ದಾವಣಗೆರೆ ಮೇ 20
ಸರ್ಕಾರದ ಆದೇಶದಂತೆ ಮೇ 21 ರಿಂದ ದಾವಣಗೆರೆ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನವನಗಳು ಬೆಳಿಗ್ಗೆ 7
ರಿಂದ 9 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 7
ಗಂಟೆಯವರೆಗೆ ತೆರೆಯಲಾಗುತ್ತಿದೆ.
ಈ ಸಮಯದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್
ಧರಿಸಿಕೊಂಡು ಉದ್ಯಾನವನಗಳಲ್ಲ್ಲಿ ವಾಕಿಂಗ್ ಮಾತ್ರ ಮಾಡಲು
ಅವಕಾಶ ನೀಡಲಾಗಿದೆ ಹಾಗೂ ಉದ್ಯಾನವನಗಳಲ್ಲಿನ ಜಿಮ್ ಬಳಸಲು
ಅವಕಾಶವಿರುವುದಿಲ್ಲವೆಂದು ಮಹಾನಗರಪಾಲಿಕೆ ಆಯುಕ್ತ
ವಿಶ್ವನಾಥ್ ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.