ದಾವಣಗೆರೆ: ಅಜಯ್‍ಕುಮಾರ್ ರವರಿಗೆ ಮೇಯರ್
ಅಧಿಕಾರ ಸಿಗಲು ದಾವಣಗೆರೆ ಜಿಲ್ಲಾಧಿಕಾರಿಗಳು ಪ್ರಮುಖ
ಪಾತ್ರ ವಹಿಸಿದ್ದರು ಎಂದರೆ ತಪ್ಪಾಗಲಾರದು. ಅಧಿಕಾರ ಸಿಕ್ಕ
ತಕ್ಷಣ ಇಂದು ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆ
ಬೇಡವಾಗಿದ್ದಾರೆಯೇ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ
ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.
ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬೆಳ್ಳಿ ಗಣಪತಿ,
ಮೊಬೈಲ್, ಹಣ ಹಂಚುವಾಗ ಕಾಂಗ್ರೆಸ್ ಪಕ್ಷ
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಜಿಲ್ಲಾಧಿಕಾರಿಗಳು
ಯಾವುದೇ ಕ್ರಮ ತೆಗೆದುಕೊಳ್ಳದೆ ಅಜಯ್ ಕುಮಾರ್
ಅವರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ದೂರಿರುವ
ಅವರು ಮೇಯರ್ ಚುನಾವಣೆಯ ಸಂದರ್ಭದಲ್ಲಿ
ವಿಧಾನಪರಿಷತ್ ಸದಸ್ಯರುಗಳಿಗೆ ಮತದಾನ ಹಕ್ಕು
ನೀಡುವ ಮೂಲಕ ಅಜಯ್ ಕುಮಾರ್ ಅವರಿಗೆ ಅನುಕೂಲ
ಮಾಡಿಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಅಜಯ್ ಕುಮಾರ್ ಅವರಿಗೆ ಇಷ್ಟು ದಿನ ಒಳ್ಳೆಯರಾಗಿದ್ದ
ಜಿಲ್ಲಾಧಿಕಾರಿಗಳು ಇಂದು ಏಕೆ ಬೇಡವಾದರೂ ಎಂದು
ಪ್ರಶ್ನಿಸಿರುವ ಅವರು ಅಜಯ್ ಕುಮಾರ್ ಅವರು ತಾವು
ಸಮರ್ಥ ಆಡಳಿತಗಾರರಲ್ಲ ಎಂಬುದನ್ನು
ತೋರಿಸಿಕೊಟ್ಟಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಟ್ರೇಡ್ ಲೈಸೆನ್ಸ್ ಅಭಿಯಾನ ಮಾಡಿದ್ದ ಮೇಯರ್
ಅವರು ಇಂದು ಟ್ರೇಡ್ ಲೈಸೆನ್ಸ್ ಇಲ್ಲದೇ ಇದ್ದರೂ
ವ್ಯವಹಾರ ನಡೆಸಬಹುದು ಎಂಬ ಹೊಸ ಕಾನೂನು ರೂಪಿಸಲು
ಹೊರಟಿರುವುದನ್ನು ನೋಡಿದರೆ ಮಹಾನಗರ
ಪಾಲಿಕೆಯನ್ನು ದಿವಾಳಿ ಹಂಚಿಗೆ ತಳ್ಳುವ ಎಲ್ಲಾ
ಪ್ರಯತ್ನಗಳನ್ನು ಮೇಯರ್ ಅಜಯ್ ಕುಮಾರ್
ಮಾಡಲು ಹೊರಟಂತಿದೆ.
ಈಗಾಗಲೇ ಕೊರೋನಾದಿಂದ ಲಾಕ್ ಡೌನ್ ಆಗಿ ದಾವಣಗೆರೆ
ಬಹುತೇಕ ನಾಗರೀಕರು ಸಂಕಷ್ಟ ಎದುರಿಸುತ್ತಿದ್ದು,

ನಾಗರೀಕರ ಸಂಕಷ್ಟವನ್ನು ದೂರ ಮಾಡಬೇಕಾದ
ಜಿಲ್ಲಾಧಿಕಾರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು
ಒಬ್ಬರೊಬ್ಬರನ್ನು ದೂರುತ್ತಾ ಆಡಳಿತ ವೈಫಲ್ಯದಿಂದಾಗಿ
ಜನತೆ ರೋಸಿ ಹೋಗುವಂತೆ ಮಾಡಿದ್ದಾರೆ ಎಂದು ದಿನೇಶ್
ಕೆ.ಶೆಟ್ಟಿ ದೂರಿದ್ದಾರೆ.

Leave a Reply

Your email address will not be published. Required fields are marked *