ದಾವಣಗೆರೆ ಮೇ.27
ಇಂದು ಬೆಳಿಗ್ಗೆ 6 ರಿಂದ ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ
ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಇವರು ಜನಪ್ರತಿನಿಧಿಗಳು
ಹಾಗೂ ಅಧಿಕಾರಿಗಳೊಂದಿಗೆ ಕುಂದುವಾಡ ಕೆರೆಯಿಂದ ಆರಂಭಿಸಿ
ನಗರ ಪರ್ಯಟನೆ ಮಾಡಿದರು.
ಕುಂದುವಾಡ ಕೆರೆಯ ಮುಖ್ಯ ದ್ವಾರದ ಬಳಿ ರಾಜಾ ಕಾಲುವೆಗೆ
ನಿರ್ಮಿಸಲಾಗುತ್ತಿರುವ ಮಳೆ ನೀರು ಸರಾಗವಾಗಿ ಹೋಗುವ
ಬ್ರಿಡ್ಜ್ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಶೀಘ್ರದಲ್ಲಿ ಕಾಮಗಾರಿ
ಮುಗಿಸುವಂತೆ ಹಾಗೂ ಕುಂದುವಾಡ ಕೆರೆ ಆವರಣದಲ್ಲಿ ಸಾಕಷ್ಟು
ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ
ಮಹಾನಗರಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಿದರು.
ನಂತರ ಗ್ಲಾಸ್‍ಹೌಸ್‍ಗೆ ಭೇಟಿ ನೀಡಿ, ಈಗಾಗಲೇ ಮಂಜೂರಾಗಿರುವ
ರೂ.5 ಕೋಟಿ ವೆಚ್ಚದಲ್ಲಿ ಗಾಜಿನ ಮನೆಯ ಸೌಂದರ್ಯೀಕರಣ,
ಉದ್ಯಾನವನ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ
ಮೂಲಕ ಹೆಚ್ಚೆಚ್ಚು ಪ್ರವಾಸಿಗರು ಗಾಜಿನ ಮನೆಯತ್ತ
ಆಕರ್ಷಿತರಾಗುವಂತೆ ಮಾಡಬೇಕೆಂದು ಎಂದು ತಿಳಿಸಿದರು.
ನಂತರ ಎಂಸಿಸಿ ಬಿ ಬ್ಲಾಕ್‍ಓ ಹಿರಿಯ ನಾಗರೀಕರ ಪಾರ್ಕ್‍ಗೆ ಭೇಟಿ ನೀಡಿ,
ನಾಗರೀಕರೊಂದಿಗೆ ಸಂವಾದ ನಡೆಸಿ, ಪಾರ್ಕ್‍ನಲ್ಲಿ ಶುಚಿತ್ವ
ಕಾಪಾಡಿಕೊಳ್ಳುವಂತೆ ಪೌರ ಕಾರ್ಮಿಕರಿಗೆ ಸೂಚಿಸಿದರು. ಹಾಗೂ
ಪೌರಕಾರ್ಮಿಕರ ಕುಂದು ಕೊರತೆಗಳನ್ನುಆಲಿಸಿ ತಮ್ಮ
ಕೆಲಸಕ್ಕೆ ಅಗತ್ಯವಾದ ನೆರವನ್ನು ನೀಡಲಾಗುವುದು ಎಂದರು.
ಬೂದಾಳು ರಸ್ತೆಯ ಪೌರ ಕಾರ್ಮಿಕರ ವಸತಿಗೃಹ
ಕಾಲೋನಿಗೆ ಭೇಟಿ ನೀಡಿ, ನಿರ್ಮಾಣ ಹಂತದಲ್ಲಿರುವ ವಸತಿಗೃಹಗಳ
ಕಾಮಗಾರಿಯನ್ನು ವೀಕ್ಷಿಸಿ, ತ್ವರಿತ ಗತಿಯಲ್ಲಿ ಕಾರ್ಯ
ನಿರ್ವಹಿಸುವಂತೆ ತಿಳಿಸಿದರು. ನಂತರ ಕೊಳಚೆ ನೀರು
ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ
ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯೆ ರೇಖಾ ಸುರೇಶ್, ಎಸ್ಪಿ
ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,
ಸ್ಮಾರ್ಟ್‍ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ

Leave a Reply

Your email address will not be published. Required fields are marked *