ದಾವಣಗೆರೆ ಮೇ.12
ಜಿಲ್ಲೆಯಲ್ಲಿ ಇಂದು 12 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು
ವರದಿಯಾಗಿದ್ದು, 6 ಜನರು ಗುಜರಾತ್‍ನ ಅಹಮದಾಬಾದ್‍ಗೆ ಹೋಗಿ
ಬಂದ ಹಿನ್ನೆಲೆ ಹೊಂದಿದ್ದರೆ, ಇನ್ನು 6 ಜನರು ಜಾಲಿನಗರ
ಕಂಟೈನ್‍ಮೆಂಟ್ ಝೋನ್‍ಗೊಳಪಡುವ
ಸಂಪರ್ಕಿತರಾಗಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು ಅವರು ರೋಗಿ
ಸಂಖ್ಯೆ 915 ರಿಂದ 920 ರವರೆಗೆ ಆರು ಜನರು ಗುಜರಾತ್‍ನ
ಅಹಮದಾಬಾದ್‍ಗೆ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಒಟ್ಟು 7
ಜನರು ಅಹಮದಾಬಾದ್‍ನಿಂದ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟಕ್ಕೆ
ಹೋಗುತ್ತಿದ್ದರು. ಅವರನ್ನು ಅಲ್ಲಿ ತಲುಪುತ್ತಿದ್ದಂತೆಯೇ
ದಾವಣಗೆರೆ ಕರೆ ತಂದು ಕ್ವಾರಂಟೈನ್ ಮಾಡಲಾಗಿದೆ. ಏಳರಲ್ಲಿ
ಆರು ಪಾಸಿಟಿವ್ ಬಂದಿದ್ದು ಒಬ್ಬರ ಫಲಿತಾಂಶ ಬಾಕಿ ಇದೆ ಎಂದರು.
ರೋಗಿ ಸಂಖ್ಯೆ 914 ರೋಗಿ ಸಂಖ್ಯೆ 696 ರ ಸಂಪರ್ಕ
ಹೊಂದಿರುವವರು. ರೋಗಿ ಸಂಖ್ಯೆ 921 ಮತ್ತು 922 ರೋಗಿ
ಸಂಖ್ಯೆ 695 ರ ಸಂಪರ್ಕ ಹೊಂದಿರುವವರು. ರೋಗಿ ಸಂಖ್ಯೆ 923
ರಿಂದ ರೋಗಿ ಸಂಖ್ಯೆ 925 ರೋಗಿ ಸಂಖ್ಯೆ 696 ರ ಸಂಪರ್ಕ
ಹೊಂದಿರುವವರಾಗಿದ್ದು ಈ ಆರು ಜನರು ಜಾಲಿನಗರಕ್ಕೆ
ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯವರಾಗಿದ್ದಾರೆ ಈ ಎಲ್ಲ
ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ
ಪತ್ತೆ ಕಾರ್ಯ ಈ ಕೂಡಲೇ ಆರಂಭಿಸಲಾಗುವುದು.
ಇಂದು ಒಟ್ಟು 154 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ
ಕಳುಹಿಸಲಾಗಿದೆ. ಹಾಗೂ 120 ಸ್ಯಾಂಪಲ್ ಈಗ ಸಂಗ್ರಹಿಸಿ ಕಳುಹಿಸಲು
ಸಿದ್ದವಾಗಿದ್ದು ನಾಳೆ ಕಳುಹಿಸಲಾಗುವುದು. ಇಂದು 134 ನೆಗೆಟಿವ್
ವರದಿ ಬಂದಿದ್ದು, ಒಟ್ಟು 461 ವರದಿ ಬರುವುದು ಬಾಕಿ ಇದೆ. ಪ್ರಸ್ತುತ
ಜಿಲ್ಲೆಯಲ್ಲಿ 77 ಸಕ್ರಿಯ ಪ್ರಕರಣಗಳಿವೆ ಎಂದರು.
ಒಟ್ಟು 22 ಜನರ 14 ದಿನಗಳ ಚಿಕಿತ್ಸೆ ಮುಗಿದಿದ್ದು ಇವರ
ಮೊದಲನೇ ಸ್ಯಾಂಪಲ್ ಕಳುಹಿಸಲಾಗಿದೆ. ಇನ್ನು 24 ಗಂಟೆಯಲ್ಲಿ
ಮತ್ತೊಂದು ಬಾರಿ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗುವುದು
ಎಂದರು.
ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ಆರ್ಥಿಕ ಚಟುವಟಿಕೆ : ಇಂದು
ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ವರ್ತಕರು, ವಿವಿಧ ವ್ಯಾಪಾರಿ
ಸಂಘಗಳ ಸಭೆ ನಡೆದು ಬೆಳಗ್ಗಿನಿಂದ ಸಂಜೆವರೆಗೆ ಆರ್ಥಿಕ
ಚಟುವಟಿಕೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು.
ಕೆಂಪು ವಲಯ ಇದ್ದರೂ ಕೂಡ ಅಂತರ
ಕಾಯ್ದುಕೊಳ್ಳುವ, ಶುಚಿತ್ವ, ಮಾಸ್ಕ್ ಸೇರಿದಂತೆ ಕೋವಿಡ್
ನಿಯಂತ್ರಣದ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಆರ್ಥಿಕ
ಚಟುವಟಿಕೆಗಳಾದ ಇಂಡಸ್ಟ್ರಿಯಲ್ ಏರಿಯಾ ಮತ್ತು
ಗ್ರಾಮಾಂತರ ಕೈಗಾರಿಕೆಗಳು, ರಫ್ತು, ಅಗತ್ಯ ವಸ್ತುಗಳ
ಅಂಗಡಿಗಳು, ಸಣ್ಣಪುಟ್ಟ ಬಟ್ಟೆ ಅಂಗಡಿ, ಸ್ಟುಡಿಯೋ, ಮೆಕ್ಯಾನಿಕ್
ಶಾಪ್, ಉತ್ಪಾದನಾ ಘಟಕಗಳು, ಇ-ಕಾಮರ್ಸ್, ಸರ್ಕಾರಿ ಕಚೇರಿಗಳು
ಹಾಗೂ ಶೇ.33 ಸಿಬ್ಬಂದಿಗಳೊಂದಿಗೆ ಖಾಸಗಿ ಕಚೇರಿಗಳು
ಆರಂಭಿಸಬಹುದು. ಆರ್ಥಿಕ ಚಟುವಟಿಕೆದಾರರು ಪಾಲಿಕೆಗೆ ಸ್ವಯಂ
ಘೋಷಣಾ ಮುಚ್ಚಳಿಕೆ ಬರೆದು ಚಟುವಟಿಕೆ ಆರಂಭಿಸಬೇಕು.
ಕೋವಿಡ್ ನಿಯಂತ್ರಣ ಕುರಿತಾದ ಸರ್ಕಾರದ ನಿಯಮಗಳನ್ನು
ಉಲ್ಲಂಘಿಸಿದಲ್ಲಿ ಮೊದಲು ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಗೆ
ಪಾಲಿಕೆಗೆ ಆದೇಶಿಸಿ ಅಂತಹ ಸಂಸ್ಥೆಯನ್ನು, ಅಂಗಡಿಯನ್ನು ಸೀಲ್
ಮಾಡಿಸಲಾಗುವುದು. ಆದ್ದರಿಂದ ಎಲ್ಲರೂ ಸಾಮಾಜಿಕ ಅಂತರ,
ಶುಚಿತ್ವ ಕಾಪಾಡಿಕೊಂಡು ವಹಿವಾಟು ನಡೆಸಬೇಕೆಂದರು.
