ದಾವಣಗೆರೆ ಮೇ.18
   ದಾವಣಗೆರೆಯಲ್ಲಿ ಇಂದು 22 ಹೊಸ ಕೊರೊನಾ ಪಾಸಿಟಿವ್ ಪ್ರಕರಣ
ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನು
ಉದ್ದೇಶಿಸಿ ಮಾತನಾಡಿದ ಅವರು ಕೆಲ ಪ್ರಕರಣಗಳನ್ನು
ಹೊರತುಪಡಿಸಿದರೆ ಇನ್ನುಳಿದವೆಲ್ಲ ಹಳೇ ರೋಗಿಗಳ
ಸಂಪರ್ಕಿತರಾಗಿರುತ್ತಾರೆ. ಇಮಾಮ್‍ನಗರ ಕಂಟೈನ್‍ಮೆಂಟ್
ಝೋನ್‍ಗೆ ಹತ್ತಿರವಾದ ಆನೆಕೊಂಡ ಮತ್ತು ವಿನಾಯಕನಗರ
ಸೇರಿ ಎರಡು ಹೊಸ ಪ್ರದೇಶಗಳಲ್ಲಿ ಪ್ರಕರಣ ದಾಖಲಾಗಿದ್ದು ಇಲ್ಲಿ
ಸಹ ಹೊಸದಾಗಿ ಕಂಟೈನ್‍ಮೆಂಟ್ ಝೋನ್ ಮಾಡಲಾಗುವುದು.
ಇಂದಿಗೆ ಜಿಲ್ಲೆಯಲ್ಲಿ 106 ಸಕ್ರಿಯ ಪ್ರಕರಣಗಳಿದ್ದು, ಇಂದು
647 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಲಾಗಿದೆ. ಇಂದು 732 ವರದಿಗಳು ನೆಗೆಟಿವ್ ಎಂದು ಬಂದಿದ್ದು
ಸಂಚಿತವಾಗಿ ಇಲ್ಲಿಯವರೆಗೆ 3149 ನೆಗೆಟಿವ್ ಎಂದು ವರದಿ ಬಂದಿದೆ. ಒಟ್ಟು
1430 ವರದಿಗಳು ಬರುವುದು ಬಾಕಿ ಇದೆ ಎಂದರು.
ಮೂರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ : ರೋಗಿ
ಸಂಖ್ಯೆ 585, 616 ಮತ್ತು 635 ಈ ಮೂರು ಜನ ಸೋಂಕಿತರು
ಸಂಪೂರ್ಣ ಗುಣಮುಖರಾಗಿದ್ದಾರೆ. ಶಿಷ್ಟಾಚಾರದಂತೆ ಎಲ್ಲ
ಪರೀಕ್ಷೆಗಳನ್ನು ನಡೆಸಲಾಗಿದೆ. ಇವರು ಏ.30 ರಂದು
ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ರಾಜ್ಯ ಸರ್ಕಾರದೊಂದಿಗೂ
ಮಾತನಾಡಿದ್ದು ಇವರನ್ನು ಬಿಡುಗಡೆಗೊಳಿಸಲು ಕ್ರಮ
ವಹಿಸಲಾಗುವುದು ಎಂದರು. ಹಾಗೂ ಇನ್ನೂ ಮೂರು ಜನರು
ಬಿಡುಗಡೆಗೆ ಸಿದ್ದರಾಗಿದ್ದಾರೆ. ಇದಕ್ಕೆ ಹಗಲಿರುಳು
ಶ್ರಮಿಸುತ್ತಿರು ಸಿಜಿ ಆಸ್ಪತ್ರೆ ವೈದ್ಯರು, ಶುಶ್ರೂಷಕರು
ಹಾಗೂ ಎಲ್ಲ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಹೃದಯ ರೋಗದಿಂದ ಬಳಲುತ್ತಿದ್ದ 18 ವರ್ಷದ ಯುವತಿ
ರೋಗಿ ಸಂಖ್ಯೆ 581 ಇವರ ಕೋವಿಡ್ ಪರೀಕ್ಷೆ ಎರಡು
ಸುತ್ತುಗಳಲ್ಲೂ ನೆಗೆಟಿವ್ ಎಂದು ಬಂದಿದೆ. ಆದರೆ ಹೃದ್ರೋಗದ
ಕಾರಣಕ್ಕಾಗಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಇವರನ್ನು ನಾಳೆ
ವೈದ್ಯರ ಸಲಹೆ ಹಾಗೂ ಸರ್ಕಾರದ ಸೂಚನೆ ಮೇರೆಗೆ ನಗರದ
ಬಾಪೂಜಿ ಅಥವಾ ಎಸ್‍ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ ಚಿಕಿತ್ಸೆ
ಮುಂದುವರೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಇಂದಿನ ರೋಗಿ ಸಂಖ್ಯೆ 1247 ರೋಗಿ ಸಂಖ್ಯೆ 694 ರ ಸಂಪರ್ಕ,
ರೋಗಿ ಸಂಖ್ಯೆಗಳಾದ 1248 ,1249, 1250 ಇವರು ರೋಗಿ ಸಂಖ್ಯೆ
662ರ ಸಂಪರ್ಕ, ರೋಗಿ ಸಂಖ್ಯೆ 1251 ಕಂಟೈನ್‍ಮೆಂಟ್
ಝೋನ್‍ನ ಸಂಪರ್ಕ, ರೋ.ಸಂ. 1252, 1253 ಇವರು ರೋಗಿ
ಸಂಖ್ಯೆ 662ರ ಸಂಪರ್ಕ, ರೋ.ಸಂ 1254 1255 ಇವರು ರೋಗಿ
ಸಂಖ್ಯೆ 633 ರ ಸಂಪರ್ಕಿತರಾಗಿದ್ದಾರೆ.
