ದಾವಣಗೆರೆ, ಮೇ.20
ದಾವಣಗೆರೆ ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ
ಕಸಿ/ಸಸಿಗಳನ್ನು ಸಸ್ಯಾಭಿವೃದ್ದಿ ಮಾಡಿ ಸರ್ಕಾರಿ ಮಾರಾಟ ದರದಲ್ಲಿ
ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತರು ಈ ಕೆಳಗಿನ
ತೋಟಗಾರಿಕೆ ಕ್ಷೇತ್ರಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಕಸಿ/
ಸಸಿಗಳ ಸುದುಪಯೋಗ ಪಡೆದುಕೋಳ್ಳಬಹುದಾಗಿದೆ.
ಆವರಗೊಳ್ಳ ತೋಟಗಾರಿಕ ಕ್ಷೇತ್ರದಲ್ಲಿ ನುಗ್ಗೆ, ತೆಂಗು,
ಅಡಿಕೆ, ಅಲಂಕಾರಿಕ ಗಿಡಗಳು ಲಭ್ಯವಿದ್ದು ಕ್ಷೇತ್ರದ ಅಧಿಕಾರಿ
ದೂರವಾಣಿ ಸಂಖ್ಯೆ: 7975479338, 9844966636 ಇವರನ್ನು
ಸಂರ್ಪಕಿಸಬಹುದಾಗಿದೆ. ವ್ಯಾಸಗೊಂಡನಹಳ್ಳಿ ತೋಟಗಾರಿಕೆ
ಕೇತ್ರದಲ್ಲಿ ತೆಂಗು, ಕರಿಬೇವು, ನಿಂಬೆ ಸಸಿಗಳು ಲಭ್ಯವಿದ್ದು
ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9164408129
ಇವರನ್ನು ಸಂರ್ಪಕಿಸಬಹುದಾಗಿದೆ.
ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರದಲ್ಲಿ ಕರಿಬೇವು, ನಿಂಬೆ,
ಕಾಳುಮೆಣಸು, ಅಡಿಕೆ ಸಸಿಗಳು ಲಭ್ಯವಿದ್ದು ಕ್ಷೇತ್ರದ
ಅಧಿಕಾರಿಗಳ ದೂರವಾಣಿ ಸಂಖ್ಯೆ:9731709133 ಇವರನ್ನು
ಸಂರ್ಪಕಿಸಬಹುದಾಗಿದೆ. ಕಚೇರಿ ನರ್ಸರಿ ದಾವಣಗೆರೆ ಇಲ್ಲಿ ಅಡಿಕೆ,
ಅಲಂಕಾರಿಕ ಸಸಿಗಳು , ಕರಿಬೇವು ಸಸಿಗಳು ಲಭ್ಯವಿದ್ದು
ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9964065115
ಇವರನ್ನು ಸಂರ್ಪಕಿಸಬಹುದಾಗಿದೆ.
ಗರಗ ತೋಟಗಾರಿಕೆ ಕ್ಷೇತ್ರ ಚನ್ನಗಿರಿ ಕ್ಷೇತ್ರದಲ್ಲಿ
ತೆಂಗು, ಮಾವು, ನುಗ್ಗೆ, ನಿಂಬೆ, ಅಡಿಕೆ ಸಸಿಗಳು ಲಭ್ಯವಿದೆ
ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ: 9686375020
ಇವರನ್ನು ಸಂರ್ಪಕಿಸಬಹುದಾಗಿದೆ. ಬುಳ್ಳಾಪುರ ತೋಟಗಾರಿಕೆ
ಕ್ಷೇತ್ರ ಹರಿಹರ ಇಲ್ಲಿ ತೆಂಗು ಖಿಘಿಆ, ತೆಂಗು ಸಸಿಗಳು
ಲಭ್ಯವಿದ್ದು ಕ್ಷೇತ್ರದ ಅಧಿಕಾರಿಗಳ ದೂರವಾಣಿ ಸಂಖ್ಯೆ:
9008900370 ಇವರನ್ನು ಸಂರ್ಪಕಿಸಬಹುದಾಗಿದೆ.
ಈ ಎಲ್ಲಾ ಸಸಿಗಳು ತೋಟಗಾರಿಕೆ ಕ್ಷೇತ್ರದಲ್ಲಿ ಮಾರಾಟಕ್ಕೆ
ಲಭ್ಯವಿದ್ದು ರೈತರು ಸದುಪಯೋಗ
ಪಡೆದುಕೋಳ್ಳಬೇಕೆಂದು ದಾವಣಗೆರೆ ಹಿರಿಯ ತೋಟಗಾರಿಕೆ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.