ದಾವಣಗೆರೆ ಮೆ.23
ರಾಜ್ಯ ಸರ್ಕಾರವು ಕೋವಿಡ್ 19 ಸೋಂಕು ಹರಡುವಿಕೆಯನ್ನು
ನಿಯಂತ್ರಿಸಲು ಲಾಕ್‍ಡೌನ್ ಕ್ರಮಗಳ ಕುರಿತು
ಮಾರ್ಗಸೂಚಿಯನ್ನು ಹೊರಡಿಸಿದ್ದು ಇವುಗಳು ರಾಜ್ಯಾದ್ಯಂತ
ಮೇ 18 ರಿಂದ 31 ರವರೆಗೆ ಜಾರಿಯಲ್ಲಿರುತ್ತವೆ. ಈ ಆದೇಶದ
ಮಾರ್ಗಸೂಚಿ ಕ್ರಮ ಸಂಖ್ಯೆ 6 ರಲ್ಲಿ ಭಾನುವಾರದಂದು
ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದೆ.
ಪ್ರತಿದಿನ ರಾತ್ರಿ 7 ರಿಂದ ಬೆಳಿಗ್ಗೆ 7 ರವರೆಗೆ ಎಲ್ಲಾ
ಅವಶ್ಯಕವಲ್ಲದ ಚಟುವಟಿಕೆಗಳ ವ್ಯಕ್ತಿಗಳ ಸಂಚಾರವನ್ನು
ಕಟ್ಟುನಿಟ್ಟಾಗಿ ನಿಷೇಧಿಸಿದೆ. ಭಾನುವಾರದಂದು ಹೆಚ್ಚುವರಿಯಾಗಿ
ಬೆಳಿಗ್ಗೆ 7 ರಿಂದ ಸಂಜೆ ರವರೆಗೆ ಸಹ ಎಲ್ಲಾ ಅವಶ್ಯಕವಲ್ಲದ
ಚಟುವಟಿಕೆಗಳ ವ್ಯಕ್ತಿಗಳ ಸಂಚಾರನ್ನು ನಿಷೇಧಿಸಿದೆ
(ಭಾನುವಾರದಂದು ಪೂರ್ಣ ದಿನದ ಲಾಕ್‍ಡೌನ್ ಇರುತ್ತದೆ) ಈ
ಉದ್ದೇಶಕ್ಕಾಗಿ ಸಿಆರ್‍ಪಿಸಿ ಸೆಕ್ಷನ್ 144 ರಡಿಯಲ್ಲಿ ನಿಷೇಧಾತ್ಮಕ ಆದೇಶ
(ಕಫ್ರ್ಯೂ)ವನ್ನು ಹೊರಡಿಸಲಾಗಿದೆ.
ಅನೇಕ ಸಾರ್ವಜನಿಕರು ಭಾನುವಾರದಂದು ಪೂರ್ಣದಿನದ
ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಪಡಿಸಿರುವಂತಹ
ಮದುವೆ ಸಮಾರಂಭಗಳನ್ನು ನಡೆಸಲು
ಸ್ಪಷ್ಟೀಕರಣ/ಅನುಮತಿ ನೀಡುವಂತೆ ಕೋರಿರುತ್ತಾರೆ. ಈ ಬಗ್ಗೆ
ಸರ್ಕಾರವು ಮೇ 21 ರ ಆದೇಶದಲ್ಲಿ ಸ್ಪಷ್ಟೀಕರಣ ನೀಡಿದ್ದು ಆ
ಪ್ರಕಾರ ಮದುವೆ ಸಮಾರಂಭಗಳು ಈ ಹಿಂದೆಯೇ
ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ
ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು ಗರಿಷ್ಟ ಅತಿಥಿಗಳ
ಸಂಖ್ಯೆಯನ್ನು 50 ಕ್ಕೆ ಸೀಮಿತಗೊಳಿಸಿ ರಾಷ್ಟ್ರೀಯ
ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸರಳವಾಗಿ
ಮದುವೆ ಸಮಾರಂಭವನ್ನು ನಡೆಸಲು ಅನುಮತಿಸಲಾಗಿದೆ.
ಇದಲ್ಲದೇ ಭಾನುವಾರದಂದು ಅವಶ್ಯ ಚಟುವಟಿಕೆಗಳಾದ ಮೆಡಿಕಲ್
ಶಾಪ್, ತರಕಾರಿ ಅಂಗಡಿ(ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆ
ಅಂಗಡಿಗಳನ್ನು ಹೊರತುಪಡಿಸಿ) ಹಾಲಿನ ಕೇಂದ್ರ, ಕಿರಾಣಿ ಅಂಗಡಿ,
ಪೆಟ್ರೋಲ್ ಬಂಕ್, ಮಟನ್/ಚಿಕನ್ ಅಂಗಡಿಗಳಿಗೆ ಅವಕಾಶವಿದೆ ಎಂದು
ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.