ದಾವಣಗೆರೆ ಮೇ.22
ಮೇ 31 ರವರೆಗೆ ದೇಶದಲ್ಲಿ ಲಾಕ್ಡೌನ್ ಮುಂದುವರೆಸಿರುವ
ಕುರಿತು ಕೇಂದ್ರ ಗೃಹ ಇಲಾಖೆಯು ಹೊರಡಿಸಿರುವ
ಆದೇಶದನ್ವಯ ಕರ್ನಾಟಕ ರಾಜ್ಯ ಔಖಾಫ್ ಮಂಡಳಿ,
ಬೆಂಗಳೂರು ಇವರು ರಾಜ್ಯದ ಎಲ್ಲಾ ಮಸೀದಿ/ದರ್ಗಾ/ಈದ್ಗಾಗಳಲ್ಲಿ
ಸಾಮೂಹಿಕ ಪ್ರಾರ್ಥನೆ (ನಮಾಜ್), ಈದ್-ಉಲ್-ಫಿತ್ರ್ ನಮಾeóï ಹಾಗೂ
ರಂeóÁನ್ ಮಾಹೆಯ ಪ್ರಯುಕ್ತ ತರಾವೀಹ್, ಜುಮಾತ್-ಉಲ್-ವಿದಾ
ಪ್ರಾರ್ಥನೆಗಳನ್ನು ಅಮಾನತುಪಡಿಸಿ ಕೆಳಕಂಡಂತೆ ಕೆಲವು
ಮಾರ್ಗಸೂಚಿ ಹಾಗೂ ಆದೇಶವನ್ನು ಜಾರಿ ಮಾಡಿರುತ್ತಾರೆ.
ಕೋವಿಡ್-19 (ಕೊರೊನಾ) ವೈರಸ್ ಹರಡುವ ಸಾಧ್ಯತೆ
ಇರುವುದರಿಂದ ರಂeóÁನ್ ಮಾಹೆ ಹಾಗೂ ಇತರೆ
ದಿನಗಳಂದು ಸಹ ಸಾಮೂಹಿಕ ಪ್ರಾರ್ಥನೆ (ನಮಾಜ್), ಈದ್-ಉಲ್-
ಫಿತ್ರ ಪ್ರಾರ್ಥನೆ, ಜುಮಾತ್-ಉಲ್-ವಿದಾ, ಶಬ್-ಎ-ಖದ್ರ್
ಪ್ರಾರ್ಥನೆಯನ್ನು ಮಸೀದಿ/ದರ್ಗಾ/ಈದ್ಗಾಗಳಲ್ಲಿ
ನಿರ್ಬಂಧಿಸಲಾಗಿರುತ್ತದೆ.
ಈದ್-ಉಲ್-ಫಿತ್ರ್ ಹಬ್ಬದ ದಿನದಂದು ಯಾರೂ ಸಹ
ಮನೆಗಳಿಂದ ಹೊರಬಾರದೇ ಸಾಮಾಜಿಕ ಅಂತರ
ಕಾಯ್ದುಕೊಳ್ಳತಕ್ಕದ್ದು ಹಾಗೂ ಯಾವುದೇ ಈದ್ ಮಿಲಾನ್
ಸಮಾರಂಭಗಳು ಏರ್ಪಡಿಸತಕ್ಕದಲ್ಲ.
ಈದ್-ಉಲ್-ಫಿತ್ರ್ ಹಬ್ಬದಂದು ಕಂಟೇನ್ಮೆಂಟ್ ಏರಿಯಾ/ಹೈರಿಸ್ಕ್
ಏರಿಯಾ/ವಿದೇಶದ ಪ್ರವಾಸ ಹೊಂದಿರುವವರ ಸ್ನೇಹಿತರು
ಹಾಗೂ ಬಂಧುಗಳೊಂದಿಗೆ ಹಸ್ತಲಾಘವ ಹಾಗೂ
ಭೇಟಿಯಾಗುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿರುತ್ತದೆ.
ಈ ಹಿಂದೆಯೂ ಜಾರಿಯಾದಂತಹ ಮಂಡಳಿಯ ಹಾಗೂ
ಜಿಲ್ಲಾಡಳಿತದ ಸೂಚನೆ ಹಾಗೂ ನಿರ್ದೇಶನಗಳನ್ನು
ದಾವಣಗೆರೆ ಜಿಲ್ಲೆಯ ಮುಸ್ಲಿಂ ಬಾಂಧವರು ಹಾಗೂ ಎಲ್ಲಾ ವಕ್ಫ್
ಸಂಸ್ಥೆಗಳ ಅಧ್ಯಕ್ಷರು/ಆಡಳಿತಾಧಿಕಾರಿಗಳು ತಪ್ಪದೇ
ಪಾಲಿಸಬೇಕೆಂದು ಆದೇಶಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ
ಸಮಿತಿಯ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.