ದಾವಣಗೆರೆ ಜಿಲ್ಲೆ ಮೇ 26 ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಪಿ.ಸಿ.ಸಿ ಸದಸ್ಯರು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವೀಕ್ಷಕರಾದಂತಹ ಶ್ರೀನಾಥ್ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪ ಮತ್ತು ಮಾಜೀ ಶಾಸಕರಾದ ಡಿ.ಜಿ ಶಾಂತನಗೌಡ್ರು ಇವರುಗಳ ನೇತೃತ್ವದಲ್ಲಿ 7ನೇ ತಾರೀಕಿಗೆ ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿರುವ
ಹಿನ್ನಲೆಯಲ್ಲಿ , ಡಿ.ಕೆ ಶಿವಕುಮಾರ್ ಆದೇಶದ ಅನ್ವಯ ವಿಶೇಷ ಮತ್ತು ವಿನೂತನ ಕಾರ್ಯಕ್ರಮ ಮಾಡುವ ಬಗ್ಗೆ ಇಂದು ಸಭೆ ನಡೆಯಿತು.

ಕೆ.ಪಿ.ಸಿ.ಸಿ ಸದಸ್ಯರಾದ ಶ್ರೀನಾಥ್ ರವರು ಮಾತನಾಡಿ ಈ ಹಿಂದೆ ರಾಜ್ಯಾಧ್ಯಕ್ಷರ ಪದಗ್ರಹಣವನ್ನು ಮೇ 30ನೇ ತಾರೀಕ್ ನಿಗದಿಯಾಗಿತ್ತು, ಆದರೆ ಕೊರೋನಾ ಕೋವಿಡ್ 19 ಮಹಾಮಾರಿ ರೋಗ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 30ರ ಬದಲಾಗಿ 7ನೇ ತಾರೀಕಿಗೆ ನಿಗದಿ ಮಾಡಲಾಗಿದೆ ಎಂದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಬರುವ 47 ಗ್ರಾಮ ಪಂಚಾಯಿತಿ 2 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರುಗಳು ಸೇರಿ ನ್ಯಾಷಲ್ ಪ್ಲಾಗ್ ಮತ್ತು ಕಾಂಗ್ರೆಸ್ ಬಾಹುಟ ಹಾಕಿ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಿ.ವಿ ಪರದೆ ಅಳವಡಿಸುವುದರ ಜೊತೆಗೆ ಸುಮಾರು 100 ಕಾರ್ಯಕರ್ತರುಗಳಂತೆ ಸೇರಿ ಮಾಸ್ಕ್ ಹಾಕಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು,ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಎಲ್.ಇ.ಡಿ ಟಿ.ವಿ ಅಳವಡಿಸುವ ಜೊತೆಗೆ ಕಡ್ಡಾಯವಾಗಿ ಇಲ್ಲಿಯು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಮಾಣವಚನ ಸ್ವೀಕರಿಸುವ ವೀಡಿಯೋ ಚಿತ್ರೀಕರಣ ಮಾಡಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರುಗಳಿಗೂ ಮತ್ತು
ಕರ್ನಾಟಕದ ಎಲ್ಲಾ
ಜನತೆಗೂ ತಲುಪುವಂತೆ ಮಾಡಬೇಕು ಎಂದರು.

ಈ ಸಭೆಯಲ್ಲಿ ಭಾಗಿಯಾದವರು;- ಡಿ.ಜಿ ಶಾಂತನಗೌಡ್ರು ಮಾಜಿ ಶಾಸಕರು, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ಗದ್ದಿಗೇಶಣ್ಣ, ಎ.ಕೆ ನಾಗಪ್ಪ, ಬಸವರಾಜ್ ಪ್ಪ
ಹನುಮನಳ್ಳಿ, ಅಬಿದ್ ಅಲಿಖಾನ್ ಟಿ.ಪಿ, ಮರುಳ ಸಿದ್ದಪ್ಪ ಟಿ.ಪಿ, ಬಿ ಸಿದ್ದಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ
ಡಿ.ಜಿ ವಿಶ್ವನಾಥ್, ರಮೇಶ್ ಟಿ.ಜಿ, ಪ್ರಕಾಶ್, ಯುತ್ ಅಧ್ಯಕ್ಷ ಮಧುಗೌಡ, ಉಪಾಧ್ಯಕ್ಷ ರಂಜಿತ್ ಹೆಚ್.ಎ,
ಎನ್.ಎಸ್.ಐ.ಯು ಅಧ್ಯಕ್ಷ ಮನೋಜ್, ಮತ್ತು ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಸಹ
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *