ದಾವಣಗೆರೆ ಮೆ.21
2020-21 ನೇ ಸಾಲಿನಲ್ಲಿ ಜಗಳೂರು ತೋಟಗಾರಿಕೆ ಕಚೇರಿಯಿಂದ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ
ಯೋಜನೆಯಡಿ ನೀರಾವರಿ ಸೌಲಭ್ಯವಿರುವ ರೈತ
ಫಲಾನುಭವಿಗಳಿಗೆ ವಿವಿಧ ತೋಟಗಾರಿಕೆ ಬೆಳೆ ಮತ್ತು ಕೃಷಿ
ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು.
ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ದಾಳಿಂಬೆ, ಮಾವು,
ಸಪೋಟ, ಪೇರಲ, ನೇರಳೆ, ಸೀತಾಫಲ, ನುಗ್ಗೆ, ಅಂಗಾಂಶ ಬಾಳೆ
ಪ್ರದೇಶ ವಿಸ್ತರಣೆಯನ್ನು ಹಾಗೂ ಮಣ್ಣು ಮತ್ತು ನೀರು
ಸಂರಕ್ಷಣೆ ಕ್ರಮಗಳಾದ ಕೃಷಿ ಹೊಂಡ ನಿರ್ಮಾಣ, ಕೊಳವೆಬಾವಿ
ಮರು ಪೂರಿಕರಣಗಳನ್ನು ಕೈಗೊಳ್ಳುವ ಆಸಕ್ತ
ರೈತರುಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ
ಅನುಷ್ಟಾನಗೊಳಿಸಲಾಗುವುದು.
ಫಲಾನುಭವಿಗಳು ಸಣ್ಣ/ಅತೀ ಸಣ್ಣ ರೈತರು, ಬಿಪಿಎಲ್
ಕುಟುಂಬದವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ
ವರ್ಗದವರಿರಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ
ಕಚೇರಿಯ ಅಧಿಕಾರಿಗಳನ್ನು ಮತ್ತು ಹೋಬಳಿ ಮಟ್ಟದ
ಅಧಿಕಾರಿಗಳಾದ ಅನಂತ್ ಕುಮಾರ್, ರೈತ ಸಂಪರ್ಕ ಕೇಂದ್ರ
ಕಸಬಾ, ಮೊ ಸಂ: 9900796617, ಪ್ರಸನ್ನಕುಮಾರ್.ಜಿ.ಹೆಚ್ ರೈ.ಸಂ
ಕೇಂದ್ರ ಬಿಳಿಚೋಡು ಮೊ ಸಂಖ್ಯೆ: 7625078047, ಶಿವಣ್ಣ .ಜೆ ರೈ.ಸಂ
ಕೇಂದ್ರ ಸೊಕ್ಕೆ, ಮೊ ಸಂಖ್ಯೆ: 6362315280 ನ್ನು
ಸಂಪರ್ಕಿಸಬಹುದೆಂದು ಜಗಳೂರು ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.