ದಾವಣಗೆರೆ ಮೇ.30
ಇಂದು ದಾವಣಗೆರೆಯಲ್ಲಿ 4 ಕೋವಿಡ್ ಪಾಸಿಟಿವ್ ಪ್ರಕರಣಗಳು
ವರದಿಯಾಗಿದ್ದು, ಇವರಿಗೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ
ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ ಸಂಖ್ಯೆ 2818 24 ವರ್ಷದ ಪುರುಷ, ರೋಗಿ ಸಂಖ್ಯೆ 2819
45 ವರ್ಷದ ಮಹಿಳೆ ಇವರು ರೋ.ಸಂಖ್ಯೆ 1483 ರ ಸಂಪರ್ಕಿತರು.
ರೋಗಿ ಸಂಖ್ಯೆ 2820 33 ವರ್ಷದ ಮಹಿಳೆ ಇವರು ರೋ.ಸಂಖ್ಯೆ 926
ರ ಸಂಪರ್ಕಿತರು. ರೋಗಿ ಸಂಖ್ಯೆ 2821 35 ವರ್ಷದ ಪುರುಷ
ಇವರು ರೋಗಿ ಸಂಖ್ಯೆ 1253 ರ ಸಂಪರ್ಕಿತರಾಗಿದ್ದಾರೆ.
ದಾವಣಗೆರೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಇದುವರೆಗೆ
ಗುಣಮುಖರಾದ 104 ಜನರಿಗೆ ಬಿಡುಗಡೆ ಭಾಗ್ಯ ದೊರೆತಿದೆ.
ಜಿಲ್ಲೆಯ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ,
ಶುಶ್ರೂಷೆ ನೀಡಲಾಗುತ್ತಿದ್ದು, ಸೋಂಕಿತರು
ಚೇತರಿಸಿಕೊಂಡು ಗುಣಮುಖರಾಗಿ
ಬಿಡುಗಡೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಇಂದು ಗುಣಮುಖರಾದ ರೋಗಿ ಸಂಖ್ಯೆಗಳಾದ 619, 754, 914,
917, 1061, 1251, 1252, 1253, 1254, 1255, 1309, 1365, 1366, 1367, 1368,
1369, 1370, 1371, 137 ಮತ್ತು 1373 ಇವರು ಆಸ್ಪತ್ರೆಯಿಂದ
ಬಿಡುಗಡೆಗೊಂಡರು. ಇವರನ್ನು ಆಸ್ಪತ್ರೆಯ ವೈದ್ಯರು,
ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ
ಬೀಳ್ಕೊಡುಗೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 150 ಪ್ರಕರಣಗಳ ಪೈಕಿ ಇದುವರೆಗೆ ಒಟ್ಟು
104 ಜನರು ಬಿಡುಗಡೆ ಹೊಂದಿದ್ದಾರೆ. 04 ಸಾವು ಸಂಭವಿಸಿದ್ದು, ಒಟ್ಟು
42 ಸಕ್ರಿಯ ಪ್ರಕರಣಗಳಿವೆ.
ಕನಿಷ್ಟ ಬೆಂಬಲ ಬೆಲೆಯಂತೆ ಭತ್ತ ಖರೀದಿಸಲು ಜಿಲ್ಲಾಧಿಕಾರಿ ಮನವಿ :
ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಕ್ವಿಂಟಾಲ್ ಭತ್ತಕ್ಕೆ ರೂ.1815 ನಿಗದಿಪಡಿಸಲಾಗಿದೆ.
ಮಾರುಕಟ್ಟೆಯಲ್ಲಿ ಈ ದರಕ್ಕಿಂತ ಕಡಿಮೆ ಬೆಲೆಯಲ್ಲಿ ರೈತರಿಂದ

ಭತ್ತವನ್ನು ಖರೀದಿಸಲಾಗುತ್ತಿದೆ. ಆದರೆ ರೈತರನ್ನು
ಉತ್ತೇಜಿಸಲು ಮತ್ತು ನಷ್ಟದಿಂದ ಪಾರು ಮಾಡಲು ವರ್ತಕರು
ನಿಗದಿಗೊಳಿಸಲಾಗಿರುವ ಕನಿಷ್ಟ ಬೆಂಬಲೆ ಬೆಲೆ ರೂ.1815 ರಂತೆ
ಭತ್ತವನ್ನು ಖರೀದಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *