ದಾವಣಗೆರೆ ಮೇ.26
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿವೆ.
ಸಂತಸದ ಜೊತೆಗೆ ನೆಮ್ಮದಿಯ ವಾತಾವರಣ ಮೂಡಿದೆ. ಇದಕ್ಕಾಗಿ
ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿಗಳಿಗೂ
ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪರವಾಗಿ ಅಭಿನಂದನೆ
ಸಲ್ಲಿಸುತ್ತೇನೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ
ಸಚಿವ ಬಿ.ಎ.ಬಸವರಾಜ್ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರಾ
ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ನಿಯಂತ್ರಣ ಕುರಿತ
ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ
ಪ್ರಕರಣಗಳು ಇಳಿಕೆಯಾಗುತ್ತಿರುವ ಸಮಯದಲ್ಲಿ ಜವಾಬ್ದಾರಿ
ಹೆಚ್ಚಿದೆ. ಅಧಿಕಾರಿಗಳು ವಿಶೇಷವಾಗಿ ಜಾಗೃತರಾಗುವ ಮೂಲಕ
ಅತೀ ಹೆಚ್ಚು ಕೆಲಸ ಮಾಡಬೇಕು ಎಂದರು.
ಜಿಲ್ಲಾಡಳಿತ, ಸಚಿವರು ಹಾಗೂ ಜನಪ್ರತಿನಿಧಿಗಳು ಕೆಲಸ
ಮಾಡುತ್ತಿಲ್ಲ ಎನ್ನುವ ಭಾವನೆ ವ್ಯಕ್ತವಾಗಬಾರದು. ಗ್ರೀನ್
ಜೋನ್‍ಲ್ಲಿದ್ದ ಜಿಲ್ಲೆಯಲ್ಲಿ ಒಂದೇ ಬಾರಿಗೆ ಕೊರೊನಾ
ಪ್ರಕರಣಗಳು ಏರಿಕೆ ಕಂಡು ಬಂದವು. ಇದರಿಂದ ಜನರಲ್ಲಿ
ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರೂ ತುಂಬಾ
ಸಕ್ರಿಯವಾಗಿ ಕೆಲಸದಲ್ಲಿ ತೊಡಗಿಕೊಂಡು ಮತ್ತೆ ಗ್ರೀನ್ ಜೋನ್
ಜಿಲ್ಲೆಯಾಗಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆಯಿಂದ
ಕೆಲಸ ಪಾಲನೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ 14 ಜನ ಇನ್ಸಿಡೆಂಟ್ ಕಮಾಂಡರ್‍ಗಳನ್ನು
ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ನೇಮಕ ಮಾಡಲಾಗಿದೆ.
ತಮಗೆ ವಹಿಸಿರುವ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಹೆಚ್ಚು
ಆಸಕ್ತಿ ವಹಿಸಿ ನಿಮ್ಮ ಭಾಗದಲ್ಲಿ ಕೊರೊನಾ ನಿಯಂತ್ರಿಸಲು
ಶ್ರಮಿಸಬೇಕು. ಸರ್ಕಾರದ ಸೂಚನೆಗಳನ್ನು ಚಾಚು ತಪ್ಪದೆ
ಪಾಲಿಸುವುದರೊಂದಿಗೆ ತಮ್ಮ ಜಾವಾಬ್ದಾರಿ ನಿರ್ವಹಿಸಬೇಕು. ಜೊತೆಗೆ
ರ್ಯಾಂಡಮ್ ಆಗಿ ಪ್ರತಿಯೊಬ್ಬರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಿಕೊಡಬೇಕು. ಆ ಮೂಲಕ ಹೆಚ್ಚಿನ ರೀತಿಯಲ್ಲಿ ಅನಾಹುತ
ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮುಂದಿನ ಬಾರಿ ಸಭೆಗೆ ಆಗಮಿಸಿದಾಗ ಪ್ರತಿಯೊಬ್ಬ ಇನ್ಸಿಡೆಂಟ್
ಕಮಾಂಡರ್‍ಗಳು ರ್ಯಾಂಡಮ್ ಸ್ಯಾಂಪಲ್ ಸಂಗ್ರಹಿಸಿರುವ ಬಗ್ಗೆ
ವರದಿ ನೀಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ
ಜರುಗಿಸಬೇಕಾಗುತ್ತದೆ. ಯಾರೊಬ್ಬರು ಬೇಜಾವಾಬ್ದಾರಿ ಮತ್ತು
ಆಲಸ್ಯ ತೋರಬೇಡಿ. ಮುಂದಿನ ದಿನಗಳಲ್ಲಿ ಏರುಪೇರಾದರೆ
ಪರಿಸ್ಥಿತಿ ಕೈ ಮೀರಿ ಹೋಗಿ ತೊಂದರೆ ಅನುಭವಿಸಬೇಕಾಗುತ್ತದೆ. ಈ
ನಿಟ್ಟಿನಲ್ಲಿ ಹೆಚ್ಚು ನಿಗಾವಹಿಸಿ ಕೆಲಸ ಮಾಡಬೇಕು ಎಂದು
ಅಧಿಕಾರಿಗಳಿಗೆ ಸೂಚಿಸಿದರು.
ಮಹಾರಾಷ್ಟ್ರ, ಗುಜರಾತ್, ತಮಿಳನಾಡು ಹಾಗೂ ಕೇರಳ
ರಾಜ್ಯಗಳಿಂದ ನಮ್ಮ ಜಿಲ್ಲೆಗಳಿಗೆ ಬರುವವರ ಬಗ್ಗೆ ಹೆಚ್ಚು ನಿಗಾ
ವಹಿಸಬೇಕು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ
ಕಡ್ಡಾಯವಾಗಿ ಕ್ವಾರಂಟೈನ್‍ಲ್ಲಿ ಇರಿಸಬೇಕು. ಹೊರ ರಾಜ್ಯದಿಂದ
ಬಂದವರಿಂದ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ
ಅವಕಾಶ ಮಾಡಿಕೊಡಬಾರದು ಎಂದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿರುವ
ಸಂದರ್ಭದಲ್ಲಿ ಯಾವೊಬ್ಬ ಅಧಿಕಾರಿಯೂ ಕೂಡ ಎಡವಬಾರದು.
ನಮ್ಮ ರಾಜ್ಯದ ಬೇರೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನೆರೆ
ರಾಜ್ಯಗಳಿಂದ ಬಂದವರಿಂದ ಪ್ರಕರಣ ಹೆಚ್ಚುತ್ತಿದೆ. ಅದೇ ರೀತಿ
ನಮ್ಮ ಜಿಲ್ಲೆಯಲ್ಲಿ ಸಂಭವಿಸಿದಂತೆ ತುಂಬಾ ಜಾಗರೂಕತೆಯಿಂದ
ಕೆಲಸ ನಿರ್ವಹಿಸಬೇಕು. ಅಂತಹವರ ಬಗ್ಗೆ ಹಾಗೂ ಅವರ
ಹಿನ್ನೆಲೆಯ ಬಗ್ಗೆ ಹೆಚ್ಚೆಚ್ಚು ಮಾಹಿತಿ ಕಲೆ ಹಾಕಬೇಕು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಲಾಡ್ಜ್‍ಗಳಲ್ಲಿ ಹಾಗೂ
ಇನಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿರುವವರಿಗೆ ರೋಗ
ನಿರೋಧಕ ಶಕ್ತಿ ಹೆಚ್ಚಿಸಲು ವಿವಿಧ ಇಲಾಖೆಗಳ
ಸಹಾಯದೊಂದಿಗೆ ಉತ್ತಮವಾದ ಆಹಾರ ಒದಗಿಸುವ ವ್ಯವಸ್ಥೆ
ಮಾಡಲಾಗುತ್ತಿದೆ. ವಿಶೇಷವಾಗಿ ಸಣ್ಣ ಮಕ್ಕಳ ಕಾಳಜಿ ವಹಿಸಲಾಗಿದೆ
ಎಂದರು.
ಜಿಲ್ಲಾ ಮಟ್ಟದ ಪ್ರತಿಯೊಬ್ಬ ಅಧಿಕಾರಿಗಳು ನಿಮ್ಮನ್ನು
ನೀವುಗಳು ಅಪಡೇಟ್ ಮಾಡಿಕೊಳ್ಳಬೇಕು. ನಿಮಗೆ ವಹಿಸಿರುವ
ಜವಾಬ್ದಾರಿಗಳನ್ನು ಪಾಲಿಸಬೇಕು. ಎಚ್ಚರಿಕೆಯಿಂದ ಕೆಲಸ
ನಿರ್ವಹಿಸುವುದರ ಮೂಲಕ ಕೊರೊನಾ ನಿಯಂತ್ರಣಕ್ಕೆ
ಸಹಕರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ,
ಪ್ರತಿಯೊಂದು ಕಂಟೈನ್‍ಮೆಂಟ್ ಜೋನ್‍ಗೆ ಸಂಬಂಧಪಟ್ಟಂತೆ
ಇನ್‍ಸ್ಪೆಕ್ಟರ್ ನೇಮಕ ಮಾಡಲಾಗಿದೆ. ಅವರು ವೈದ್ಯಕೀಯ
ಹಾಗೂ ಸರ್ವೇಕ್ಷಣಾ ತಂಡದ ಅಧಿಕಾರಿಗಳೊಂದಿಗೆ ಸೇರಿಕೊಂಡು
ಕೆಲಸ ಮಾಡುತ್ತಿದ್ದಾರೆ. ಪ್ರತಿ ಗಂಟೆಗೆ ಒಂದು ಬಾರಿ ಗಸ್ತು
ಹೋಗಿಬರುವಂತೆ ನೋಡಿಕೊಳ್ಳಲಾಗಿದೆ. ಕಂಟೈನ್‍ಮೆಂಟ್
ಜೋನ್‍ನಿಂದ ಅನವಶ್ಯಕವಾಗಿ ಹೊರಗಡೆ ಬರುವವರ ಮೇಲೆ
ಕೇಸ್ ದಾಖಲು ಮಾಡಲಾಗುತ್ತಿದೆ. ಅಲ್ಲಿನ ಜನರಿಗೆ ಅಗತ್ಯವಿರುವ
ಸಾಮಗ್ರಿಗಳನ್ನು ದೊರಕಿಸಿಕೊಡುವ ವ್ಯವಸ್ಥೆ ಮಾಡಲಾಗಿದ್ದು,
ಹಣದ ಅವಶ್ಯಕತೆಗಾಗಿ ಅಲ್ಲಿ ಮೊಬೈಲ್ ಎಟಿಎಂ ನೀಡಲಾಗಿದೆ ಎಂದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಎಂಟತ್ತು
ದಿನಗಳ ಹಿಂದೆ ಅತೀ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್‍ಗಳ ಪೈಕಿ
ನಮ್ಮ ಜಿಲ್ಲೆ 4ನೇ ಸ್ಥಾನದಲ್ಲಿತ್ತು. ಆದರೆ ಇದೀಗ 7ನೇ
ಸ್ಥಾನದಲ್ಲಿದೆ. ಅದೇ ರೀತಿ ಸಕ್ರಿಯ ಕೇಸ್‍ಗಳ ಪೈಕಿ 3ನೇ
ಸ್ಥಾನದಲ್ಲಿದ್ದ ಜಿಲ್ಲೆ ಇಂದು 10ನೇ ಸ್ಥಾನದಲ್ಲಿದೆ. ಬೇರೆ ಜಿಲ್ಲೆಗಳಿಗೆ
ಹೋಲಿಸಿದ್ದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಕರಣ
ಕಡಿಮೆಯಾಗುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 136 ಕೋವಿಡ್ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ.
ಅದರಲ್ಲಿ 65 ಕೇಸ್‍ಗಳು ಬಿಡುಗಡೆ ಮಾಡಲಾಗಿದೆ. 4 ಸಾವು
ಸಂಭವಿಸಿದೆ. ಇನ್ನೆರಡು ದಿನಗಳಲ್ಲಿ 15 ಜನರನ್ನು ಬಿಡುಗಡೆ
ಮಾಡಲಾಗುವುದು. ಇದುವರೆಗೂ 6964 ಗಂಟಲು ದ್ರವ ಮಾದರಿ
ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ 136
ಪಾಸಿಟಿವ್ ಬಂದಿದೆ. 5287 ನೆಗೆಟಿವ್ ಕೇಸ್ ಬಂದಿದೆ. 14 ಕಂಟೈನ್‍ಮೆಂಟ್
ಜೋನ್ ಮಾಡಲಾಗಿದೆ. ಅದರಲ್ಲಿ ಹೆಚ್ಚಾಗಿ ಜಾಲಿನಗರ ಹಾಗೂ
ಇಮಾಮ್ ನಗರದಲ್ಲಿ ಪ್ರಕರಣ ಕಂಡುಬಂದಿದೆ. 250 ಐಸೋಲೇಷನ್
ಬೆಡ್ ವಾರ್ಡ್ ಹಾಗೂ 50 ಐಸಿಯು ಬೆಡ್ ವಾರ್ಡ್ ತಯಾರು
ಮಾಡಿಕೊಳ್ಳಲಾಗಿದೆ. ಜೊತೆಗೆ ಹೊರ ರಾಜ್ಯಗಳಿಂದÀ ಬಂದ 259
ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ
ಎಸ್.ಎ.ರವೀದ್ರನಾಥ್, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಎಂಎಲ್‍ಸಿ
ಅಬ್ದುಲ್ ಜಬ್ಬಾರ್, ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ,
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ ಸಿಇಓ ಪದ್ಮಾ
ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್
ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಸಿ ಮಮತಾ ಹೊಸಗೌಡರ್,
ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ ಉಪಸ್ಥಿತರಿದ್ದರು.