ದಾವಣಗೆರೆ ಮೇ.19
   ಕೋವಿಡ್-19 ಹಿನ್ನೆಲೆ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾದ
ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಆಟೋರಿಕ್ಷಾ
ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ರೂ. 5,000 ಗಳ ಪರಿಹಾರ
ಧನವನ್ನು ನೀಡಲು ಮುಂದಾಗಿದ್ದು, ಈ ವಾಹನಗಳ ಚಾಲಕರಿಂದ
ಅರ್ಜಿ ಆಹ್ವಾನಿಸಿದೆ.

   ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿಯೇ ಸಲ್ಲಿಸಬೇಕು.
ಆಟೋರಿಕ್ಷಾ, ಟ್ಯಾಕ್ಸೀ ಚಾಲನೆ ಮಾಡಲು ನೀಡಿರುವ ಅನುಜ್ಞಾ ಪತ್ರ,
ಮತ್ತು ಬ್ಯಾಡ್ಜ್ ಹೊಂದಿರುವವರು ಹಾಗೂ ವಾಹನ, ನೋಂದಣಿ
ಸಂಖ್ಯೆ, ಈ ಮೂರು ಅಂಶಗಳು ಅನನ್ಯವಾಗಿರುವವರು ಮಾತ್ರ
ಅರ್ಜಿ ಸಲ್ಲಿಸಬಹುದು.
   ಫಲಾನುಭವಿಗಳು ಆಟೋರಿಕ್ಷಾ/ಟ್ಯಾಕ್ಸಿ ಚಾಲಕÀರಾಗಿದ್ದು 
ದಿನಾಂಕ: 24-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರ
ಮತ್ತು ಸುಸ್ಥಿತಿ ಪ್ರಮಾಣ ಪತ್ರ(ಜಿiಣಟಿess ಛಿeಡಿಣiಜಿiಛಿಚಿಣe) ವಿವರಗಳನ್ನು
ಸೇವಾ ಸಿಂಧು ಪೋರ್ಟಲ್‍ನಲ್ಲಿ ನಮೂದಿಸಬೇಕು.
    ಆಟೋರಿಕ್ಷಾ/ ಟ್ಯಾಕ್ಸೀ ಚಾಲಕರ ಆಧಾರ ಕಾರ್ಡ್, ಬ್ಯಾಂಕ್ ಖಾತೆ
ವಿವರ, ಐಎಫ್‍ಎಸ್‍ಸಿ ಕೋಡ್, ಎಂಐಸಿಆರ್ ಕೋಡ್ ತಪ್ಪದೇ ಪೋರ್ಟಲ್‍ನಲ್ಲಿ
ನಮೂದಿಸಬೇಕು. ಚಾಲಕರ ವಾಹನ ನೋಂದಣಿ ಸಂಖ್ಯೆ
ನಮೂದಿಸಬೇಕು ಹಾಗೂ ಆಟೋರಿಕ್ಷಾ/ಟ್ಯಾಕ್ಸಿ ಚಾಲಕರು ತಮ್ಮ
ದೈನಂದಿನ ಉದ್ಯೋಗ ನಡೆಸಲಾಗದೇ ಆದಾಯ
ಕಳೆದುಕೊಂಡ ಬಗ್ಗೆ ಪೋರ್ಟಲ್‍ನಲ್ಲಿ ಸ್ವಯಂ ಘೋಷಣೆ
ಪತ್ರವನ್ನು ನಮೂದಿಸಬೇಕು ಎಂದು ದಾವಣಗೆರೆ ಪ್ರಾದೇಶಿಕ
ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *