ದಾವಣಗೆರೆ ಮೇ.20 –
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ
ಸಮಿತಿಯನ್ನು ಪ್ರಖ್ಯಾತ ವಿಜ್ಞಾನಿ ಪ್ರೊ. ಎಸ್. ಅಯ್ಯಪ್ಪನ್,
ನಿವೃತ್ತ ಮಹಾನಿರ್ದೇಶಕರು, ಭಾರತೀಯ ಕೃಷಿ ಸಂಶೋಧನಾ
ಪರಿಷತ್ ಹಾಗೂ ಸರ್ಕಾರದ ಕಾರ್ಯದರ್ಶಿ, ಕೃಷಿ ಸಂಶೋಧನೆ
ಹಾಗೂ ಶಿಕ್ಷಣ ಇಲಾಖೆ, ಭಾರತ ಸರ್ಕಾರ/ ಕುಲಾಧಿಪತಿಗಳು,
ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ, ಮಣಿಪುರ ಇವರ
ಅಧ್ಯಕತೆಯಲ್ಲಿ 3 ವರ್ಷಗಳ ಅವಧಿಗೆ ಪುನರ್ ರಚಿಸಲಾಗಿದೆ.
   ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ
ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು
ತಂತ್ರಜ್ಞಾನ ಅಕಾಡೆಮಿಯನ್ನು ಜುಲೈ 2005 ರಲ್ಲಿ ಪ್ರಸಿದ್ದ
ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ
ಸಂಸ್ಥೆಯ ನಿವೃತ್ತ ಅಧ್ಯಕ್ಷರಾದ ಪದ್ಮವಿಭೂಷಣ ದಿವಂಗತ
ಪ್ರೊ.ಯು.ಆರ್. ರಾವ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದೆ.
  ಅಕಾಡೆಮಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ನೂತನ
ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸರ್ಕಾರದಿಂದ ನಾಮ
ನಿದೇರ್ಶನ ಮಾಡಲಾಗುತ್ತಿದೆ. ಪ್ರಸುತ್ತ ಅಕಾಡೆಮಿ
ಸಮಿತಿಯನ್ನು ಪ್ರಖ್ಯಾತ ವಿಜ್ಞಾನಿ ಪ್ರೊ. ಎಸ್. ಅಯ್ಯಪ್ಪನ್,
ನಿವೃತ್ತ ಮಹಾನಿರ್ದೇಶಕರು, ಭಾರತೀಯ ಕೃಷಿ ಸಂಶೋಧನಾ
ಪರಿಷತ್ (Iಟಿಜiಚಿಟಿ ಛಿouಟಿಛಿiಟ oಜಿ ಚಿgಡಿiಛಿuಟಣuಡಿಚಿಟ ಖeseಚಿಡಿಛಿh-Iಅಂಖ) ಹಾಗೂ ಸರ್ಕಾರದ
ಕಾರ್ಯದರ್ಶಿ, ಕೃಷಿ ಸಂಶೋಧನೆ ಹಾಗೂ ಶಿಕ್ಷಣ ಇಲಾಖೆ (ಆeಠಿಚಿಡಿಣmeಟಿಣ
oಜಿ ಂgಡಿiಛಿuಟಣuಡಿಚಿಟ ಖeseಚಿಡಿಛಿh ಚಿಟಿಜ ಇಜuಛಿಚಿಣioಟಿ-ಆಂಖಇ), ಭಾರತ ಸರ್ಕಾರ/
ಕುಲಾಧಿಪತಿಗಳು, ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ,
ಮಣಿಪುರ ಇವರ ಅಧ್ಯಕತೆಯಲ್ಲಿ 3 ವರ್ಷಗಳ ಅವಧಿಗೆ
ಪುನರ್ ರಚಿಸಲಾಗಿದ್ದು, ಈ ಸಮಿತಿಯು 13 ಸದಸ್ಯರುಗಳನ್ನು
ಒಳಗೊಂಡಿದ್ದು ಖ್ಯಾತ ಶಿಕ್ಷಣ ತಜ್ಞರು, ಹೆಸರಾಂತ ವಿಜ್ಞಾನಿಗಳು
ಮತ್ತು ಸರ್ಕಾರದ ಹಿರಿಯ ಆಡಳಿತಗಾರರು
ಸದಸ್ಯರಾಗಿದ್ದಾರೆಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ
ಅಕಾಡೆಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *