ದಾವಣಗೆರೆ ಮೇ.29
ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ
ನಿವೇಶನಗಳಲ್ಲಿ ಗಿಡ, ಮರಗಳು ಬೆಳೆದಿರುವುದು
ಕಂಡುಬಂದಿರುತ್ತದೆ. ಅಂತಹ ಖಾಲಿ ನಿವೇಶನ ಸ್ಥಳಗಳಲ್ಲಿ ಘನ
ತ್ಯಾಜ್ಯ ವಸ್ತುಗಳನ್ನು ಹಾಕುವುದು ಕಂಡುಬಂದಿದ್ದು ಈ
ಕುರಿತು ಸ್ಥಳೀಯ ಸಾರ್ವಜನಿಕರಿಂದ ಹಲವಾರು ದೂರುಗಳ
ಬಂದ ಹಿನ್ನೆಲೆ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನ ಹೊಂದಿರುವ ಸ್ವತ್ತಿನ
ಮಾಲೀಕರು ತಮ್ಮ ತಮ್ಮ ನಿವೇಶನಗಳನ್ನು ಸ್ಚಚ್ಚ
ಮಾಡಿಕೊಳ್ಳುವಂತೆ ಈ ಮೂಲಕ ತಿಳಿಸಲಾಗಿದೆ.
ತಮ್ಮ ಖಾಲಿ ನಿವೇಶನಗಳನ್ನು ಸ್ಚಚ್ಚಗೊಳಿಸುವುದರಲ್ಲಿ
ವಿಫಲರಾದರೆ, ಅಂತಹವರಿಂದ ನಿಯಮಾನುಸಾರ ದಂಡವನ್ನು
ವಸೂಲು ಮಾಡಿಕೊಳ್ಳಲಾಗುವುದು ಎಂದು ಮಹಾನಗರಪಾಲಿಕೆ
ಆಯುಕ್ತರಾದ ವಿಶ್ವನಾಥ ಪಿ ಮುದಜ್ಜಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.