ದಾವಣಗೆರೆ ಮೇ.15
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ
ಅಧಿಕಾರಿಗಳು ಮತ್ತು ಎಸ್‍ಎಸ್ ಹೈಟೆಕ್ ಆಸ್ಪತ್ರೆಯ
ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ದಾವಣಗೆರೆಯಲ್ಲಿ ಪ್ರತಿದಿನ
ಸಂಗ್ರಹಿಸಲಾಗುತ್ತಿರುವ ಕೋವಿಡ್ ಸ್ವಾಬ್ ಪರೀಕ್ಷೆಗಳ ಸಂಖ್ಯೆ
ಹೆಚ್ಚಿಸುವ ಮತ್ತು ಈ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಲ್ಯಾಬ್‍ಗಳಿಗೆ
ಕಳುಹಿಸುವ ಬಗ್ಗೆ ಡಿಸಿ ಸಂಬಂಧಿಸಿದ ಅಧಿಕಾರಿಗಳಿಗೆ
ಸೂಚನೆಗಳನ್ನು ನೀಡಿದರು. ಹಾಗೂ ಎಸ್‍ಎಸ್ ಹೈಟೆಕ್ ಆಸ್ಪತ್ರೆಯ
ಪಿಸಿಆರ್ ಲ್ಯಾಬ್‍ನಲ್ಲಿ ಕೋವಿಡ್ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ
ನಡೆಸಿದರು.
ಈ ವೇಳೆ ಎಸ್‍ಪಿ ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ
ಬಸವಂತಪ್ಪ, ಎಸ್‍ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರಸಾದ್,
ಎಸ್‍ಎಸ್‍ಐಎಂಎಸ್ ನಿರ್ದೇಶಕ ಡಾ.ಕಾಳಪ್ಪನವರ್, ಡಿಹೆಚ್‍ಓ
ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ಸುಭಾಷ್‍ಚಂದ್ರ, ಡಿಎಸ್‍ಓ
ಡಾ.ರಾಘವನ್, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್ ಇತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *