ದಾವಣಗೆರೆ ಜಿಲ್ಲೆ;- ಮೇ 18 ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ, ಏಕೆಂದರೆ ನಾವುಗಳು ಕಾಂಗ್ರೆಸ್ ಕಾರ್ಯಕರ್ತರುಗಳು ಅನ್ನುವ ಕಾರಣಕ್ಕೆ ನಮಗೆ ಆಹಾರದ
ಕಿಟ್ಟುಗಳನ್ನು ಕೊಟ್ಟಿಲ್ಲವೆ ಎಂದು ದಿನಾಂಕ 18/05/2020ರಂದು ಇಂದು ಎರಡು ವಾರ್ಡಿನ ನೂರಾರು ಕಾರ್ಯಕರ್ತರುಗಳು ಸೇರಿ ಹಾಲಿ ಸದಸ್ಯರಾದ ಮೇಲಪ್ಪ, ಮಾಜಿ ಸದಸ್ಯರಾದ ಹೆಚ್.ಬಿ ಅಣ್ಣಪ್ಪನವರುಗಳನ್ನು ಕರೆಸಿ ಅವರುಗಳ ಎದರುಗಡೆ ಅಳಲನ್ನು ತೋಡಿಕೊಂಡರು.
ನಂತರ ಮಾಜಿ ಸದಸ್ಯರಾದ ಹೆಚ್.ಬಿ ಅಣ್ಣಪ್ಪ ಮಾತನಾಡಿ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಹೇಳಿರುವ ಹಾಗೆ ಬಡತನ ಮತ್ತು ಬಡತನದ ರೇಖೆಗಿಂತ ಕೆಳವರ್ಗದ ಕೂಲಿ ಕಾರ್ಮೀಕರುಗಳು ಎಲ್ಲಿ ಹೆಚ್ಚಾಗಿ ವಾಸವಾಗಿರುತ್ತಾರೋ ಅಲ್ಲಿ ಪಕ್ಷಾತೀತವಾಗಿ ಅಂದರೆ ಬಿ.ಜೆ.ಪಿ, ಕಾಂಗ್ರೆಸ್ ಅನ್ನದೆ ಅವರುಗಳಿಗೆ ಅನ್ನದಧಾಹವನ್ನು ನೀಗಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಆದರೆ ಹೊನ್ನಾಳಿಯ ಶಾಸಕರು ಅವರ ಕಾರ್ಯಕರ್ತರುಗಳಿಗೆ ಮಾತ್ರ ಕೊಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಈಗಲಾದರೂ ತಾಲೂಕು ದಂಡಾಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು ಈ ವಾರ್ಡಗಳಿಗೆ ಬಂದು
ಪರಿಶೀಲಿಸಿ, ಕೆಲಸವಿಲ್ಲದೆ ಹಸುವಿನಿಂದ ಬಳಲುತ್ತಿರುವ ಬಡವರ್ಗಕ್ಕೆ ಆಹಾರದ
ಕಿಟ್ಟುಗಳನ್ನು ಕೊಡಬೇಕೆಂದು ಅವರುಗಳಿಗೆ ವತ್ತಾಯ ಮಾಡುತ್ತೆವೆ ಎಂದು ಜಮಾವಣೆಗೊಂಡ ಜನಗಳಿಗೆ ಸಮಾದಾನ ಮಾಡಿ ನಿಮ್ಮ ನಿಮ್ಮ
ಮನೆಗಳಿಗೆ ತೆರಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತಿಯಲ್ಲಿದ್ದವರು;- ಹಾಲಿ ಸದಸ್ಯರಾದ ಮೇಲಪ್ಪ, ಮಾಜಿ ಸದಸ್ಯರಾದ ಹೆಚ್.ಬಿ ಅಣ್ಣಪ್ಪ, ಶಿವಾಜಪ್ಪ,
ಗೋಪಾಲಪ್ಪ, ರವಿ, ಮೌಲಾ, ಮುಂತಾದವರು ಸಹ ಭಾಗಿಯಾಗಿದ್ದರು.