ದಾವಣಗೆರೆ ಜಿಲ್ಲೆ ಮೇ 26 ಹೊನ್ನಾಳಿ ಪಟ್ಟಣದ ದಿನಸಿ ವರ್ತಕರು ವ್ಯಾಪಾರ ವಹಿವಾಟುಗಳನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಬಗ್ಗೆ. ಇಂದು ಮಾನ್ಯ ದಂಡಾಧಿಕಾರಿಗಳಿಗೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಂತರ ವರ್ತಕರು ಮಾತನಾಡಿ ಮಾನ್ಯ ದಂಡಾಧಿಕರಿಗಳು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಸಮಯ ನಿಗದಿ ಮಾಡಿ ನಮಗೆ ವ್ಯಾಪಾರ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಪ್ರತಿಯೊಬ್ಬ ದಿನಸಿ ಅಂಗಡಿಗೆ ಬರುವ ಜನಗಳು ಮಾಸ್ಕ್ ಹಾಕದೇ ಅಂತರವನ್ನು ಕಾಯ್ದುಕೊಳ್ಳದೇ ಇರುವ ಕಾರಣ, ಈಗಾಗಲೇ ಕೊರೋನಾ ಕೋವಿಡ್ 19 ಬಂದಿರುವ ಹಿನ್ನಲೆಯಲ್ಲಿ ನಮ್ಮ ಹೊನ್ನಾಳಿ ತಾಲೂಕಿಗೆ ಬಾರದೇ ಇರಲಿ ಎಂದು ನಾವುಗಳು ದಿನಸಿ ಅಂಗಡಿಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದು ನಂತರ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತೇವೆ ಎಂದು ಹೇಳಿ, ಮಾನ್ಯ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ದಿನಸಿ ಅಂಗಡಿಯ ಮಾಲೀಕರುಗಳು;- ಬೆಲ್ಲದ ಜಗದೀಶ್, ಹೆಚ್.ಎಂ ರುದ್ರೇಶ್, ಹನೀಬ್ ಹೆಚ್.ಆರ್, ಕೆ.ಪಿ.ಎಸ್ ರಬೀಕ್, ಹರ್ಷ ಕುಂಬಾರ, ದೀಪು ದುಮ್ಮಿ ಸ್ಟೊರ್, ಗಂಗಾಧರ ಹೆಚ್.ಎನ್ ,ಗಂಗಣ್ಣ, ಎ.ಬಿ , ನಂದೀಶ್ ಹೆಚ್.ಎನ್ ಜಾಹೀರ್, ಹೆಚ್.ಎ ಸತೀಶ್, ನ್ಯಾಮತಿ ಬಸಣ್ಣ ಸೇರಿದಂತೆ ಅಲವಾರು ವರ್ತಕರು ಭಾಗಿಯಾಗಿದ್ದರು.