ದಾವಣಗೆರೆ ಜಿಲ್ಲೆ ಮೇ 28 ಹೊನ್ನಾಳಿ ತಾಲೂಕಿನ ಎನ್.ಎಸ್.ಯು.ಐ ವತಿಯಿಂದ ಇಂದು ರಾಜ್ಯದ ಖಾಸಗಿ ವಿದ್ಯಾ ಸಂಸ್ಥೆಗಳು
ಡೊನೇಶನ್ ರೂಪದಲ್ಲಿ ಮಾಡುತ್ತಿರುವ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಎಲ್ಲಾ ಖಾಸಗಿ ವಿದ್ಯಾ ಸಂಸ್ಥೆಗಳು ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಮಾತ್ರ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಹೊನ್ನಾಳಿಯ ದಂಡಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಸಲ್ಲಿಸಿದವರು ಮನೋಜ್ ವಾಲಜ್ಜಿ ಎನ್.ಎಸ್.ಯು.ಐ ಅಧ್ಯಕ್ಷ, ಮತ್ತು ಶ್ರೀಧರ್,ಶಿವಶಂಕರ್, ಸಿದ್ದೇಶ್ ಬೆನಕನಹಳ್ಳಿ, ಪವನ್ ಮುಂತಾದವರು ಸಹ ಭಾಗಿಯಾಗಿದ್ದರು.