ದಾವಣಗೆರೆ ಮೆ.25
ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ
ಇವರು ಮೇ. 26 ರಂದು ದಾವಣಗೆರೆ ಜಿಲ್ಲೆ ಪ್ರವಾಸ
ಕೈಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು 9.45 ಕ್ಕೆ
ದಾವಣಗೆರೆಯ ಪ್ರವಾಸಿ ಮಂದಿರಕ್ಕೆ (ಸಕ್ರ್ಯೂಟ್ ಹೌಸ್)
ಆಗಮಿಸುವರು. ಬೆಳಿಗ್ಗೆ 10 ಗಂಟೆಯಿಂದ 11 ರವರೆಗೆ ಜಿಲ್ಲಾಧಿಕಾರಿ
ಕಚೇರಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ವೈರಾಣು
ಹರಡುವುದನ್ನು ತಡೆಗಟ್ಟುವ ಸಂಬಂಧ
ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಹಿರಿಯ
ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರವರೆಗೆ ಮಹಾನಗರಪಾಲಿಕೆ
ಸಭಾಂಗಣದಲ್ಲಿ ಮಹಾನಗರಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ
ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.
ಬಳಿಕ ಮಧ್ಯಾಹ್ನ 12 ರಿಂದ 1 ರವರೆಗೆ ದಾವಣಗೆರೆ ಸ್ಮಾರ್ಟ್ ಸಿಟಿ
ಯೋಜನೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ
ನಡೆಸುವರು.
ಮಧ್ಯಾಹ್ನ 1 ಗಂಟೆಯಿಂದ 2 ರವರೆಗೆ ದಾವಣಗೆರೆ-ಹರಿಹರ
ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ದಾವಣಗೆರೆ-ಹರಿಹರ
ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಪ್ರಗತಿ
ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.