ದಾವಣಗೆರೆ ಮೇ.14
ಇತರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ಅನೇಕ ವ್ಯಕ್ತಿಗಳು
ದಾವಣಗೆರೆ ನಗರಕ್ಕೆ ಕಾಲು ನಡಿಗೆ ಅಥವಾ ಖಾಸಗಿ ವಾಹನಗಳ
ಮೂಲಕ ಬರುತ್ತಿದ್ದು ಅಂತಹ ವ್ಯಕ್ತಿಗಳನ್ನು
ಗುರುತಿಸಿ/ಪತ್ತೆ ಮಾಡಿ ಆರೋಗ್ಯ ತಪಾಸಣೆ ನಡೆಸುವುದು
ಮತ್ತು ಅಂತಹವರನ್ನು ಪ್ರತ್ಯೇಕಿಸುವುದು ಅಗತ್ಯವಾಗಿದೆ.
ಈಗಾಗಲೇ ಅಂತಹ ವ್ಯಕ್ತಿಗಳನ್ನು ಚೆಕ್‍ಪೋಸ್ಟ್‍ಗಳಲ್ಲಿ
ಪತ್ತೆ ಮಾಡಲಾಗುತ್ತಿದೆ. ಆದಾಗ್ಯೂ ಕೆಲವು ವ್ಯಕ್ತಿಗಳು ಕಾಲು
ನಡಿಗೆ ಅಥವಾ ಖಾಸಗಿ ವಾಹನಗಳ ಮೂಲಕ ಚೆಕ್‍ಪೋಸ್ಟ್‍ಗಳಲ್ಲಿ
ತಪ್ಪಿಸಿಕೊಂಡು ಬರುತ್ತಿದ್ದಾರೆ. ಇಂತಹ ವ್ಯಕ್ತಿಗಳು ನಗರದಲ್ಲಿ
ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ದಾವಣಗೆರೆ
ಮಹಾನಗರಪಾಲಿಕೆಯ ಹೆಲ್ಪ್‍ಲೈನ್ ದೂರವಾಣಿ ಸಂಖ್ಯೆ 08192-
234444 ಇಲ್ಲಿಗೆ ತಿಳಿಸಬೇಕೆಂದು ಪಾಲಿಕೆ ಆಯುಕ್ತರಾದ ವಿಶ್ವನಾಥ
ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.