ಜಿಲ್ಲೆಯಲ್ಲಿ ಗೃಹ ಇಲಾಖೆ ನಿರ್ದೇಶನದಂತೆ ಏನೆಲ್ಲ
ಸೌಲಭ್ಯಗಳು, ಸೇವೆಗಳು ದೊರೆಯಲಿವೆ ಎಂದು
ತಿಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ರಂಜಾನ್ ವೇಳೆ ಅನ್ಯ ಕೋಮಿನ ನಗರ ಚನ್ನಬಸಪ್ಪ
ಅಂಗಡಿಯಲ್ಲಿ ಬಟ್ಟೆ ಖರೀದಿಸಬಾರದೆಂಬ ಮುಸ್ಲಿಂ ಬಾಂಧವರ ವಿಡಿಯೋ
ವೈರಲ್ ಆದ ಹಿನ್ನೆಲೆ ಕೆಟಿಜೆ ನಗರ, ಬಸವನಗರ ಮತ್ತು
ಹರಿಹರದಲ್ಲಿ ಒಟ್ಟು 3 ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಈ
ಕುರಿತು ಮೇ 17 ರಂದು ಮುಸ್ಲಿಂ ಧರ್ಮದ ಮುಖಂಡರೊಂದಿಗೆ
ಶಾಂತಿ ಸಭೆ ಸಹ ನಡೆಸಲಾಗಿದ್ದು, ಮುಖಂಡರು ಈ ಬಾರಿ ಕೋವಿಡ್
ಹಿನ್ನೆಲೆ ಅನ್ಯ ಧರ್ಮದವರಂತೆ ರಂಜಾನ್ ಆಚರಣೆಯನ್ನು
ಸರಳವಾಗಿ ಆಚರಿಸುವಂತೆ ಸಮಾಜದಲ್ಲಿ ಕರೆ ನೀಡಲಾಗಿದೆ. ಆದರೆ
ಕೆಲವು ಯುವಕರು ಈ ರೀತಿ ಅನ್ಯ ಕೋಮಿನ ಅಂಗಡಿಯಲ್ಲಿ ಬಟ್ಟೆ
ಖರೀದಿಸಬಾರದೆಂಬ ಸಂದೇಶವನ್ನು ಹರಡಿದ್ದಾರೆ. ಇಂತಹ
ಸಂದೇಶಗಳ ವಿರುದ್ದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ
ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಹೀಗೆ
ಅನಾವಶ್ಯಕವಾದ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ
ಹರಡುವವರೂ ಸಹ ಒಮ್ಮೆ ಯೋಚಿಸಬೇಕು. ಇವರ ವಿರುದ್ದ
ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿ
ಡಾ.ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್ ಇದ್ದರು.