ದಾವಣಗೆರೆ ಮೇ 18
ಜಿಲ್ಲೆಯಲ್ಲಿ ಕೆಪಿಎಂಇ ಆಕ್ಟ್ ಅಡಿ ನೋಂದಣಿಯಾಗಿರುವ ಎಲ್ಲ
ಆಸ್ಪತ್ರೆ ಮತ್ತು ಕ್ಲಿನಿಕ್‍ಗಳಲ್ಲಿ ಪ್ರತಿದಿನ ತೀವ್ರ ಉಸಿರಾಟದ
ತೊಂದರೆ (ಸಾರಿ-ಎಸ್‍ಎಆರ್‍ಐ) ಮತ್ತು ಇನ್‍ಫ್ಲೂಯೆಂಜಾ ಲೈಕ್ ಇಲ್‍ನೆಸ್
(ಐಎಲ್‍ಐ) ಪ್ರಕರಣಗಳನ್ನು ಕಡ್ಡಾಯವಾಗಿ ಆ್ಯಪ್‍ನಲ್ಲಿ
ನಮೂದಿಸಬೇಕು.
ಈಗಾಗಲೇ 396 ಆಸ್ಪತ್ರೆ, ಕ್ಲಿನಿಕ್‍ಗಳಿಗೆ ಸಂಬಂಧಿಸಿದ ಆ್ಯಪ್‍ನ
ಯೂಸರ್ ಐ.ಡಿ ಮತ್ತು ಪಾಸ್‍ವರ್ಡ್ ನೀಡಲಾಗಿದ್ದು ಪ್ರತಿದಿನದ
ಎಸ್‍ಎಆರ್‍ಐ ಮತ್ತು ಐಎಲ್‍ಐ ಕೇಸ್‍ಗಳನ್ನು ದಾಖಲಿಸಬೇಕು.
ಪ್ರತಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ಮುಖ್ಯಸ್ಥರು ಮೇ 19 ರ
ಸಂಜೆಯೊಳಗಾಗಿ ಆ್ಯಪ್‍ನ್ನು ಬಳಸಿಕೊಂಡು ಅಪ್‍ಡೇಟ್
ಮಾಡಬೇಕು. ಇಲ್ಲದಿದ್ದಲ್ಲಿ ಅಂತಹವರ ನೋಂದಣಿಯನ್ನು
ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಎಚ್ಚರಿಕೆ ನೀಡಿದ್ದಾರೆ.