ದಾವಣಗೆರೆ ಮೇ.13
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಖಾಸಗಿ
ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದ
ಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳು ಖಾಸಗಿ ನರ್ಸಿಂಗ್ ಹೋಂ ಮತ್ತು
ಆಸ್ಪತ್ರೆಗಳು ತೆರೆದು ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯ
ನಿರ್ವಹಿಸಲು ಏನಾದರೂ ತೊಂದರೆ ಇದ್ದಲ್ಲಿ ಪರಿಹಾರ
ಕಂಡುಕೊಂಡು ಕೆಲಸ ನಿರ್ವಹಿಸುವ ಬಗ್ಗೆ ಚರ್ಚೆ ನಡೆಸಿದರು. ಈ
ವೇಳೆ ಎಸ್‍ಪಿ ಹನುಮಂತರಾಯ, ಜಿ ಪಂ ಸಿಇಓ ಪದ್ಮಾ ಬಸವಂತಪ್ಪ,
ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್‍ಓ
ಡಾ.ರಾಘವೇಂದ್ರಸ್ವಾಮಿ, ಡಿಎಸ್‍ಓ ಡಾ.ರಾಘವನ್, ಖಾಸಗಿ ನರ್ಸಿಂಗ್
ಹೋಂಗಳ ಸಂಘದ ಅಧ್ಯಕ್ಷ ಡಾ.ಮಾವಿನತೋಪ್, ಕಾರ್ಯದರ್ಶಿ
ಡಾ. ರವೀಂದ್ರನಾಥ್, ಪುರಂತರ ಆಸ್ಪತ್ರೆಯ ಡಾ.ಬಿನಯ್
ಕುಮಾರ್ ಸಿಂಗ್ ಸೇರಿದಂತೆ ಇತರೆ ವೈದ್ಯರು ಹಾಜರಿದ್ದರು.