ದಾವಣಗೆರೆ ಮೇ.19
ದಾವಣಗೆರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಐಗೂರು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮೇ 19 ರಿಂದ ರೈತರ
ಜಮೀನಿನಲ್ಲಿ ಬದು ನಿರ್ಮಾಣದ ಮಾಸಾಚರಣೆ ಅಂಗವಾಗಿ ಐಗೂರು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೇತ್ರ ಬದು ನಿರ್ಮಾಣ
ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ
ದಾರುಕೇಶ್.ಬಿ.ಎಂ ಇವರು ಚಾಲನೆ ನೀಡಿ ಮಾತನಾಡಿ, ಸರ್ಕಾರದ ಈ ಬದು
ನಿರ್ಮಾಣ ಮಾಸಾಚರಣೆ ಕಾರ್ಯಕ್ರಮದಿಂದ ರೈತರು
ಉಪಯೋಗ ಪಡೆದುಕೊಂಡಲ್ಲಿ ತಮ್ಮ ಜಮೀನುಗಳ
ಫಲವತ್ತತೆ, ಮಣ್ಣಿನ ರಕ್ಷಣೆ, ಮತ್ತು ಭೂಸವಕಳಿ
ತಡೆಯುವುದು ಮತ್ತು ಮಳೆ ನೀರು ಜಮೀನಿನಲ್ಲಿ
ಹಿಂಗಿಸುವುದು ಸಾಧ್ಯವಾಗಿ ಉತ್ತಮ ಫಸಲು ಪಡೆಯಲು
ಅತ್ಯಂತ ಉಪಯುಕ್ತ ಕಾರ್ಯಕ್ರಮವಾಗಿದೆ ಎಂದರು.
ಒಟ್ಟು 82 ಜನ ಕೂಲಿಗಾರರು ಈ ಬದು ನಿರ್ಮಾಣದಲ್ಲಿ
ಭಾಗವಹಿಸಿದ್ದು. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.