ದಾವಣಗೆರೆ ಮೇ 18
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ
ಆಯೋಗವು ಕೋವಿಡ್-19 ಅವಧಿಯಲ್ಲಿ ಮಕ್ಕಳ ಹಕ್ಕುಗಳ
ಉಲ್ಲಂಘನೆಯ ಪ್ರಕರಣಗಳಿಗಾಗಿ ಸಾರ್ವಜನಿಕರ
ಉಪಯೋಗಕ್ಕಾಗಿ ಮೇ 18 ರಿಂದ ಸಹಾಯವಾಣಿಯನ್ನು
ಜಾರಿಗೊಳಿಸಿದೆ.
ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲೆ ನಡೆಯುವ
ಅತ್ಯಾಚಾರ/ಲೈಂಗಿಕ ಕಿರುಕುಳ/ಶೋಷಣೆ, ಮಕ್ಕಳ ಸಾಗಾಟ,
ಮಕ್ಕಳ ಮಾರಾಟ, ಕಾಣೆಯಾಗುವುದು ಹಾಗೂ ಶಾಲೆಗಳಿಗೆ
ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಸೋಮವಾರ ದಿಂದ
ಶನಿವಾರದವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05
ಗಂಟೆಯವರೆಗೆ ಸಹಾಯವಾಣಿ ಸಂಖ್ಯೆ: 080-47181177 ಸಂರ್ಪಕಿಸಿ
ಸಾರ್ವಜನಿಕರು ದೂರು ದಾಖಲಿಸಬಹುದೆಂದು ಜಿಲ್ಲಾ ಮಕ್ಕಳ
ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.