ರೋಗಿ ಸಂಖ್ಯೆ 1292, 1293 ಇವರು ರೋಗಿ ಸಂಖ್ಯೆ 976 ರ
ಸಂಪರ್ಕಿತರು, ರೋಗಿ ಸಂಖ್ಯೆ 1309 ರೋ.ಸಂ 663 ರ
ಸಂಪರ್ಕಿತರು. ರೋ.ಸಂ 1365 ಮತ್ತು 1366 ಅಂತರ ಜಿಲ್ಲಾ
ಪ್ರಯಾಣ ಹಿನ್ನೆಲೆ, ರೋಗಿ ಸಂಖ್ಯೆ 1368 ಅಂತರ ರಾಜ್ಯ ಕೇರಳ
ಪ್ರಯಾಣ ಹಿನ್ನೆಲೆ, 1369 ಅಂತರ ರಾಜ್ಯ ಅಹಮದಾಬಾದ್, ರೋ.ಸಂ
1370 ಮತ್ತು 1371 ರೋಗಿ ಸಂಖ್ಯೆ 976 ರ ಸಂಪರ್ಕ, ರೋ.ಸಂ
1372 ಇವರು ರೋಗಿ ಸಂಖ್ಯೆ 556 ರ ಸಂಪರ್ಕ, ರೋ.ಸಂ 1373
ಇವರು ರೋಗಿ ಸಂಖ್ಯೆ 662 ರ ಸಂಪರ್ಕಿತರು. ರೋಗಿ ಸಂಖ್ಯೆ
1378 ಕಂಟೈನ್‍ಮೆಂಟ್ ಝೋನ್‍ನ ಸಂಪರ್ಕ ಹೊಂದಿದ್ದಾರೆ ಎಂದು
ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಗುಜರಾತ್ ವೈರಸ್, ಮೋದಿ ವೈರಸ್ ಎಂದು ವಿಡಿಯೋ ಮಾಡಿ ಸಾಮಾಜಿಕ
ಜಾಲತಾಣದಲ್ಲಿ ಹರಿಬಿಟ್ಟ ರಘು ದೊಡ್ಮನಿ ಎಂಬುವರರ ವಿರುದ್ದ
ವಿದ್ಯಾನಗರ ಪೊಲೀಸ್ ಠಾಣೆಯ ವಿನಯ್ ಎಂಬ ಪೊಲೀಸ್ ಇನ್ಸ್‍ಪೆಕ್ಟರ್
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ
ಸ್ಯು ಮೋಟೊ ಪ್ರಕರಣ ದಾಖಲಿಸಿಕೊಂಡು ಈ ಆರೋಪಿಯನ್ನು
ದಸ್ತಗಿರಿ ಮಾಡಿ, ವಿಚಾರಣೆ ಕೈಗೊಳ್ಳಲಾಗುತ್ತಿದೆ. ಹಾಗೂ ಈ ಆರೋಪಿ
ವಿರುದ್ದ ಯುವ ಬಿಜೆಪಿ ಯಿಂದ ಸಹ ದೂರು ಬಂದಿದೆ ಎಂದು
ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್‍ಓ
ಡಾ.ರಾಘವೇಂದ್ರ ಸ್ವಾಮಿ, ಎಸಿ ಮಮತಾ ಹೊಸಗೌಡರ್, ಜಿಲ್ಲಾ ಕೋವಿಡ್
ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಸ್‍ಓ ಡಾ.ರಾಘವನ್
ಇದ್ದರು.

Leave a Reply

Your email address will not be published. Required fields are marked *