ದಾವಣಗೆರೆ ಜೂ.01
       ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು
ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗವು
ಮಸೀದಿಗಳು ಮತ್ತು ದರ್ಗಾಗಳು ಸಾರ್ವಜನಿಕರಿಗೆ
ತೆರೆಯುವಾಗ ಈ ಕೆಳಕಂಡ ಮಾರ್ಗಸೂಚಿಗಳನ್ನು
ಪಾಲಿಸಬೇಕೆಂದು ಸೂಚಿಸಿದೆ.
ಎಲ್ಲಾ ಮುಸಲ್ಲಿಗಳು (ಪ್ರಾರ್ಥಾರ್ತಿಗಳು) ತಮ್ಮ
ಮನೆಗಳಿಂದಲೇ ವಜುವನ್ನು (ಶುಧ್ಧಿತ್ವ) ಮಾಡಿಕೊಂಡು
ಮಸೀದಿಗೆ ಬರಬೇಕು. ವಜು ಕೊಳ (ಹೌಜ್) ಮಸೀದಿಯ ಆವರಣದಲ್ಲಿ
ಇದ್ದಲ್ಲಿ ಇದನ್ನು ಉಪಯೋಗಿಸದಂತೆ ಕ್ರಮ
ಕೈಗೊಳ್ಳುವುದು ಹಾಗೂ ನಲ್ಲಿಗಳನ್ನು
ಉಪಯೋಗಿಸುವುದು.
ಶೌಚಾಲಯಗಳನ್ನು ಶುಚಿಯಾಗಿರಿಸಬೇಕು ಹಾಗೂ
ಅನಿವಾರ್ಯತೆ ಇದ್ದಲ್ಲಿ ಮಾತ್ರ ಬಳಸಬೇಕು. ಮಸೀದಿಯ ಒಳಗೆ
ಮತ್ತು ಹೊರಗೆ ಪ್ರವೇಶಿಸಲು ಒಂದೇ ದ್ವಾರವನ್ನು ಇಡಬೇಕು.
ಪ್ರತಿಯೊಂದು ಪ್ರಾರ್ಥನೆಯ ಮುನ್ನ ಪ್ರಾರ್ಥನಾ
ಸಭಾಂಗಣಕ್ಕೆಲ್ಲಾ ಔಷಧಿಯನ್ನು ಸಿಂಪಡಿಸಬೇಕು ಹಾಗೂ ಎಲ್ಲಾ
ಮುಸಲ್ಲಿಗಳಲ್ಲಿ ಪ್ರಾರ್ಥಾರ್ತಿಗಳು ಪ್ರಾರ್ಥನ ಸಭಾಂಗಣಕ್ಕೆ
ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನರ್ ನಿಂದ ದೇಹದ
ತಾಪಮಾನವನ್ನು ಪರೀಕ್ಷಿಸಬೇಕು. ಮಸೀದಿಯೊಳಗೆ ಪ್ರಾರ್ಥನ
ಸಮಯದಲ್ಲಿ ಕನಿಷ್ಠ 1 ರಿಂದ 2 ಮೀಟರ್‍ನಷ್ಟು ಸಾಮಾಜಿಕ ಅಂತರ
ಕಾಪಾಡಿಕೊಳ್ಳಬೇಕು.
ಪ್ರತಿಯೊಬ್ಬ ಪ್ರಾರ್ಥಾರ್ತಿಗಳು ತಮ್ಮ ಪ್ರಾರ್ಥನೆ
ಚಾಪೆಯನ್ನು ಮನೆಯಿಂದಲೇ ತರಬೇಕು ಹಾಗೂ 10 ರಿಂದ 15
ನಿಮಿಷಗಳಲ್ಲಿ ಕಡ್ಡಾಯವಾಗಿ ಪ್ರಾರ್ಥನೆಯನ್ನು
ಪೂರ್ಣಗೊಳಿಸಬೇಕು. ಮಸೀದಿಗಳಲ್ಲಿ ಎಲ್ಲಾ ಪ್ರಾರ್ಥಾರ್ತಿಗಳು
ಅಧಿಕ ಸಂಖ್ಯೆಯಲ್ಲಿದ್ದಲ್ಲಿ  ಎರಡು ಪ್ರಾರ್ಥನಾ ಸಭೆಗಳನ್ನು
ಆಯೋಜಿಸಬೇಕು ಹಾಗೂ ಸುನ್ನತ್ ಹಾಗೂ ನಫೀಲ್
ಪ್ರಾರ್ಥನೆಗಳನ್ನು ತಮ್ಮ ಮನೆಗಳಲ್ಲಿಯೆ ಸಲ್ಲಿಸಬೇಕು.
