ದಾವಣಗೆರೆ ಮೇ.29
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾಸಾಶನ
ಪಡೆಯುತ್ತಿರುವ ಜಿಲ್ಲೆಯ ಸಾಹಿತಿ/ಕಲಾವಿದರು ಹಾಗೂ ವಿಧವಾ
ಮಾಸಾಶನ ಪಡೆಯುತ್ತಿರುವ ಕಲಾವಿದರಿಗೆ ಮಾಸಾಶನ
ಪಾವತಿಸಲು ಅವರಿಂದ ಸಮಗ್ರ ಮಾಹಿತಿಯನ್ನು
ಸಂಗ್ರಹಿಸಬೇಕಿದ್ದು, ಈ ಫಲಾನುಭಿವಗಳು ಜೂನ್ 02 ರೊಳಗೆ
ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕೆಳಕಂಡಂತೆ
ಮಾಹಿತಿಯನ್ನು ನೀಡಬೇಕಿದೆ.
ಕಲಾವಿದರು/ಸಾಹಿತಿಗಳು ಪಾಸ್ಪೋರ್ಟ್ ಅಳತೆಯ ಫೋಟೊ,
ಆಧಾರ್ ಕಾರ್ಡ್, ಪಿಂಚಣಿಯ ಆರ್ಡರ್ ಪ್ರತಿ, ಪಡಿತರ ಚೀಟಿ ಪ್ರತಿ,
ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್
ಪುಸ್ತಕದ ದಾಖಲೆಗಳ ಮೂಲ ಮತ್ತು ಜೆರಾಕ್ಸ್
ಪ್ರತಿಯೊಂದಿಗೆ ಖುದ್ದಾಗಿ ಸಹಾಯಕ ನಿರ್ದೇಶಕರು, ಕನ್ನಡ
ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾಡಳಿತ ಭವನ, ಮೊದಲನೇ ಮಹಡಿ,
ಕೊಠಡಿ ಸಂಖ್ಯೆ : 27, ಪಿ.ಬಿ.ರಸ್ತೆ, ದಾವಣಗೆರೆ ದೂರವಾಣಿ ಸಂಖ್ಯೆ :
08192-234849 ನ್ನು ಸಂಪರ್ಕಿಸಬಹುದೆಂದು ಕನ್ನಡ ಮತ್ತು
ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.