ದಾವಣಗೆರೆ ಏ.30
ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪದ್ಮಾ ಬಸವಂತಪ್ಪ
ಇಂದು ಕೈದಾಳೆ ಗ್ರಾಮಕ್ಕೆ ಭೇಟಿ ನೀಡಿ ನೇರೆಗಾ
ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು
ಪರಿಶೀಲಿಸಿದರು.
ಇದೇ ವೇಳೆ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್
ಕೈದಾಳೆ ಗ್ರಾ.ಪಂ ಗೆ ನೀಡಿರುವ ಸ್ಟ್ಯಾಂಡ್ ಸ್ಯಾನಿಟೈಸರ್
ಸಲಕರಣೆಯನ್ನು ಉದ್ಘಾಟಿಸಿದರು.
ಕೈದಾಳೆ ಗ್ರಾಮದಲ್ಲಿ 130 ಜನರು ನರೇಗಾ
ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೀರಾವರಿ
ಕಾಲುವೆ ಹೂಳೆತ್ತುವ ಕಾಮಗಾರಿ, ಕೃಷಿ ಹೊಂಡ , ಎರೆಹುಳು
ಗೊಬ್ಬರ ಘಟಕ ಕಾಮಗಾರಿ , ಬೋರವೆಲ್ ರೀಚಾರ್ಜ್ ಪಿಟ್ ಹಾಗೂ
ಗುಲಾಬಿ ಬೆಳೆ ಬೆಳೆದಿರುವ ರೈತನ ಹೊಲಕ್ಕೆ ಭೇಟಿ ನೀಡಿ ಕಾಮಗಾರಿ
ಪರಿಶೀಲಿಸಿದರು.
ಈ ವೇಳೆ ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಜಿಲ್ಲಾ
ಸಾಮಾಜಿಕ ಪರಿಶೀಲನಾ ಸಂಯೋಜಕರಾದ ಜಯಪ್ರಕಾಶ್ , ಜಿಲ್ಲಾ ಐಇಸಿ
ಸಂಯೋಜಕರಾದ ಚಂದನ್, ಪಿಡಿಒ ವಿದ್ಯಾವತಿ, ಐಸಿ ಕಾರ್ಯದರ್ಶಿ
ಜಯ್ಯಪ್ಪ, ಬಿಲ್ ಕಲೆಕ್ಟರ್ ಉಮೇಶ್ ಉಪಸ್ಥಿತರಿದ್ದರು.