ದಾವಣಗೆರೆ ಮೇ.21
ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 2.43 ಲಕ್ಷ ಹೆಕ್ಟರ್
ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಹವಾಮಾನ
ಇಲಾಖೆಯಿಂದ ಉತ್ತಮ ಮಳೆಯಾಗುವ ಮುನ್ಸೂಚನೆ
ನೀಡಲಾಗಿದೆ. ಇಲಾಖೆಯಿಂದ ಬಿತ್ತನೆ ಬೀಜ , ರಸಗೊಬ್ಬರ ,
ಕಿಟನಾಶಕಗಳಿಗೆ ಯಾವುದೇ ಕೊರತೆಯಾಗದಂತೆ
ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಮುಂಗಾರು ಹಂಗಾಮಿಗೆ ಅತೀ ಪ್ರಮುಖವಾದ ಕೃಷಿ ಪರಿಕರ
ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ
ಬಿತ್ತನೆ ಬೀಜ ಗಳನ್ನು ವಿತರಿಸಲು ಜಿಲ್ಲೆಯಲ್ಲಿರುವ 20 ರೈತ
ಸಂಪರ್ಕ ಕೇಂದ್ರಗಳು ಮೂಲಕ ಸಿದ್ದತೆ ಮಾಡಿಕೊಳ್ಳಲಾಗಿದೆ.
ಇಲಾಖೆಯಿಂದ ವಿತರಿಸಲಾಗುವ ಪ್ರಮಾಣಿತ ಬಿತ್ತನೆ
ಬೀಜಗಳನ್ನು ಬೀಜ ಬದಲಿಕೆ ಅನುಪಾತದನ್ವಯ
ವಿತರಿಸಲಾಗುತ್ತದೆ. ಬಿತ್ತನೆ ಬೀಜಗಳನ್ನು ವಿತರಿಸುವಾಗ
ಸ್ವಪರಾಗ ಸ್ಪರ್ಶ ಬೆಳೆಗಳಾದ ಶೇಂಗಾ, ತೊಗರಿ, ಉದ್ದು,
ಹೆಸರು, ಕಡಲೆ ಬಿತ್ತನೆ ಬೀಜಗಳನ್ನು ಒಮ್ಮೆ ಇಲಾಖೆಯಿಂದ
ಪಡೆದ ರೈತರು ಮುಂದಿನ ಮೂರು ವರ್ಷಗಳ ಬಳಿಕ ಅದೇ
ಬೆಳೆ/ ತಳಿಗಳನ್ನು ಬಿತ್ತನೆ ಬೀಜಗಳನ್ನು ಪಡೆಯಲು
ಅರ್ಹರಾಗಿರುತ್ತಾರೆ ಈ ಬೆಳೆಗಳಲ್ಲಿ ರೈತರು ತಾವು ಹಿಂದಿನ
ವರ್ಷಗಳಲ್ಲಿ ಖರೀದಿಸಿ ಪ್ರಮಾಣಿತ ಬಿತ್ತನೆ ಬೀಜಗಳನ್ನು ಬಿತ್ತನೆ
ಮಾಡಿ ಬೆಳೆದಂತಹ ಬೆಳೆಯ ಬೀಜಗಳನ್ನು ಮುಂದಿನ ಮೂರು
ವರ್ಷಗಳವರೆಗೆ ಬಿತ್ತನೆ ಬೀಜಗಳಾಗಿ ಬಳಕೆ
ಮಾಡಬಹುದಾಗಿರುತ್ತದೆ.
2020 ನೇ ಮುಂಗಾರು ಹಂಗಾಮಿಗೆ ಇಲಾಖೆಯಿಂದ ನೀಡಲಾದ
ಮಾರ್ಗಸೂಚಿ ಪ್ರಕಾರ ಸ್ವಪರಾಗಸ್ಪರ್ಶ ಬೆಳೆಗಳಲ್ಲಿ ಈ ಹಿಂದೆ
ಮೂರು ವರ್ಷಗಳಲ್ಲಿ ಬಿತ್ತನೆ ಬೀಜ ಪಡೆದ ರೈತರಿಗೆ ಅದೇ ಬೆಳೆ
ತಳಿ ಬೀಜಗಳನ್ನು ವಿತರಿಸಲಾಗುವುದಿಲ್ಲ. ಕಳೆದ ಮೂರು
ವರ್ಷಗಳಿಂದ ರೈತರು ರಿಯಾಯಿತಿ ದರದಲ್ಲಿ ಇಲಾಖೆಯಿಂದ
ಖರೀದಿಸಿದ ಬಿತ್ತನೆ ಬೀಜದ ಫಲಾನುಭವಿಗಳ ವಿವರ ಇಲಾಖೆಯಲ್ಲಿ
ಲಭ್ಯವಿರುತ್ತದೆ. ಈ ರೈತರಿಗೆ 10 ವರ್ಷಗಳಿಂದೀಚಿಗೆ
ಬಿಡುಗಡೆಯಾದ ಉತ್ತಮ ಬೆಳೆ ಮತ್ತು ತಳಿಯ
ಬೀಜಗಳನ್ನು ವಿತರಿಸಿದ್ದು ತಾವು ಬೆಳೆದ ಬೆಳೆಯ ಬೀಜಗಳನ್ನು
ಬಿತ್ತನೆಗಾಗಿ ಬಳಸಬಹುದಾಗಿದೆ ಈ ತಾಂತ್ರಿಕತೆಯನ್ನು ರೈತರು
ಬಳಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ
ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.