ದಾವಣಗೆರೆ ಮೇ.12
ದಾವಣಗೆರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ
ಶ್ರೀರಾಮನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ
ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ
ಶ್ರೀರಾಮನಗರ ಗೋಕಟ್ಟೆ ಹೂಳೆತ್ತುವ ಕಾಮಗಾರಿಗೆ
ಚಾಲನೆ ನೀಡಲಾಯಿತು.
ಒಟ್ಟು 48 ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, ಈ ಉದ್ಘಾಟನಾ
ಸಮಾರಂಭದಲ್ಲಿ ಜಿ ಪಂ ಸದಸ್ಯೆ ಗೀತಬಾಯಿ ಗಂಗನಾಯ್ಕ,
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು
ದಾರುಕೇಶ್.ಬಿ.ಎಂ, ಗ್ರಾ.ಪಂ ಅಧ್ಯಕ್ಷೆ ದೇವಿಬಾಯಿ ಮಂಜನಾಯ್ಕ,
ಉಪಾಧ್ಯಕ್ಷ ರಾಜನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ
ದೇವೇಂದ್ರನಾಯ್ಕ, ಗಂಗೀಬಾಯಿ, ಶಾಂತಿಬಾಯಿ ಮತ್ತು ಪಂಚಾಯಿತಿ
ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು
ಭಾಗವಹಿಸಿದ್ದರು.