ದಾವಣಗೆರೆ ಜೂ.02
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆ
ಪ್ರಾದೇಶಿಕ ಕೇಂದ್ರದಲ್ಲಿ ಇಂದು ಆಯೋಜಿಸಲಾಗಿದ್ದ ಕರೆ
ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ವಿವಿಯ
ಕುಲಪತಿಗಳಾದ ಆರ್.ವಿದ್ಯಾಶಂಕರ್ ಪಾಲ್ಗೊಂಡು
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಆರ್. ವಿದ್ಯಾಶಂಕರ್ ಮಾತನಾಡಿ, ನಾನು ಈ ವಿಶ್ವವಿದ್ಯಾನಿಲಯದ
ಕುಲಪತಿಯಾಗಿ ವರದಿ ಮಾಡಿಕೊಂಡ ತಕ್ಷಣ ನನಗೆ ಪರೀಕ್ಷಾ
ವಿಭಾಗದ ಸಮಸ್ಯೆಗಳು ತೀವ್ರವಾಗಿ ಎದುರಾದವು. ಆ
ಸಮಯದಲ್ಲಿ ನನ್ನ ಮೊದಲ ಆದ್ಯತೆಯಾಗಿ ಪರೀಕ್ಷೆ
ವಿಭಾಗವನ್ನು ಕೇಂದ್ರೀಕರಿಸಿದೆ.
ಪ್ರಸುತ್ತ ಶೇಕಡಾ 99 ರಷ್ಟು ಪರೀಕ್ಷೆ ವಿಭಾಗ ಸಂಬಂಧಿತ
ಸಮಸ್ಯೆಗಳ ಕರೆಗಳು ಇಲ್ಲವಾಗಿದೆ ಹಾಗೂ ರೆಗ್ಯುಲರ್
ವಿಶ್ವವಿದ್ಯಾನಿಲಯದ ಪದವಿಗೂ ಮುಕ್ತ ವಿಶ್ವವಿದ್ಯಾನಿಲಯದ
ಪದವಿಗೂ ಯಾವುದೇ ವ್ಯತ್ಯಾಸವಿಲ್ಲ. ಸಂಪೂರ್ಣ ಡಿಜಿಟಲೀಕರದ
ಮುಖಾಂತರ ವಿದ್ಯಾರ್ಥಿಗಳಿಗೆ ಆಧುನಿಕ ಮಾದರಿ ಶಿಕ್ಷಣ
ಒದಗಿಸುವುದು ನಮ್ಮ ಗುರಿಯಾಗಿದೆ. ಜೂ 30 ರ ನಂತರ
ಪರೀಕ್ಷೆಗಳ ಯೋಜನೆಯ ಕುರಿತು ನಿರ್ಧಾರ
ಕೈಗೊಳ್ಳತ್ತೇನೆ. ವಿದ್ಯಾರ್ಥಿಗಳು ವಿವಿಯ ಆಧುನಿಕ
ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತಾಗಬೇಕು 
ಎಂದು ತಿಳಿಸಿದರು.

ಶಿಲ್ಪ ಎಂಬ ವಿದ್ಯಾರ್ಥಿ ಕರೆ ಮಾಡಿ ಕೊರೊನದ ಕಾರಣಕ್ಕಾಗಿ ಪರೀಕ್ಷೆ
ರದ್ದಾಗುತ್ತವೆಯೇ ಎಂದು, ಒಬಳೇಶ್ ಎಂಬ ವಿದ್ಯಾರ್ಥಿ ಕರೆ ಮಾಡಿ
ದಾವಣಗೆರೆ ಪ್ರಾದೇಶಿಕ ಕೇಂದ್ರದಲ್ಲಿ ಪರೀಕ್ಷೆ ಕೇಂದ್ರ
ಮರುಸ್ಥಾಪಿಸಲಾಗಿದೆ ಇದಕ್ಕೆ ಚೇಂಜ್ ಆಫ್ ಸೆಂಟರ್‍ನ ಫೀಸ್ ಕಟ್ಟಬೇಕೆ
ಎಂದು, ಉದಯ್ ಎಂಬ ವಿದ್ಯಾರ್ಥಿ ಅಸೈನ್‍ಮೆಂಟ್ ಸಲ್ಲಿಸಲು ಅವಧಿ
ವಿಸ್ತರಣೆ ಮಾಡಿಕೊಡಬೇಕೆಂದು ಮುