ಸಾಸ್ವೆಹಳ್ಳಿ: ಕೋವಿಡ್ ರೋಗವು ದಿನದಿಂದ ದಿನಕ್ಕೆ ಮಾರಕವಾಗಿ ಹರಡುತ್ತಿದೆ. ದಿನದಿತ್ಯ ಮಾಧ್ಯಮಗಳು, ಪಂಚಾಯಿತಿಗಳು, ಸ್ಥಳೀಯ ಆಡಳಿತಗಳು, ಸ್ವಯಂ ಸೇವಕರು, ಇಲಾಖಾ ಸಿಬ್ಬಂದಿ ನಿತ್ಯ ಎಚ್ಚರಿಕೆಯ ನೀಡಿದರು. ಹಳ್ಳಿಗಳಲ್ಲಿ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕೂತು ಹರಟೆ ಹೋಡೆಯುತ್ತಿರುವುದು ತಪ್ಪು ಎಂದು ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಮ್ಮ ಒಂದು ಗಂಟೆಗಳ ಕಾಲ ಕೊರೊನಾ ಪಾಠ ಮಾಡಿದರು.
ಹನುಮನಹಳ್ಳಿಯಲ್ಲಿ ಯುವಕರು, ವೃದ್ದರು ಕಟ್ಟೆಗಳ ಮೇಲೆ ದಿನಾ ರಾತ್ರಿ ಹರಟುವುದನ್ನು ಕಂಡು ತಿಳಿ ಹೇಳಿದರು.
ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧಾರಣೆ ಮಾಡಿ, ಮನೆಯಿಂದ ಅನಗತ್ಯವಾಗಿ ಹೊರಬರಬೇಡಿ ಎಂದು ಸರ್ಕಾರ ಬೊಬ್ಬೆ ಹಾಕದರು ನೀವು ಗಮನ ನೀಡದೆ ಇರುವುದು ಬೇಸರ ತಂದಿದೆ.. ನಿಮ್ಮ ಸಮಯವನ್ನು ನಿಮ್ಮ ಕುಟುಂಬಗಳಿಗೆ ನೀಡಲು ಇದು ಒಳ್ಳೆಯ ಅವಕಾಶ ನೀಡಿದೆ. ದಯಮಾಡಿ ಮನೆಗೆ ಹೋಗಿ. ನಿಮ್ಮ ಕುಟುಂಬವನ್ನು ಸಂರಕ್ಷಸಿಕೊಳ್ಳಿ ಎಂದರು.
ಕೊರೊನಾ ಒಂದು ಅಪಹಾಸ್ಯವಾಗಿ ನಿಮಗೆ ಕಾಣುತ್ತಿದೆ. ಇದು ಬಂದ ಪ್ರದೇಶಗಳಲ್ಲಿ ಹೋರಗೆ ಹೋಗದಂತೆ ನಿರ್ಬಂಧ ವಿಧಿಸಲಾಗುತ್ತದೆ. ಒಬ್ಬರಿಂದ ಇಡಿ ಗ್ರಾಮಕ್ಕೆ ಕೆಟ್ಟ ಹೆಸರು. ಆದ್ದರಿಂದ ಜಾಗೃತರಾಗಿ. ಸರ್ಕಾರದ ನಿಯಮಗಳನ್ನು ನಿಮಗಲ್ಲದಿದ್ದರೂ ನಿಮ್ಮ ಕುಟುಂಬದ ರಕ್ಷಣೆಗಾಗಿ ಪಾಲಿಸಿ. ಅಧಿಕಾರಿಗಳು ದಿನಾ ಬಂದು ಹೇಳಲು ಆಗುವುದಿಲ್ಲ. ಕಾಯಿಲೆ ಬಂದ ಮೇಲೆ ಪಶ್ಚತಾಪ ಪಡುವುದಕ್ಕಿಂತ, ಅದು ಬರದಂತೆ ಎಚ್ಚರಿಕೆ ವಹಿಸುವುದು ಅತಿಮುಖ್ಯ ಎಂದರು.
ಇಷ್ಟು ಹೇಳಿದ ಮೇಲೂ ಜನರು ಅಲ್ಲಲ್ಲಿ ಗುಂಪು ಗುಂಪಾಗಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಹಳ್ಳಿಗಳಲ್ಲಿ ಜನರು ಇನ್ನೂ ಜಾಗೃತರಾಗದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಅಧಿಕಾರಿಗಳು, ಸರ್ಕಾರ, ಎಲ್ಲರ ಪ್ರಯತ್ನವು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ಆಗಿದೆ.
ಪೋಟೂ ಸುದ್ದಿ 2
ಹನುಮನಹಳ್ಳಿ ಗ್ರಾಮದಲ್ಲಿ ರಾತ್ರಿ ಕಟ್ಟೆ ಮೇಲೆ ಗುಂಪು ಗುಂಪಾಗಿ ಕೂತು ಹರಟುತ್ತಿರುವುದನ್ನು ಗಮನಿಸಿದ ಅಂಗನವಾಡಿ ಕಾರ್ಯಕರ್ತೆ ಅವರಿಗೆ ಕೊರೊನಾ ಪಾಠ ಮಾಡಿದರು.