ದಾವಣಗೆರೆ ಮೇ.29
ಮೇ 29 ರಂದು ಪಿ.ರಮೇಶಕುಮಾರ್ ಜಂಟಿ ಕೃಷಿ
ನಿರ್ದೇಶಕರು, ಜಾಗೃತ ಕೋಶ, ಸಚಿವಾಲಯ ವಿಭಾಗ
ಬೆಂಗಳೂರು ಇವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ
ಸಂತೇಬೆನ್ನೂರು ಹೊಬಳಿಯ ವೆಂಕಟೇಶ್ವರ ಕ್ಯಾಂಪ್,
ಬೆಳ್ಳಿಗನೂಡು ಮತ್ತು ಸಂತೆಬೆನ್ನೂರು ಗ್ರಾಮಗಳ ಕೃಷಿ
ಪರಿಕರ ಮಾರಾಟ ಮಳಿಗೆಗಳಿಗೆ ಹಾಗು ರೈತ ಸಂಪರ್ಕ
ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಬೀಜ, ರಸಗೊಬ್ಬರ ಹಾಗು
ಕೀಟನಾಶಕಗಳ ದಾಸ್ತಾನು ಮತ್ತು ವಿತರಣೆ ಬಗ್ಗೆ ಪರೀಶೀಲನೆ
ಮಾಡಿದರು.
ವಿವಿಧ ತಯಾರಿಕಾ ಕಂಪನಿಗಳ ಮಾದರಿಗಳನ್ನು ಸಂಗ್ರಹಿಸಿ
ಪರೀಕ್ಷೆಗಾಗಿ ಕಳುಹಿಸಲು ಕೃಷಿ ಅಧಿಕಾರಿಗಳು ರೈತ ಸಂಪರ್ಕ
ಕೇಂದ್ರ ಸಂತೇಬೆನ್ನೂರು ಇವರಿಗೆ ಸೂಚನೆ ನೀಡಿದ ಅವರು
ಕಳಪೆ/ನಕಲಿ ಬೀಜ, ರಸಗೊಬ್ಬರ ಹಾಗು ಕೀಟನಾಶಕ ಮಾರಾಟ
ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ
ಪರವಾನಿಗೆಯನ್ನು ರದ್ದುಪಡಿಸಲಾಗುವುದೆಂದು ಎಚ್ಚರಿಕೆ
ನೀಡಿದರು.
ಮಾರಾಟ ಮಳಿಗೆಗಳ ಮುಂದೆ ನೋಟಿಸ್ ಬೋರ್ಡನಲ್ಲಿ
ರಸಗೊಬ್ಬರ ಮಾರಾಟದ ದರ ಮತ್ತು ದಾಸ್ತಾನು ಬಗ್ಗೆ ರೈತರಿಗೆ
ಕಾಣುವಂತೆ ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕಲು
ತಿಳಿಸಲಾಯಿತು, ರಸಗೊಬ್ಬರ ಮಾರಾಟವನ್ನು ಪಿಓಎಸ್ ಯಂತ್ರದ
ಮೂಲಕ ರೈತರಿಂದ ಆಧಾರ್ ಸಂಖ್ಯೆಯನ್ನು ಪಡೆದು ಬಿಲ್ಲನ್ನು
ರೈತರಿಗೆ ಕಡ್ಡಾಯವಾಗಿ ನೀಡಲು ಸೂಚಿಸಲಾಯಿತು.
ರೈತರಿಗೆ ಬಿತ್ತನೆ ಬೀಜ ವಿತರಿಸುವಾಗ ಬಿಲ್ಲಿನಲ್ಲಿ ಕಡ್ಡಾಯವಾಗಿ
ಲಾಟ್ ಸಂಖ್ಯೆಯನ್ನು ನಮೂದಿಸಿ, ರೈತರ ಸಹಿ ಪಡೆದು
ವಿತರಿಸುವಂತೆ ಮಾರಾಟಗಾರರಿಗೆ ಸೂಚಿಸಲಾಯಿತು. ಅವಧಿ ಮೀರಿದ
ಕೀಟನಾಶಕಗಳನ್ನು ಮಾರಾಟ ಮಾಡಬಾರದು ಹಾಗು ಕೆಲವು
ಜೈವಿಕ ಉತ್ಪನ್ನಗಳಲ್ಲಿ ಪೀಡೆನಾಶಕ ಅಂಶ ಇರುವುದು
ತಿಳಿದುಬಂದಿದ್ದು ಅಂತಹ ಜೈವಿಕ ಉತ್ಪನ್ನಗಳನ್ನು
ನಿಷೇಧಿಸಲಾಗಿದೆ. ಅವುಗಳನ್ನು ಮಾರಾಟ ಮಳಿಗೆಗಳಲ್ಲಿ ಮಾರಾಟ
ಮಾಡುವುದು ಕಂಡು ಬಂದರೆ ಅಂತಹ ಮಾರಾಟಗಾರರ ವಿರುದ್ದ
ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ
ನೀಡಿದರು.
ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಮುಖ್ಯ ಬೆಳೆಯಾಗಿದೆ.
ಮುಂದಿನ ದಿನಗಳಲ್ಲಿ ಬಿತ್ತನೆ ಆರಂಭವಾಗಲಿದ್ದು ಅಧಿಕೃತ
ಮಾರಾಟಗಾರರಿಂದ ಪ್ಯಾಕ್ ಮಾಡಿದ ಬಿತ್ತನೆ ಬೀಜಗಳನ್ನು
ಖರೀದಿಸಬೇಕೆಂದು ರೈತರಿಗೆ ಸಲಹೆ ನೀಡಿದರು. ರೈತ ಸಂಪರ್ಕ
ಕೇಂದ್ರಗಳಲ್ಲಿ ವಿತರಿಸುತ್ತಿರುವ ಬಿತ್ತನೆ
ಬೀಜ,ಕೀಟನಾಶಕ,ಸಾವಾಯವ ಗೊಬ್ಬರ ಮತ್ತು ಲಘು
ಪೋಷಕಾಂಶಗಳ ಮಾದರಿಗಳನ್ನು ಕೃಷಿ ಅಧಿಕಾರಿಗಳು
ಕಡ್ಡಾಯವಾಗಿ ಸಂಗ್ರಹಿಸಿ ಸಂಬಂಧಪಟ್ಟ ಪ್ರಯೋಗಾಲಯಕ್ಕೆ
ಸಲ್ಲಿಸಿ ಅವುಗಳ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡು ನಂತರ
ರೈತರಿಗೆ ವಿತರಿಸಲು ಸೂಚಿಸಿದರು.
ತಪಾಸಣೆ ಸಮಯದಲ್ಲಿ ಜಿಲ್ಲಾ ಜಾರಿದಳದ ಸಹಾಯಕ ಕೃಷಿ
ನಿರ್ದೇಶಕರುಗಳಾದ ಕೆ.ಸಿರಿಯಣ್ಣ, ಸುನೀಲ ಕುಮಾರ ಎಂ.ಟಿ , ಜಿಲ್ಲಾ
ಕೃಷಿ ತರಬೇತಿ ಕೇಂದದÀ್ರ ಸಹಾಯಕ ಕೃಷಿ ನಿರ್ದೇಶಕರಾದ
ಮಹಮ್ಮದ್ ರಫಿ ಹಾಗು ಸಂತೇಬೆನ್ನೂರು ರೈತ ಸಂಪರ್ಕ
ಕೇಂದ್ರದ ಕೃಷಿ ಅಧಿಕಾರಿ ಕುಮಾರ್ ಬಿ.ಬಿ ರವರು ಹಾಜರಿದ್ದರು.