ದಾವಣಗೆರೆ ಮೇ.28
ಲಾಕ್‍ಡೌನ್ ಅವಧಿ ವಿಸ್ತರಣೆಗೊಂಡಿರುವ ಹಿನ್ನೆಲೆ ಸರ್ಕಾರದ
ಆದೇಶದಂತೆ ದಾವಣಗೆರೆ ಮಹಾನಗರಪಾಲಿಕೆ  ವ್ಯಾಪ್ತಿಯಲ್ಲಿ ಬರುವ
ಆಸ್ತಿಗಳ ಮೇಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು
ಪಾವತಿಸಲು ಶೇ.5 ರ ರಿಯಾಯಿತಿಯ ಕಾಲಾವಧಿಯನ್ನು 2020 ರ
ಜುಲೈ 31 ರವರೆಗೆ ವಿಸ್ತರಿಸಲಾಗಿದೆ.
ಕೊರೊನಾ ಹಿನ್ನೆಲೆ ಏಪ್ರಿಲ್ ಮಾಹೆ ಅಂತ್ಯದವರೆಗಿದ್ದ
ಕಾಲಾವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿತ್ತು.
ಲಾಕ್‍ಡೌನ್ ಅವಧಿ ವಿಸ್ತರಣೆಗೊಂಡ ಹಿನ್ನೆಲೆ ಜುಲೈ 31 ರವರೆಗೆ
ವಿಸ್ತರಿಸಲಾಗಿದೆ ಹಾಗೂ ದಂಡರಹಿತವಾಗಿ ಆಸ್ತಿ ತೆರಿಗೆ ಪಾವತಿಸಲು 2020
ರ ಅಕ್ಟೋಬರ್ 30 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *