ದಾವಣಗೆರೆ ಮೇ.13
ಮೇ 13 ರಂದು ಪಿ.ರಮೇಶಕುಮಾರ್ ಜಂಟಿ ಕೃಷಿ
ನಿರ್ದೇಶಕರು, ಜಾಗೃತ ದಳ, ಸಚಿವಾಲಯ ವಿಭಾಗ
ಬೆಂಗಳೂರು ಇವರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ
ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಹಾಗು ರೈತ
ಸಂಪರ್ಕ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ಕೊಟ್ಟು ಬೀಜ,
ರಸಗೊಬ್ಬರ ಹಾಗು ಕೀಟನಾಶಕಗಳ ದಾಸ್ತಾನು ಮತ್ತು
ವಿತರಣೆ ಬಗ್ಗೆ ಪರೀಶೀಲನೆ ಮಾಡಿದರು.
ಪರಿಶೀಲನೆಯಲ್ಲಿ ಕಂಡು ಬಂದ ನೋಂದಣಿಯಾಗದ ಜೈವಿಕ
ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲು ಕೃಷಿ
ಅಧಿಕಾರಿಗಳು ನ್ಯಾಮತಿ ರೈತ ಸಂಪರ್ಕ ಕೇಂದ್ರ ಇವರಿಗೆ
ಸೂಚಿಸಲಾಯಿತು ಅನದಿಕೃತ/ಬಿಡಿ ಬೀಜಗಳನ್ನು ಯಾವುದೇ
ಕಾರಣಕ್ಕೂ ಮಾರಾಟ ಮಾಡಬಾರದೆಂದು ಮಾರಾಟಗಾರರಿಗೆ
ಸೂಚಿಸಲಾಯಿತು ಕಳಪೆ/ನಕಲಿ ಜೈವಿಕ ಕೀಟನಾಶಕ ಮಾರಾಟ
ಮಾಡಿದರೆ ಸದರಿ ಮಾರಾಟಗಾರರ ಪರವಾನಿಗೆಯನ್ನು
ರದ್ದುಪಡಿಸಲಾಗುವುದೆಂದು ಎಚ್ಚರಿಕೆ ನೀಡಿದರು
ಮಾರಾಟ ಮಳಿಗೆಗಳ ಮುಂದೆ ನೋಟಿಸ್ ಬೋರ್ಡ್‍ನಲ್ಲಿ
ರಸಗೊಬ್ಬರ ಮಾರಾಟದ ದರ ಮತ್ತು ದಾಸ್ತಾನು ಬಗ್ಗೆ ರೈತರಿಗೆ
ಕಾಣುವಂತೆ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕುವಂತೆ
ಸೂಚಿಸಿದರು. ರಸಗೊಬ್ಬರ ಮಾರಾಟವನ್ನು ಪಿಓಎಸ್ ಯಂತ್ರದ
ಮೂಲಕ ರೈತರಿಂದ ಆಧಾರ್ ಸಂಖ್ಯೆಯನ್ನು ಪಡೆದು ಬಿಲ್ಲನ್ನು
ರೈತರಿಗೆ ಕಡ್ಡಾಯವಾಗಿ ನೀಡಲು ಸೂಚನೆ ನೀಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 74 ಜೈವಿಕ ವಸ್ತುಗಳ
ಮಾದರಿಯನ್ನು ಸಂಗ್ರಹಿಸಿ ಈಗಾಗಲೇ ಪ್ರಯೋಗಾಲಕ್ಕೆ
ಸಲ್ಲಿಸಿದ್ದು ಅವುಗಳಲ್ಲಿ 54 ಮಾದರಿಗಳಲ್ಲಿ ಒಂದರಿಂದ 13
ರಸಾಯನಿಕ ಇರುವುದು ತಿಳಿದು ಬಂದಿರುತ್ತದೆ ಅಂತಹ
ಕಂಪನಿಗಳ ಜೈವಿಕ ವಸ್ತುಗಳಿಗೆ ಈಗಾಗಲೆ ಮಾರಾಟ
ತಡೆಯಾಜ್ಞೆ ನೀಡಿ ಮಾರಾಟಗಾರರ ಪರವಾನಿಗೆಯನ್ನು
ಅಮಾನತ್ತು ಮಾಡಲಾಗಿರುತ್ತದೆ ಇಂತಹ ಜೈವಿಕ ವಸ್ತುಗಳು
ಕಂಡುಬಂದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು
ಸೂಚಿಸಿದರು.
ಅವಧಿ ಮೀರಿದ ಕೀಟನಾಶಕಗಳನ್ನು ಮಾರಾಟ ಮಾಡಬಾರದು.
ಅಂತಹ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ
ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ದಾವಣಗೆರೆ
ಜಿಲ್ಲೆಯಲ್ಲಿ ಮೆಕ್ಕೆಜೋಳ ಮುಖ್ಯ ಬೆಳೆಯಾಗಿದ್ದು ಈಗಾಗಲೇ
ಬಿದ್ದ ಮಳೆಯಿಂದ ರೈತರು ಭೂಮಿ ಸಿದ್ದತೆ
ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿತ್ತನೆ
ಆರಂಭವಾಗಲಿದ್ದು ಅಧಿಕೃತ ಮಾರಾಟಗಾರರಿಂದ ಪ್ಯಾಕ್ ಮಾಡಿದ
ಬಿತ್ತನೆ ಬೀಜಗಳನ್ನು ಖರೀದಿಸಬೇಕೆಂದು ರೈತರಿಗೆ ಸಲಹೆ
ನೀಡಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿರುವ ಬಿತ್ತನೆ
ಬೀಜ, ಕೀಟನಾಶಕ, ಸಾವಯವ ಗೊಬ್ಬರ ಮತ್ತು ಲಘು
ಪೋಷಕಾಂಶಗಳ ಮಾದರಿಗಳನ್ನು ಕೃಷಿ ಅಧಿಕಾರಿಗಳು
ಕಡ್ಡಾಯವಾಗಿ ಸಂಗ್ರಹಿಸಿ ಸಂಬಂಧಪಟ್ಟ ಪ್ರಯೋಗಾಲಯಕ್ಕೆ
ಸಲ್ಲಿಸಿ ಅವುಗಳ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡು ನಂತರ
ರೈತರಿಗೆ ವಿತರಿಸಲು ಸೂಚಿಸಿದರು.
ತಪಾಸಣೆ ಸಮಯದಲ್ಲಿ ಜಿಲ್ಲಾ ಜಾರಿ ದಳದ ಸಹಾಯಕ ಕೃಷಿ
ನಿರ್ದೇಶಕರುಗಳಾದ ಕೆ.ಸಿರಿಯಣ್ಣ, ಸುನೀಲಕುಮಾರ ಎಂ.ಟಿ
ಹಾಗು ನ್ಯಾಮತಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಡಿ.ಗೋವಿಂದ ನಾಯಕ ರವರು ಹಾಜರಿದ್ದರು.