ದಾವಣಗೆರೆ ಜಿಲ್ಲೆ;- ಮೇ 19 ಹೊನ್ನಾಳಿ ಪಟ್ಟಣ ಮದ್ಯಭಾಗದಲ್ಲಿರುವ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಡಿಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಶ್ರೀ ಲಕ್ಷೀ ವೆಂಕಟೇಶ್ವರ ಎಂಟರ್ ಪ್ರೈಸಸ್ (ಮ್ಯಾನ್ ಪವರ್ ಏಜಸ್ಸಿ) ನಂದಿನಿ ಲೇಔಟ್ ಬೆಂಗಳೂರು ಇವರು ಹೊರಗುತ್ತಿಗೆ ಆಧಾರದ ಮೇಲೆ 24 ಜನರನ್ನು (10ಜನ) ಮಹಿಳೆಯರು 14 ಜನ ಪುರಷರನ್ನು ಗ್ರೂಪ್ ಡಿ ಹಾಗೂ ನಾನ್ ಕ್ಲೀನಿಕ್ ನೌಕರರಾಗಿ ಸೇವೆಗೆ ತಗೆದುಕೊಂಡಿದ್ದು,ಅವರು ಆಸ್ಪತ್ರೆಯ ವಾತಾವರಣವನ್ನು ಸ್ವಚ್ಚಗೊಳಿಸುವುದು ಹಾಗೂ ಆಸ್ಪತ್ರೆ ಬರುವ ನೂರಾರು ರೋಗಿಗಳಿಗೆ ಆರೈಕೆ ಮಾಡುವುದು ಕಚೇರಿ ಕೆಲಸಗಳಿಗೆ ಸಹಾಯಕರಾಗಿ ಹಲವಾರು ರೀತಿಯಲ್ಲಿ ಕೆಲಸವನ್ನು ಪ್ರಮಾಣಿಕತೆಯಿಂದ ಯಾವುದೇ ತೊಂದರೆಯಾಗದಂತೆ ಸುಮಾರು 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ಗುತ್ತಿಗೆದಾರನು ಸುಮಾರು 10 ತಿಂಗಳಿಂದ ಸಂಬಳವನ್ನು ಕೊಡದೇ ಸತಾಹಿಸುತ್ತಾ ತೊಂದರೆಯನ್ನು ಕೊಡುತ್ತಾ ಬೆಂಗಳೂರಿನಲ್ಲಿ ಕುಳಿತಿದ್ದಾರೆ, ಹಾಗೂ ನಮ್ಮ ದಿನನಿತ್ಯ ಸಹಿ ಮಾಡುವ ಬುಕ್/ ಲೆಡ್ಜರ್ ಹಾಗೂ ಪಾಸ್ ಬುಕ್ ಸಹ ತಗೆದುಕೊಂಡು ನಿಮಗೆ ಸಂಬಳ ಮಾಡುತ್ತೇನೆ ಎಂದು ಎಲ್ಲಾ ದಾಖಲೆಯನ್ನು ತೆಗೆದುಕೊಂಡು ಹೋಗಿ ಸಂಬಳವನ್ನು ಮಾಡದೇ ಇವತ್ತು ಬರುತ್ತೆನೆ, ನಾಳೆ ಬರುತ್ತೇನೆ ಎಂದು ಹಾರಿಕೆಯ ಉತ್ತರವನ್ನು ಕೊಡುತ್ತಾರೆ, ಆದರೆ
ಈಗ ನಾವು ಬಡತನ ರೇಖೆಗಿಂತ ಕೆಳಗಿನವರು ನಾವುಗಳು ಈ ವೃತ್ತಿಯೇ ನಮಗೆ
ಜೀವನಕ್ಕೆ ಮಾರ್ಗೋಪಾಯ, ಹಾಗೂ ನಾವು ಬಾಡಿಗೆ ಮನೆಯಲ್ಲಿದ್ದೆವೆ ಬಾಡಿಗೆ ಕಟ್ಟಲಿಕ್ಕೆ ಆಗದೇ ಸಂಸಾರ ನಡೆಸಲಿಕ್ಕೆ ಆಗದೇ
ವಿಷವನ್ನು ಕುಡಿಯುವ ಪರಿಸ್ಥಿತಿ ಬಂದು ಬಿಟ್ಟಿದೆ, ಇಲ್ಲಿವರೆಗೂ ಇ.ಎಸ್.ಐ ಹಾಗೂ ಪಿ.ಎಫ್.ಐ ಸೌಲಭ್ಯಗಳನ್ನು ನೀಡಿರುವುದಲ್ಲಿ ಇತ್ತಿಚೆಗೆ
ಕಾರೋನಾ ಕೋವಿಡ್ 19 ಬಂದಿರುವ ಸೊಂಕಿತ ರೋಗಿಗಳು ಬಂದಾಗ ಪ್ರಾಣದ ಹಂಗನ್ನು ತೊರೆದು ಕೆಲಸವನ್ನು ಮಾಡುತ್ತಿದ್ದೆವೆ,
ಇಂದಿನ ದಿವಸ ನಾವು ಕೆಲಸವನ್ನು ಮಾಡುವುದಿಲ್ಲ ಎಂದು ಆಸ್ಪತ್ರೆಯ ಮುಂಭಾಗ ನಾವೆಲ್ಲರೂ ಕುಳಿತಿದ್ದೇವು ಆಡಳಿತ ವೈದ್ಯರಾದ ಚಂದ್ರಪ್ಪನವರು ಬಂದು ಅವರನ್ನು ಕರೆಸಿ ಸಂಬಳವನ್ನು ಕೊಡಿಸುತ್ತೇನೆ, ಅವನು ಕೊಡದಿದ್ದರೆ 3 ದಿನ ಟೈಮ್ ಕೊಡಿ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಸಮಯವನ್ನು ತಗೆದುಕೊಂಡಿದ್ದಾರೆ, ಆದ ಕಾರಣ ಮುಸ್ಕರವನ್ನು ವಾಪಾಸ್ ತೆಗೆದುಕೊಂಡು ಪುನಃ ಕೆಲಸ ನಿರ್ವಹಿಸುತ್ತಿದ್ದೇವೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೊರಾಟ ಮಾಡಲಾಗುವುದು ಎಂದು ವೈದ್ಯರಿಗೆ ಹೇಳಿದರು.
ಇದರ ಉಪಸ್ಥಿತಿಯಲ್ಲಿ;- ಹೊನ್ನಾಳಿಯ ಡಿ.ಎಸ್.ಎಸ್ ಪ್ರಧಾನ ಸಂಚಾಲಕರಾದ ಕುರುವ ಮಂಜುನಾಥ್, ಎ.ಬಿ.ಸಿ ನ್ಯೂಸ್ ಆನ್ ಲೈನ್ ಚಾನಲ್ ನ ಸಂಪಾದಕರಾದ ಅರವಿಂದ್ .ಎಸ್ ಸಹ ಭಾಗಿಯಾಗಿದ್ದರು.