ದಾವಣಗೆರೆ ಮೇ.18
ದಾವಣಗೆರೆಯಲ್ಲಿ ಇಂದು ಒಂದು ಹೊಸ ಕೊರೊನಾ ಪಾಸಿಟಿವ್
ಪ್ರಕರಣ ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ
ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು
ಉದ್ದೇಶಿಸಿ ಮಾತನಾಡಿದ ಅವರು ರೋಗಿ ಸಂಖ್ಯೆ 1186 ಇವರಿ ಹೊನ್ನಾಳಿ
ಮೂಲದ 24 ವರ್ಷದ ಯುವಕ ಆಗಿದ್ದು ಇವರು ಮಹಾರಾಷ್ಟ್ರದ
ಲಾತೂರ್‍ನಲ್ಲಿ ಕೃಷಿ ಕಾರ್ಮಿಕರಾಗಿ ಹಾಗೂ ಸೊಲ್ಲಾಪುರದಲ್ಲಿ
ಒಂದೂವರೆ ತಿಂಗಳು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು,
ಮೈಸೂರು ಮತ್ತು ಹೊಸನಗರದ
ಸಹೋದ್ಯೋಗಿಗಳೊಂದಿಗೆ ಹರಿಹರಕ್ಕೆ ಬಂದಿದ್ದು, ಅಂದೇ
ಹರಿಹರದ ಆರೋಗ್ಯಾಧಿಕಾರಿಗಳು ಅವರನ್ನು ಆಸ್ಪತ್ರೆಯಲ್ಲಿ
ಕ್ವಾರಂಟೈನ್ ಮಾಡಿ ಮೇ 11 ರಂದು ಅವರ ಗಂಟಲು ದ್ರವ
ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ನಿನ್ನೆ
ಮಧ್ಯರಾತ್ರಿ ಹೊತ್ತಿಗೆ ಅವರ ಫಲಿತಾಂಶ ಪಾಸಿಟಿವ್ ಎಲಂದು ಬಂದಿದ್ದು
ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೋಗಿ ಬಂದಿರುವ
ಪ್ರವಾಹ ಹಿನ್ನೆಲೆ ಹೊಂದಿದ್ದಾರೆ. ಇವರನ್ನು ಹರಿಹರದಲ್ಲಿ ಈಗಾಗಲೇ
ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದು, ಇದೀಗ ಜಿಲ್ಲಾ ಕೋವಿಡ್
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರೋಗಿಯ 6
ಪ್ರಾಥಮಿಕ ಮತ್ತು 8 ದ್ವಿತೀಯ ಸಂಪರ್ಕ ಗುರುತಿಸಿ ಇವರ
ಸ್ಯಾಂಪಲ್‍ಗಳನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 84 ಸಕ್ರಿಯ ಪ್ರಕರಣಗಳಿದು,್ದ 1437
ಮಾದರಿಗಳ ಫಲಿತಾಂಶ ಬಾಕಿ ಇದೆ. ಇಂದು 401 ಮಾದರಿಗಳನ್ನು
ಪರೀಕ್ಷೆಗೆ ಕಳುಹಿಸಲಾಗಿದೆ. ಇವತ್ತು ತಡರಾತ್ರಿವರೆಗೆ 900 ರಿಂದ
1000 ವರದಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.
ಒಟ್ಟು ಒಂಭತ್ತು ಕಂಟೈನ್‍ಮೆಂಟ್ ಝೋನ್ : ಪೊಲೀಸ್ ಕ್ವಾಟ್ರಸ್
ಹೊಸ ಕಂಟೈನ್‍ಮೆಂಟ್ ಝೋನ್ ಆಗಿದ್ದು ಬಾಷಾನಗರ,
ಜಾಲಿನಗರ, ಇಮಾಮ್‍ನಗರ, ಬೇತೂರು ರಸ್ತೆ, ಎಸ್‍ಪಿಎಸ್ ನಗರ,
ಶಿವನಗರ, ರೈತರ ಬೀದಿ ಮತ್ತು ಕೆಟಿಜೆ ನಗರ ಒಟ್ಟು ಒಂಬತ್ತು
ಕಂಟೈನ್ ಝೋನ್‍ಗಳಲ್ಲಿ ಸಕ್ರಿಯ ಸರ್ವೇಲೆನ್ಸ್ ಕಾರ್ಯ
ನಡೆಯುತ್ತಿದ್ದು, ಸಾರಿ ಮತ್ತು ಐಎಲ್‍ಐ ಪ್ರಕರಣಗಳನ್ನು ದಾಖಲಿಸಿ
ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಲಾಗುತ್ತಿದೆ.
ರೋಗ ನಿಯಂತ್ರಣ ಕುರಿತಾಗಿ ಇಂದು ತುರ್ತು ಸಭೆ
ಕರೆದಿದ್ದು ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ
ನೀಡಲಾಗಿದೆ.