ಪ್ರಾರ್ಥನೆಯ ನಂತರ ಎಲ್ಲಾ ಪ್ರಾರ್ಥಾರ್ತಿಗಳು ತಕ್ಷಣ
ಮಸೀದಿಗಳಿಂದ ನಿರ್ಗಮಿಸಬೇಕು ಹಾಗೂ ಮಸೀದಿಯ ಆವರಣದಲ್ಲಿ
ಯಾವುದೇ ತರಹದ ಚರ್ಚೆಗಳನ್ನು ನಿಷೇಧಿಸಲಾಗಿರುತ್ತದೆ.
ಶುಕ್ರವಾರದ ವಿಶೇಷ ಪ್ರಾರ್ಥನೆಯು ಖುದ್ಬಾ(ಸೆರ್ಮಾನ್)
ಆದಷ್ಟು ಸಂಕ್ಷಿಪ್ತವಾಗಿ ಮುಗಿಸಿ, ಪ್ರಾರ್ಥನೆಯನ್ನು 15 ರಿಂದ 20

ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಮಸೀದಿಗಳು ಹಾಗೂ
ದರ್ಗಾಗಳ ಆವರಣಗಳಲ್ಲಿ ಭಿಕ್ಷಾಟನೆಯಿಂದ ಸಾಂಕ್ರಾಮಿಕ
ರೋಗ ಹರಡುವ ಭಿತಿ ಇರುವುದರಿಂದ ಭಿಕ್ಷಾಟನೆಯನ್ನು
ನಿಷೇಧಿಸುವುದು.
ದರ್ಗಾಗಳಲ್ಲಿ ಪ್ರಸಾದ ನೀಡುವುದು ಹಾಗೂ
ಸ್ವೀಕರಿಸುವುದನ್ನು ನಿಷೇಧಿಸಿದೆ ಹಾಗೂ ಗೋರಿಗಳ ಮೇಲೆ
ನಮಸ್ಕರಿಸುವುದರಿಂದ ಬೇರೊಬ್ಬರು ನಮಸ್ಕರಿಸಿದರೆ ಕೋವಿಡ್-19
ವೈರಾಣುಗಳು ವರ್ಗಾಯಿಸುವ ಭಯವಿದ್ದು ಇದನ್ನು
ನಿಷೇಧಿಸಲಾಗಿದೆ ಹಾಗೂ ಅಪ್ಪುಗೆ ಮತ್ತು ಕೈ
ಕುಲುಕುವುದನ್ನು ತಪ್ಪಿಸಬೇಕು.
ಈ ಮೇಲ್ಕಂಡ ಮಾರ್ಗಸೂಚಿಗಳನ್ನು ಸಾರ್ವಜನಿಕರ
ಹಿತದೃಷ್ಟಿಯಿಂದ ಸಾರ್ವಜನಿಕರ ಆರೋಗ್ಯ ಮತ್ತು ಕೋವಿಡ್ 19
ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ
ನಿಟ್ಟಿನಲ್ಲಿ ಹೊರಡಿಸಿದ್ದು, ಇದರಲ್ಲಿ ಯಾವುದೇ ಧಾರ್ಮಿಕ ಹಾಗೂ
ವೈಯಕ್ತಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರುದಿಲ್ಲ.
ಆದ್ದರಿಂದ ಪರಿಸ್ಥಿತಿ ಉತ್ತಮಗೊಳ್ಳುವವರೆಗೆ ಸಾರ್ವಜನಿಕರು
ಕಡ್ಡಾಯವಾಗಿ ಮೇಲ್ಕಂಡ ಸೂಚನೆಗಳನ್ನು ಪಾಲಿಸಬೇಕೆಂದು
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್
ಅಜೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed