ದಾವಣಗೆರೆ ಜೂ.02
ಎಸ್‍ಎಸ್‍ಎಲ್‍ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯವಾದ
ಘಟ್ಟವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಮುಂದಿನ ದಾರಿ ತೀರ್ಮಾನಿಸುವ
ತಿರುವಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ
ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾಗವಂತೆ ಶಿಕ್ಷಕರು,
ಶಿಕ್ಷಣ ಇಲಾಖೆ ಅಗತ್ಯವಾದ ಸಿದ್ದತೆ ನಡೆಸಿಕೊಳ್ಳುವಂತೆ ರಾಜ್ಯ
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಯ ಪ್ರಧಾನ
ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಉಮಾಶಂಕರ್ ಸೂಚಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಎಸ್‍ಎಸ್‍ಎಲ್‍ಸಿ
ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ
ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂ.25 ರಿಂದ ಆರಂಭವಾಗಲಿದ್ದು,
ಜಿಲ್ಲೆಯ ಪ್ರತಿಯೊಬ್ಬ ಪರಿಕ್ಷಾರ್ಥಿ ಪರೀಕ್ಷೆ ಬರೆಯವುದರಿಂದ
ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು
ತಿಳಿಸಿದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ
ಕ್ರಮಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲಾಗುವುದು.
ಲಾಕ್‍ಡೌನ್ ಸಮಸ್ಯೆಯಿಂದ ಪರೀಕ್ಷೆ ಮಾಡಲು ಸಾಧ್ಯವಾಗಿರಲಿಲ್ಲ.
ಹಾಗಾಗಿ ಜೂನ್ 25 ರಿಂದ ಜುಲೈ 4 ರವರೆಗೆ ನಡೆಸಲಾಗುವುದು. 18
ರಿಂದ 20 ವಿದ್ಯಾರ್ಥಿಗಳು ಒಂದು ಕೊಠಡಿಯಲ್ಲಿ ಪರೀಕ್ಷೆ
ಬರೆಯಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್ ಹಾಗೂ ಸ್ಯಾನಿಟೈಸರ್
ವಿತರಣೆ ಮಾಡಲಾಗುವುದು. ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ
ಇವುಗಳನ್ನ ವಿತರಣೆ ಮಾಡಲಿವೆ. ಎಲ್ಲಾ ಪರೀಕ್ಷಾ
ಕೇಂದ್ರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ
ಮಾಡಲಾಗುವುದು ಎಂದು ತಿಳಿಸಿದರು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್-19 ವೈರಾಣು
ಸೋಂಕು ತಡೆ ಕುರಿತು ಅರಿವು ಮೂಡಿಸಬೇಕು. ಸಾಮಾಜಿಕ
ಅಂತರಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಪರೀಕ್ಷಾ ಕೇಂದ್ರದ
ದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪರೀಕ್ಷಾ ಸಮಯಕ್ಕೂ
ಮೊದಲೇ ಹಾಜರಿದ್ದು, ಪ್ರತಿ ಪರೀಕ್ಷಾರ್ಥಿಯನ್ನು ಥರ್ಮಲ್
ಸ್ಕ್ಯಾನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಕಡ್ಡಾಯ
ಹಾಕಬೇಕು. ಹಾಗೂ ಕರ್ತವ್ಯ ನಿರತ ಶಿಕ್ಷಕರು ಪದೇ ಪದೇ
ಸ್ಯಾನಿಟೈಸರ್ ಉಪಯೋಗಿಸಬೇಕು ಎಂದು ಅಧಿಕಾರಿಗಳಿಗೆ
ಸೂಚಿಸಿದರು.
ಬಹುದಿನಗಳಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರು
ನೋಡುತ್ತಿದ್ದರು. ಇದೀಗ ಪರೀಕ್ಷೆ ದಿನಾಂಕ ಪ್ರಕಟಗೊಂಡಿದೆ.
ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ
ಸರ್ಕಾರ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ
ಯಾವುದೇ ಆತಂಕ ಬೇಡ. ಪರೀಕ್ಷೆ ನಡೆಯುತ್ತದೆ. ಎಲ್ಲಾ
ಸರ್ಕಾರಿ ಇಲಾಖೆಗಳು ಪರೀಕ್ಷೆ ನಡೆಯಲು ಸಹಕಾರ ನೀಡುವ
ಭರವಸೆ ನೀಡಿದ್ದಾರೆ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕೊರೊನಾ
ಸಂಖ್ಯೆ ಹೆಚ್ಚಿಲ್ಲ. ಕೆಲ ರಾಜ್ಯಗಳಲ್ಲಿ ಈಗಾಗಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ
ನಡೆಸಲಾಗುತ್ತಿದೆ. ಹಾಗಾಗಿ ನಮ್ಮ ರಾಜ್ಯದಲ್ಲೂ ಪರೀಕ್ಷೆ
ನಡೆಸಲು ಎಲ್ಲಾ ರೀತಿಯಿಂದಲೂ ಚರ್ಚಿಸಿ ಹಾಗೂ ಶಿಕ್ಷಣ ತಜ್ಞರ
ಅಭಿಪ್ರಾಯ ಸಂಗ್ರಹಿಸಿ ಜೊತೆಗೆ ಅಧಿಕಾರಿಗಳ ಸಭೆ ನಡೆಸಿ
ಸರ್ಕಾರ ನಿರ್ಧಾರ ಕೈಗೊಂಡಿದೆ. ಜಿಲ್ಲಾಧಿಕಾರಿಗಳು ಜಿಲ್ಲೆಯ
ಪರೀಕ್ಷಾ ಮುಖ್ಯಸ್ಥರಾಗಿದ್ದು, ಯಾವುದೇ ಅಡಚಣೆಗಳಿಲ್ಲದೆ
ಪರೀಕ್ಷೆ ನಡೆಸಲು ಅಧಿಕಾರಿಗಳು ಸೂಚಿಸಿದ್ದಾರೆ. ಹಾಗಾಗಿ ಕೊರೊನಾ
ಬಗ್ಗೆ ವಿದ್ಯಾರ್ಥಿಗಳಲ್ಲಿ ಯಾವುದೇ ಆತಂಕ ಬೇಡ. ಬದಲಾಗಿ
ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಖಾಸಗಿ ಶಾಲಾ ಬಸ್ ವ್ಯವಸ್ಥೆ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಸ್ ಸಂಚಾರ
ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಪರೀಕ್ಷಾ ಸಮಯದÀಲ್ಲಿ ಸಹಜ ಸ್ಥಿತಿಗೆ
ಮರಳುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ
ತೊಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಖಾಸಗಿ ಶಾಲಾ
ವಾಹನ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಬಸ್ ಸಂಚಾರ
ಇಲ್ಲದಿರುವೆಡೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಪರೀಕ್ಷಾ
ಕೇಂದ್ರಗಳಿಗೆ ಬಿಡಬೇಕು. ಬಳಿಕ ಅವರ ಕೇಂದ್ರಸ್ಥಾನದಿಂದ
ಪುನಃ ಕರೆದುಕೊಂಡ ಹೋಗಬೇಕು ಎಂದರು.
ಕ್ವಾರಂಟೈನ್ ಕೇಂದ್ರಗಳಾಗಿರುವ ಶಾಲೆಗಳು: ಬಹುತೇಕ
ಜಿಲ್ಲೆಗಳಲ್ಲಿ ಹಾಗೂ ಗಡಿಭಾಗದಲ್ಲಿನ ಶಾಲೆಗಳು ಕ್ವಾರಂಟೈನ್
ಕೇಂದ್ರಗಳಾಗಿದ್ದುವು. ಆದರೆ ಇದೀಗ ಅಂತಹ ಶಾಲೆಗಳು
ಪರೀಕ್ಷಾ ಕೇಂದ್ರಗಳಾಗಿದ್ದಲ್ಲಿ ಅವುಗಳನ್ನು ಮೂರು
ದಿನಗಳ ಮುಂಚಿತವಾಗಿ ಡಿಸ್‍ಇನ್‍ಫೆಕ್ಷನ್ ಮಾಡಬೇಕು. ಜಿಲ್ಲೆಯಲ್ಲಿ
ಆ ರೀತಿ ಯಾವ ಶಾಲೆಯಿಲ್ಲ. ಜಾಲಿನಗರದ ದುರ್ಗಾಬಿಂಕಾ ಶಾಲೆಯೂ
ಕಂಟೈನ್ಮೆಮಟ್ ಜೋನ್ ಒಳಪಟ್ಟಿತ್ತು. ಅದರ ಬದಲಿಗೆ
ಪೂರಕ ಶಾಲೆ ಗೊತ್ತು ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ವಿವಿಧ ಇಲಾಖೆಗಳು
ಸಮನ್ವಯ ಸಾಧಿಸಿಕೊಂಡು, ಮುಂದಾಳತ್ವ ವಹಿಸಿಕೊಂಡು
ಪರೀಕ್ಷೆಯನ್ನು ತಂಡದ ಸಹಕಾರದೊಂದಿಗೆ
ಯಶಸ್ವಿಗೊಳಿಸಲಾಗುವುದು. ಸಹಾಯವಾಣಿ ಆರಭಿಸಿ ನುರಿತ
ಸಿಬ್ಬಂದಿ ತೊಡಗಿಸಿ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆ,
ಸಂದೇಹಗಳನ್ನು ಪರಿಹರಿಸಲಾಗುವುದು. ಹಾಗೂ ಪರೀಕ್ಷೆಗೆ
ಯಾವುದೇ ಭಂಗವಾಗದಂತೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಿ
ಜಿಲ್ಲೆಗೆ ಹೆಸರು ಬರುವಂತೆ ನೋಡಿಕೊಳ್ಳಲಾಗುವುದು
ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪರಮೇಶ್ವರಪ್ಪ ಮಾತನಾಡಿ,
ಸರ್ಕಾರದ ಆದೇಶದಂತೆ ಜೂ.25 ರಿಂದ ಜು.4 ರವರೆಗೆ ಎಸ್.ಎಸ್.ಎಲ್.ಸಿ
ಪರೀಕ್ಷೆ ನಡೆಸಬೇಕು ಎಂದು ನಿರ್ಧರಿಸಿದ್ದೆವೇ. ಜಿಲ್ಲೆಯಲ್ಲಿ ಒಟ್ಟು
435 ಸರ್ಕಾರಿ ಶಾಲೆಗಳಿದ್ದು, 1150 ಕೊಠಡಿಗಳ ವ್ಯವಸ್ಥೆ ಇದೆ,
ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿ ಮಾತ್ರ ಪರೀಕ್ಷೆ
ಬರೆಯಲು ಅವಕಾಶವಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 20.927 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದಾರೆ.
ಅದರಲ್ಲಿ 10.311 ಗಂಡು ಮಕ್ಕಳು ಹಾಗೂ 10.616 ಹೆಣ್ಣು
ಮಕ್ಕಳು ಇದ್ದಾರೆ. ವಿದ್ಯಾರ್ಥಿಗಳು ಭಯ ಪಡದ ರೀತಿಯಲ್ಲಿ
ಪತ್ರಿಕೆಗಳಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಲಾಗಿದೆ,
ಮತ್ತು ಚಂದನ ವಾಹಿನಿಯ ಪುನರ್ ಮನನ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಸಮಸ್ಯೆಗೆ
ಪರಿಹಾರ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು
ಸಭೆಯಲ್ಲಿ ತಿರ್ಮಾನಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ
ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್ ನಡೆಸಿ
ನಂತರ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತದೆ.
ಸ್ಕೌಟ್ ಅಂಡ್ ಗೈಡ್ಸ್‍ನವರು ವಿದ್ಯಾರ್ಥಿಗಳಿಗೆ ಒಟ್ಟು 22.000 ಮಾಸ್ಕ್‍ಗಳ
ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ
ನೀಡಿದರು.
ಸಭೆಯಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ
ಹಾಲೇಶಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್,
ಎಲ್ಲಾ ಕಸ್ಟೋಡಿಯನ್, ಮುಖ್ಯ ಅಧಿಕ್ಷಕರು, ಜಿಲ್ಲೆಯ
ಪ್ರೌಢÀಶಾಲಾ ಮುಖ್ಯೊಪಾಧ್ಯಯರು ಉಪಸ್ಥಿತರಿದ್ದರು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲಾ ಇಬ್ಬರು ಆರೋಗ್ಯ
ಕಾರ್ಯಕರ್ತರ ನಿಯೋಜನೆ.
ಕಂಟೈನ್‍ಮೆಂಟ್ ಜೋನ್ ಪ್ರದೇಶದಲ್ಲಿರುವ ಮಕ್ಕಳಿಗೆ
ಪೂರಕ ಕೊಠಡಿ ನಿಯೋಜನೆ.
ಕಂಟೈನ್‍ಮೆಂಟ್ ಜೋನ್ ಪ್ರದೇಶದ ವಿದ್ಯಾರ್ಥಿಗಳಿಗೆ ಎನ್-95
ಮಾಸ್ಕ್ ವಿತರಣೆ.
ಪ್ರತಿ 200 ವಿದ್ಯಾರ್ಥಿಗಳಿಗೆ ಒಂದು ಥರ್ಮಲ್ ಸ್ಕ್ರೀನಿಂಗ್
ಯಂತ್ರ.
ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ 2 ಮಾಸ್ಕ್ ವಿತರಣೆ.
ಪ್ರತಿ ಒಂದು ಕೊಠಡಿಗೆ 18 ರಿಂದ 20 ವಿದ್ಯಾರ್ಥಿಗಳು.
ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಲ್ಲಿದ್ದರೆ ಅವರಿಗೆ ಮುಂದಿನ
ಆಗಸ್ಟ್ ತಿಂಗಳಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ
ಹೊಸ ವಿದ್ಯಾರ್ಥಿ ಎಂದು ಪರಿಗಣಿಸಿ ಅವಕಾಶ ನೀಡಲಾಗುವುದು.