ದಾವಣಗೆರೆ ಜೂ.2
   ದಾವಣಗೆರೆಯಲ್ಲಿ ಇಂದು 7 ಕೊರೊನಾ ಪಾಸಿಟಿವ್ ಪ್ರಕರಣಗಳು
ವರದಿಯಾಗಿದ್ದು, ಇವರಿಗೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ
ಚಿಕಿತ್ಸೆ ನೀಡಲಾಗುತ್ತಿದೆ.
ಇದುವರೆಗೆ ಒಟ್ಟು 163 ಪ್ರಕರಣಗಳು ವರದಿಯಾಗಿದ್ದು, 121
ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.4
ಸಾವು ಸಂಭವಿಸಿದ್ದು, ಒಟ್ಟು 38 ಸಕ್ರಿಯ ಪ್ರಕರಣಗಳು ಚಿಕಿತ್ಸೆ
ಪಡೆಯುತ್ತಿವೆ. ಇಂದು 276 ಜನರ ಗಂಟಲು ದ್ರವ
ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು
ಒಟ್ಟು 772 ನೆಗೆಟಿವ್ ಎಂದು ವರದಿ ಬಂದಿದೆ. ಇದುವರೆಗೆ ಒಟ್ಟು 8982
ಜನರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ
ಕಳುಹಿಸಲಾಗಿದ್ದು 8261 ನೆಗೆಟಿವ್ ಎಂದು ವರದಿ ಬಂದಿದೆ.
16 ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿ ದಿನ ಜ್ವರ/ಐಎಲ್‍ಐ/ಸಾರಿ
ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್
ಝೋನ್‍ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ತೀವ್ರ ಉಸಿರಾಟದ
ತೊಂದರೆಗೆ(ಎಸ್‍ಎಆರ್‍ಐ)ಸಂಬಂಧಿಸಿದಂತೆ ಇದುವರೆಗೆ 335 ಪರೀಕ್ಷೆ
ನಡೆಸಲಾಗಿದ್ದು ಈ ಪೈಕಿ 3 ಪಾಸಿಟಿವ್ ಬಂದಿದ್ದು, 6 ರ ಫಲಿತಾಂಶ
ನಿರೀಕ್ಷೆಯಲ್ಲಿದೆ. ಶೀತ ಕೆಮ್ಮು ಜ್ವರ (ಐಎಲ್‍ಐ)ಕ್ಕೆ ಸಂಬಂಧಿಸಿದಂತೆ 634
ಪರೀಕ್ಷೆ ನಡೆಸಲಾಗಿದ್ದು, 605 ನೆಗೆಟಿವ್ ಎಂದು ವರದಿ ಬಂದಿದ್ದು, 7
ಪಾಸಿಟಿವ್ ವರದಿ ಬಂದಿದೆ ಮತ್ತು 22 ಜನರ ಪರೀಕ್ಷೆ ಫಲಿತಾಂಶ
ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *