ದಾವಣಗೆರೆ ಮೇ.26
ಮಂಗಳವಾರ ದೂಡಾ ಕಚೇರಿಯ ಪ್ರಾಧಿಕಾರದ
ಸಭಾಂಗಣದಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಬಿ.ಎ.ಬಸವರಾಜ್ ಇವರ ಅಧ್ಯಕ್ಷತೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ
ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಮಾತನಾಡಿ, ದಾವಣಗೆರೆ ಸ್ಮಾಟ್ ಸಿಟಿ
ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು
ತ್ವರಿತಗತಿಯಲ್ಲಿ ಸಾಗಬೇಕು. ಯಾವುದೇ ಕಾರಣಕ್ಕೂ ವಿಳಂಬ
ಮಾಡಬಾರದು. ಶಂಕು ಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳ
ಪೂರ್ಣಗೊಳಿಸಲು ಸಿದ್ಧತೆ ನಡೆಸಬೇಕು. ಅಧಿಕಾರಿಗಳು
ಯಾವುದೇ ಸಬೂಬು ಹೇಳಬಾರದು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು
ಗುಣಮಟ್ಟದಿಂದ ಇಲ್ಲ. ಈ ಬಗ್ಗೆ ದೂರುಗಳಿವೆ. ಸರ್ಕಾರ ನಿಮಗೆ ಎಲ್ಲ
ಸೌಲಭ್ಯ ನೀಡುತ್ತಿದೆ. ಆದರೂ ಅಧಿಕಾರಿಗಳು ಬೇಜಾವಾಬ್ದಾರಿಯಿಂದ
ವರ್ತಿಸುವುದು ಸರಿಯಲ್ಲ. ಈ ಬಗ್ಗೆ ಶಿಸ್ತುಕ್ರಮ
ಜರುಗಿಸಬೇಕಾಗುತ್ತದೆ ಎಂದ ಅವರು, ಕಾಮಗಾರಿಗಳು ಕಳಪೆ
ಗುಣಮಟ್ಟದಿಂದ ಕೂಡಿದರೆ, ಜಿಲ್ಲೆ ಸ್ಮಾರ್ಟ್ ಸಿಟಿ ಹೇಗಾಗುತ್ತೆ ಎಂದು
ಪ್ರಶ್ನಿಸಿದರು.
ಮುಂದಿನ ಬಾರಿ ನಾನು ಸಭೆ ನಡೆಸುವುದಿಲ್ಲ. ಬದಲಾಗಿ ನೇರವಾಗಿ
ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ
ಜರುಗಿಸುತ್ತೇನೆ. ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಕಾಂಟ್ರಾಕ್ಟರ್
ಸಭೆ ನಡೆಸುತ್ತೇನೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ
ಕಾಮಗಾರಿಗಳು ತುಂಬಾ ನಿಧಾನವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು
ಎಚ್ಚೆತ್ತುಕೊಳ್ಳಬೇಕು. ಕೊರೊನಾ ನೆಪ ಬೇಡ. ಎಲ್ಲಾ
ಕಡೆಗಳಲ್ಲಿಯೂ ಕೆಲಸ ನಡೆಯುತ್ತಿದೆ ಎಂದರು.
ಮೇಯರ್ ಅಜಯ ಕುಮಾರ್ ಮಾತನಾಡಿ, ಸ್ಮಾರ್ಟ್ ಸಿಟಿ
ಯೋಜನೆಯಡಿಯ ಕಾಮಗಾರಿಗಳ ಕಾಂಟ್ರಾಕ್ಟರ್ ಬಗ್ಗೆ ನಿಗಾ
ವಹಿಸಬೇಕು. ಅವರಿಗೆ ನೀಡಿದ ಟೆಂಡರ್‍ಗಳನ್ನು ಸಬ್
ಕಾಂಟ್ರಾಕ್ಟರ್‍ಗೆ ವಹಿಸುವುದರಿಂದ ಕಾಮಗಾರಿಗಳು
ಕಳಪೆಯಾದ್ದಾಗುತ್ತಿವೆ ಎಂದು ದೂರಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಕಾಮಗಾರಿಗಳು
ಕಳಪೆಯಿಂದ ಕೂಡಿದರೆ ಜನ ನಮ್ಮ ಬಗ್ಗೆ ತಪ್ಪು ಕಲ್ಪನೆ
ತಿಳಿದುಕೊಳ್ಳುತ್ತಾರೆ. ಕಳಪೆ ಮಾಡುವುದು ಅವರು, ಕೆಟ್ಟ
ಹೆಸರು ಬರುವುದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಂದು
ಹೇಳಿದರು.
ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪೂರ ಮಾತನಾಡಿ, ಜಿಲ್ಲೆಯಲ್ಲಿ
ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ 16 ಕಾಮಗಾರಿಗಳು
ಪೂರ್ಣಗೊಂಡಿದೆ. ಇದಕ್ಕೆ 29.44 ಕೋಟಿ ಅಂದಾಜು ಹಣವಿದ್ದು, 23.05
ವೆಚ್ಚ ಮಾಡಲಾಗಿದೆ. ಇನ್ನುಳಿದಂತೆ 49 ಕಾಮಗಾರಿಗಳು
ಪ್ರಗತಿಯಲ್ಲಿದೆ. ಅದಕ್ಕಾಗಿ ಅಂದಾಜು 678.86 ಕೋಟಿ ಹಣವಿದ್ದು, 114.69
ಕೋಟಿ ವೆಚ್ಚ ಮಾಡಲಾಗಿದೆ. ಇನ್ನೂ ಟೆಂಡರ್ ಅಡಿಯಲ್ಲಿ 11
ಕಾಮಗಾರಿ ಹಾಗೂ ಡಿಪಿಆರ್ ಹಂತದಲ್ಲಿ 7 ಕಾಮಗಾರಿ ಇವೆ ಎಂದು ಸಭೆಗೆ
ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ.ರವೀದ್ರನಾಥ್, ಪ್ರೊ.ಲಿಂಗಣ್ಣ,
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಹನುಮಂತರಾಯ, ಎಡಿಸಿ ಪೂಜಾರ್ ವೀರಮಲ್ಲಪ್ಪ
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *