ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮೇ 15ರಂದು ನಡೆದ ರಾಜ್ಯ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ 58 ನೇ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಕಾಂಗ್ರೆಸ್ ಪಕ್ಷದ 42 ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮರೆದರು.
ನಂತರ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರು ಮಾತನಾಡಿ ಪ್ರತಿಯೊಬ್ಬ ಕಾಂಗ್ರಸ್ ಪಕ್ಷದ ಕಾರ್ಯಕರ್ತರುಗಳು ರಕ್ತದಾನ ಮಾಡುತ್ತಿರುವುದು ಶ್ಲಾಗನೀಯ, ಮತ್ತು ನೀವು ಮಾಡುತ್ತಿರುವ ಕೆಲಸ ಬಡರೋಗಿಗಳಿಗೆ ಅನುಕೂಲವಾಗುತ್ತದೆ. ಪ್ರತಿಯೊಬ್ಬರಿಗೂ ಮಾದರಿಯಾಗುವಂತಹ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರುಗಳು ಮಾಡಬೇಕು ಎಂದು ರಕ್ತದಾನಿಗಳಿಗೆ ರಕ್ತದಾನದ ಪ್ರಮಾಣ ಪತ್ರ ಕೊಡುವುದರ ಮುಖಾಂತರ ಅವರಿಗಳಿಗೆ ಹುರಿದುಂಬಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು;- ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರು ,ಕಾಂಗ್ರೆಸ್ ಯುವ ಮುಖಂರಾದ ಅರಕೆರೆ ಅಮಿತ್ , ಕೋಡಿಕೊಪ್ಪದ ಶಿವಣ್ಣನವರು, ನುಚ್ಚಿನ ವಾಗೇಶ್, ಕಾಂತರಾಜ್, ಗಿರೀಶ್ ಪಟೇಲ್, ಕಾಂಗ್ರೆಸ್ ಯುವ ಅಧ್ಯಕ್ಷ, ಮತ್ತು ಉಪಾಧ್ಯಕ್ಷರಾದ ಮಧುಗೌಡ, ಮತ್ತು ರಂಜಿತ್, ಮುಂತಾದವರು ಸಹ ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.