ಸರ್ಕಾರದ ಮೇ 1 ಮತ್ತು 2 ರ ಮಾರ್ಗಸೂಚಿಯಂತೆ
ಯಾವುದೇ ವಲಯವಿದ್ದರೂ, ಅಂತರ ಜಿಲ್ಲೆ, ರಾಜ್ಯ ಸಾರಿಗೆ,
ವಿಮಾನಯಾನ, ಶಾಲಾ ಕಾಲೇಜು, ಸಿನೇಮಾ, ಪಾರ್ಕ್, ಧರ್ಮ
ಸಭೆಗಳು, ಇತರೆ ಸಭೆ ಸಮಾರಂಭಗಳು, ಪ್ರಾರ್ಥನಾ
ಮಂದಿರಗಳು, ದೇವಸ್ಥಾನಗಳಲ್ಲಿ ಸೇರುವುದು, ಶಾಪಿಂಗ್
ಮಾಲ್‍ಗಳು, ಮನರಂಜನಾ ಸ್ಥಳಗಳು, ಕ್ಷೌರದ
ಅಂಗಡಿಗಳು, ಜಿಮ್, ಬಾರ್‍ಗಳು ಸೇರಿದಂತೆ ಜನಸಂದಣಿ
ಆಗುವುದನ್ನು ನಿಷೇಧಿಸಲಾಗಿದೆ.
ನಗರದಲ್ಲಿ ವಿವಿಧ ಹೋಟೆಲ್, ಲಾಡ್ಜ್‍ಗಳನ್ನು ಕೋವಿಡ್
ಐಸೋಲೇಷನ್‍ಗಾಗಿ ಬಳಸಿಕೊಳ್ಳಲಾಗುತ್ತಿದೆ. ಪಾಲಿಕೆ, ನಗರಸಭೆ
ವ್ಯಾಪ್ತಿಯಲ್ಲಿ ಸರ್ಕಾರ ನಿಗದಿಪಡಿಸಿದ ದರವನ್ನು ಈ ಲಾಡ್ಜ್‍ಗಳಿಗೆ
ಭರಿಸಲಾಗುವುದು. ಅಥವಾ ಯಾವುದೇ ಇತರೆ ಕಟ್ಟಡವನ್ನು
ಬಳಕೆ ಮಾಡಿಕೊಂಡರೂ ಸರ್ಕಾರದ ನಿಯಮಾನುಸಾರ
ಪಾವತಿಸಲಾಗುವುದು ಎಂದರು.
ಇಂದು ಅಹಮದಾಬಾದ್ ಪ್ರಯಾಣ ಹಿನ್ನೆಲೆ ಹೊಂದಿರುವ 22 ಜನರು
ಜಿಲ್ಲೆಗೆ ಆಗಮಿಸಿದ್ದು ಅವರನ್ನು ಸಹ ಕ್ವಾರಂಟೈನ್ ಮಾಡಿ
ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ
ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಶಿವನಗರದಲ್ಲಿ ಕಂಟೈನ್‍ಮೆಂಟ್ ಝೋನ್ ಸ್ಥಾಪನೆ ಬಗ್ಗೆ
ಸ್ಥಳೀಯರಿಂದ ಸ್ವಲ್ಪ ಆಕ್ಷೇಪಣೆ ಬಂದ ಹಿನ್ನೆಲೆ ಇಂದು ನಾನು, ಡಿಸಿ,
ಪಾಲಿಕೆ ಆಯುಕ್ತರು ಭೇಟಿ ನೀಡಿ ಅವರ ಕುಂದು ಕೊರತೆ ಆಲಿಸಿ,
ಆಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ತಿಳಿಸಿ
ಬಂದಿದ್ದೇವೆ. ಜೊತೆಗೆ ಕುಡಿಯುವ ನೀರಿನ ಅವರ ಬೇಡಿಕೆಗೆ ಸ್ಪಂದಿಸಿ
ಪಾಲಿಕೆ ವತಿಯಿಂದ ಮೋಟಾರ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ
ನೀಡಿದರು.
ಪತ್ರಿಕಾಗೊಷ್ಟಿಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ
ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ
ಇದ್ದರು.