ದಾವಣಗೆರೆ ಮೇ 18
ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿರುವ ಅನಧಿಕೃತ ದಾಸ್ತಾನು
5.40 ಕ್ವಿಂಟಾಲ್ ಗೋಧಿಯನ್ನು ಮೇ 26 ರಂದು ಎಪಿಎಂಸಿ
ಆವರಣದಲ್ಲಿರುವ ಕೆಎಫ್‍ಸಿಎಸ್‍ಸಿ ಸಗಟು ಮಳಿಗೆಯಲ್ಲಿ ಬಹಿರಂಗ
ಹರಾಜು ಮಾಡಲಾಗುವುದು.
ಅನೌಪಚಾರಿಕ ಪಡಿತರ ಪ್ರದೇಶದ ಕೆಎಸ್‍ಆರ್‍ಟಿಸಿ ಕೆ.ಆರ್.ರಸ್ತೆಯ
ಹತ್ತಿರ ಮುದೇಗೌಡರ ಶಾಲೆ ಎದುರುಗಡೆ ಇರುವ
ಗೋದಾಮು, ದಾವಣಗೆರೆ ಇಲ್ಲಿ ಪೊಲೀಸ್ ಉಪ ನಿರೀಕ್ಷಕರು,
ಕಾನೂನು ಮತ್ತು ಸುವ್ಯವಸ್ಥೆ, ಅಜಾದ್‍ನಗರ ಪೊಲೀಸ್ ಠಾಣೆ,
ಸಹಾಯಕ ನಿರ್ದೇಶಕರು ಹಾಗೂ ಆಹಾರ ನಿರೀಕ್ಷಕರು ಭಾಗ-1
ಇವರು ಏ.17 ರಂದು ಜಪ್ತಿ ಮಾಡಲಾದ 5.40 ಕ್ವಿಂಟಾಲ್
ಗೋಧಿಯನ್ನು ಮೇ 26 ರ ಮಧ್ಯಾಹ್ನ 2 ಗಂಟೆಗೆ ಕೆಎಫ್‍ಸಿಎಸ್‍ಸಿ
ಸಗಟು ಮಳಿಗೆ ಅನೌಪಚಾರಿಕ ಪಡಿತರ ಪ್ರದೇಶದ ಸಗಟು
ಮಳಿಗೆ-1, ಎಪಿಎಂಸಿ ಆವರಣ, ದಾವಣಗೆರೆ ಇಲ್ಲಿ ಸಹಾಯಕ ನಿರ್ದೇಶಕರ
ಸಮಕ್ಷಮದಲ್ಲಿ ಷರತ್ತುಗಳಿಗೆ ಒಳಪಟ್ಟು ಹರಾಜು
ಮಾಡಲಾಗುವುದು. ಈ ಹರಾಜು ಪ್ರಕ್ರಿಯೆಯಲ್ಲಿ
ಆಸಕ್ತಿಯುಳ್ಳ ಸಾರ್ವಜನಿಕರು ಭಾಗವಹಿಸಬಹುದೆಂದು
ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರ
ಕಚೇರಿ ಪ್ರಕಟಣೆ ತಿಳಿಸಿದೆ.