ದಾವಣಗೆರೆ ಮೇ.15
2020-21 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯಡಿ ಹರಿಹರ ತಾಲ್ಲೂಕಿನಲ್ಲಿ
ವೈಯಕ್ತಿಕವಾಗಿ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಇತರೆ
ಕಾಮಗಾರಿ ಕೈಗೊಳ್ಳುವ ಸಣ್ಣ, ಅತಿ ಸಣ್ಣ, ಬಿಪಿಎಲ್ ಕಾರ್ಡ್‍ವುಳ್ಳ
ಮತ್ತು ಪ.ಜಾತಿ ಮತ್ತು ಪ.ಪಂಗಡದ ರೈತರಿಂದ ಅರ್ಜಿ
ಆಹ್ವಾನಿಸಲಾಗಿದೆ.
ತಾಲ್ಲೂಕಿನ ರೈತರು ವೈಯಕ್ತಿಕವಾಗಿ ತಮ್ಮ ಜಮೀನಿನಲ್ಲಿ
ಹೊಸದಾಗಿ ವೀಳ್ಯದೆಲೆ, ಕರಿಬೇವು, ಪಪ್ಪಾಯ, ಕಾಳುಮೆಣಸು,
ಕೋಕೋ, ತೆಂಗು, ನಿಂಬೆ, ಮಾವು, ಸಪೋಟ, ಸೀಬೆ, ಸೀತಾಫಲ,
ಬಾರೆ, ನೆಲ್ಲಿ, ಗುಲಾಬಿ ಪ್ರದೇಶ ವಿಸ್ತರಣೆ ಮತ್ತು ತೆಂಗು
ಪುನಶ್ಚೇತನ ಹಾಗೂ ಕೃಷಿ ಹೊಂಡ, ಈರುಳ್ಳಿ ಸಂಗ್ರಹಣ ಘಟಕ,
ಇಂಗುಗುಂಡಿ ನಿರ್ಮಾಣ ಇನ್ನಿತರೆ ಕಾಮಗಾರಿಗಳನ್ನು
ಕೈಗೊಳ್ಳಲು ಸಣ್ಣ, ಅತೀ ಸಣ್ಣ, ಬಿಪಿಎಲ್ ಕಾರ್ಡ್‍ವುಳ್ಳವರು ಮತ್ತು
ಪ.ಜಾತಿ ಹಾಗೂ ಪ.ಪಂಗಡದ ರೈತರಿಂದ ನರೇಗಾ
ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ರೈತರು ಈ ಯೋಜನೆಯ ಸದುಪಯೋಗ
ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗೆ ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು, ಹರಿಹರ ಹಾಗೂ
ಸಹಾಯಕ ತೋಟಗಾರಿಕೆ ಅಧಿಕಾರಿಗಳು ಕಸಬಾ ಮೊ ಸಂ :
9741255168, ಮಲೆಬೆನ್ನೂರು ಮೊ.ಸಂ: 7795103401 ಇವರನ್ನು