ದಾವಣಗೆರೆ ಮೇ.20
ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರ
ನಿಯಮ 14 ಹೆಚ್ ರಂತೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ
ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸಹಕಾರ ಸಂಘಗಳ ಎಲ್ಲಾ
ಚುನಾವಣೆಗಳನ್ನು ಮುಂದೂಡಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಕೊರೊನಾ ವೈರಸ್ ಸಾಂಕ್ರಾಮಿಕ
ರೋಗ ಹರಡದಂತೆ ದಾವಣಗೆರೆ ಜಿಲ್ಲೆಯಾದಂತ ಮಾ.03 ರಿಂದ
may.24 ರವರೆಗೆ ಸಿ.ಆರ್.ಪಿ.ಸಿ 1973 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು
ಜಾರಿಗೊಳಿಸಲಾಗಿದೆ. ಹಾಗೂ ರಾಜ್ಯದಾದ್ಯಂತ ಕೊರೋನಾ ವೈರಸ್
ಹರಡುವ ಭೀತಿ ಹಿನ್ನಲೆಯಲ್ಲಿ ಆಯುಕ್ತರು, ಸಹಕಾರ
ಚುನಾವಣಾ ಪ್ರಾಧಿಕಾರ, ಬೆಂಗಳೂರು ಇವರು may.31 ರ
ವರೆಗೆ ಚುನಾವಣೆ ಏರ್ಪಡುವ ಸಹಕಾರ ಸಂಘಗಳ
ಚುನಾವಣೆಯನ್ನು ಆಯಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ
ಸಮಾಲೋಚಿಸಿ, ಮುಂದೂಡಲು ಅನುಮತಿಸಿರುತ್ತಾರೆ ಎಂದು
ಸಹಕಾರ ಸಂಘಗಳ ಉಪನಿಬಂಧಕ ಬಿ.ಜಯಪ್ರಕಾಶ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