ದಾವಣಗೆರೆ ಜಿಲ್ಲೆ;- ಮೇ 19 ಹೊನ್ನಾಳಿ ಪಟ್ಟಣದ ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯಾಧಾಂತ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸ್ಥಗಿತಗೊಂಡಿದ್ದವು, ಪುನಃ 60 ದಿನಗಳ ನಂತರ ಬಸ್ ಸಂಚಾರ ಇಂದಿನಿಂದ ಆರಂಭಗೊಂಡು ಹೊನ್ನಾಳಿಯಿಂದ ಶಿವಮೊಗ್ಗ ಮತ್ತು ಹೊನ್ನಾಳಿಯಿಂದ ಹರಿಹರ ಜನಗಳಿಗೆ ಅನುಕೂಲವಾಗುವಂತೆ ಸುಮಾರು 10 ಬಸ್ಸುಗಳ ಇಂದು ರೋಡಿಗೆ ಇಳಿದವು ಎಂದು ಡಿಪೋ ಮ್ಯಾನೇಜರಾದ ಕೆ ಮಹೇಶ್ವರಪ್ಪನವರು ನಂತರ ಮಾತನಾಡಿ ಬಸ್ಸುಗಳಲ್ಲಿ ಪ್ರಯಾಣೀಕರು ಪ್ರಯಾಣಕ್ಕೆ ಬರುವಾಗ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು ಹಾಗೂ ನಿರ್ವಾಹಕರ ತಪಾಸಣೆಗೆ ಒಳಪಡುವವರು ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಹೇಳುತ್ತಾ
ತದಾದನಂತರ ಜನಸಂದಣಿ ಹೆಚ್ಚಾಗಿ ಬೇರೆ ಕಡೆ ಪ್ರಯಾಣ ಮಾಡಲಿಕ್ಕೆ ಬಸ್ ನಿಲ್ದಾಣಕ್ಕೆ ಬಂದರೆ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ, ಸಮಯ
ನಿಗದಿಯಾಗಿದ್ದು ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಬಸ್ಸು ಹೊರಡುವ ಸಂದರ್ಭದಲ್ಲಿ ಇರುವ;- ಕೆ.ಎಸ್.ಆರ್.ಟಿ.ಸಿ ನೌಕರರು ಮತ್ತು ಸಿಬ್ಬಂದಿ ವರ್ಗ, ಘಟಕದ ವ್ಯವಸ್ಥಾಪಕರು ಹಾಗೂ
ಡಿಪೋ ಮ್ಯಾನೇಜರಾದ ಕೆ ಮಹೇಶ್ವರಪ್ಪನವರು, ಮತ್ತು ಘಟಕದ ಕಛೇರಿಯ ಸಹಾಯಕರಾದ ಲೋಕೇಶ್ವರಪ್ಪ, ಸಂಚಾರಿ ನಿಯಂತ್ರಕರಾದ ಲಕ್ಷಣ್, ಕೆ.ಎಸ್ ಅಶ್ವತ್ಥ್, ಜಿ.ಎಂ ವೀಣಾ ಪಾಸಿನ ವಿಭಾಗ ಮತ್ತು ಚಾಲಕರು ಹಾಗೂ ನಿರ್ವಾಹಕರು ಸಹ ಭಾಗಿಯಾಗಿದ್ದರು.