ದಾವಣಗೆರೆ ಮೇ.28
ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನು
ಆಯೋಜಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ
ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ.
ಈ ವರ್ಷ ಕೋವಿಡ್-19 ಇರುವ ಕಾರಣದಿಂದಾಗಿ
ಕಾರ್ಯಕ್ರಮವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ
ಸಲುವಾಗಿ ಈ ಬಾರಿ ರಾಜ್ಯ ತಂಬಾಕು ಘಟಕದ ವತಿಯಿಂದ ಈ ವರ್ಷದ
ಧ್ಯೇಯವಾಕ್ಯವಾದ ‘ಯುವ ಪೀಳೀಗೆಯನ್ನು ತಂಬಾಕು
ಉದ್ಯಮಗಳ ಕುತಂತ್ರ ಹಾಗೂ ತಂಬಾಕು &ಚಿmಠಿ; ನಿಕೋಟಿನ್
ಬಳಕೆಯಿಂದ ರಕ್ಷಣೆ ಮಾಡುವುದು’ (ಠಿಡಿoಣeಛಿಣiಟಿg ಥಿouಣh ಜಿಡಿom iಟಿಜusಣಡಿಥಿ
mಚಿಟಿiಠಿuಟಚಿಣioಟಿ ಚಿಟಿಜ ಠಿಡಿeveಟಿಣiಟಿg ಣhem ಜಿಡಿom ಖಿobಚಿಛಿಛಿo &ಚಿmಠಿ; ಓiಛಿoಣiಟಿe use) ಈ ವಿಷಯ
ಕುರಿತು 20 ವರ್ಷದೊಳಗಿನ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ
ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಈ ವಿಷಯವನ್ನು ಉತ್ತಮವಾಗಿ ಹಾಗೂ ಅಂದವಾಗಿ ಬರೆದಂತಹ
ಮಕ್ಕಳಿಗೆ ಪ್ರಥಮ ಬಹುಮಾನವಾಗಿ ರೂ.3000, ದ್ವಿತೀಯ
ಬಹುಮಾನವಾಗಿ ರೂ. 2000 ಹಾಗೂ ತೃತೀಯ ಬಹುಮಾನವಾಗಿ ರೂ.
1000 ಮೊತ್ತವನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ನಗದು
ರೂಪದಲ್ಲಿ ವಿತರಿಸಲಾಗುವುದು.
ಪ್ರಬಂಧವು 4 ಪುಟ ಮೀರದಂತಿರಬೇಕು. ಪ್ರಬಂಧ
ಬರೆದು ಕಳುಹಿಸಲು ಜೂ. 5 ಕೊನೆಯ ದಿನಾಂಕವಾಗಿದ್ದು, ಜಿಲ್ಲಾ
ಸರ್ವೇಕ್ಷಣಾಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ,
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ
ಆವರಣ, ದಾವಣಗೆರೆ -577004. ಇ-ಮೇಲ್
ವಿಳಾಸ ಟಿಣಛಿಠಿಜಚಿvಚಿಟಿgeಡಿe@gmಚಿiಟ.ಛಿom ವಾಟ್ಸ್‍ಪ್ ನಂ.9986618696 ಈ ವಿಳಾಸಕ್ಕೆ
ಪ್ರಬಂಧವನ್ನು ಕಳುಹಿಸಬೇಕು.
ಅಭ್ಯರ್ಥಿಗಳು ಪ್ರಬಂಧದ ಮೇಲ್ಭಾಗದಲ್ಲಿ ಹೆಸರು,
ವಯಸ್ಸು, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ ಅಧಿಕಾರಿ
ಡಾ.ರಾಘವೇಂದ್ರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.