಮಿನ್ ಸಿ ಹಾಗೂ ಎ ಉಳ್ಳ ಮ್ಯಾಂಗೋ ಬಾರ್‍ಗಳು ಮತ್ತು
ಸಮುದ್ರದ ಪಾಚಿ ಅಂಶವುಳ್ಳ ಸ್ಪಿರುಲಿನಾ ಚಿಕ್ಕಿಯನ್ನು
ತರಿಸಿಕೊಂಡು ಇವರಿಗೆ ನೀಡಲು ಆ ಸಂಸ್ಥೆಯಿಂದ ಈಗಾಗಲೇ
ದರಪಟ್ಟಿ ಆಹ್ವಾನಿಸಲಾಗಿದೆ. ಈ ರೀತಿಯಾಗಿ ರೋಗಿಗಳನ್ನು
ಗುಣಮುಖವಾಗುವತ್ತ ಹೆಜ್ಜೆ ಇಡಲಾಗಿದೆ.
ಮಹಾಂತೇಶ ಬೀಳಗಿ,
ಜಿಲ್ಲಾಧಿಕಾರಿಗಳು
ಸಾರ್ವಜನಿಕರಲ್ಲಿ ಮನವಿ : ಡಿಸಿ ಕೋವಿಡ್ ಆಸ್ಪತ್ರೆಯಲ್ಲಿರುವ
ಬಹಳಷ್ಟು ಜನರು ಗುಣಮುಖರಾಗುತ್ತಿದ್ದಾರೆ. ರೋಗಿ ಸಂಖ್ಯೆ
533 ರ ಚಿಕಿತ್ಸೆ ನಾಳೆಗೆ 14 ದಿನ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ
ಎರಡನೇ ಬಾರಿಯ ಸ್ವಾಬ್ ಟೆಸ್ಟ್‍ಗೆ ಕಳುಹಿಸಲಾಗುವುದು.
ಸಕ್ರಿಯವಾಗಿರುವ ಎಲ್ಲ ಕೊರೊನಾ ರೋಗಿಗಳು
ಗುಣಮುಖರಾಗುವ ವಿಶ್ವಾಸ ಇದೆ ಎಂದರು.
ಎಸ್‍ಪಿ ಹನುಮಂತರಾಯ ಮಾತನಾಡಿ, ಸೋಂಕಿನ ಮೂಲದ
ಪತ್ತೆಗೆ ಸಂಬಂಧಿಸಿದಂತೆ ಉತ್ತರಿಸಿದ ಅವರು ವಿದೇಶ ಪ್ರಯಾಣದ
ಹಿನ್ನೆಲೆಯಿಂದ ಹಾಗೂ ತಬ್ಲಿಗಿಗಳಿಂದ ಜಿಲ್ಲೆಯಲ್ಲಿ ಸೋಂಕು
ಬಂದಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಓಡಾಟದ ಲಾರಿಗಳಲ್ಲಿ
ಬಾಗಲಕೋಟೆ, ಹಾಸನ, ಕೂಡ್ಲಿಗಿ ಈ ಕಡೆಗಳಿಗೆ ಹೋಗಿ ಬಂದ
ಹಿನ್ನೆಲೆ ಇರುವವರಿಂದ ಸೋಂಕು ತಲುಗಿದೆ ಎಂಬ ನಿಲುವಿಗೆ
ಬರಲಾಗಿದೆ. ಸಾಮಾನ್ಯವಾಗಿ ತಜ್ಞರು ಹೇಳುವಂತೆ
ಕಂಟೈನ್‍ಮೆಂಟ್ ಝೋನ್‍ನ ದಟ್ಟಣೆ ಪ್ರದೇಶದಲ್ಲಿ ಪಾರ್ಷಿಯಲ್
ಏರ್ ಬೋರ್ನ್‍ನಿಂದ ಸ್ಥಳೀಯವಾಗಿ ಸೋಂಕು ಹರಡುವ ಸಾಧ್ಯತೆ
ಇರುತ್ತದೆ. ಈ ರೀತಿಯಾಗಿ ಇಲ್ಲಿಯೂ ಸೋಂಕು ಹರಡಿರಬಹುದು
ಎಂದು ವಿವರಣೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ,
ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ
ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್ ಇದ್ದರು.

Leave a Reply

Your email address will not be published. Required fields are marked *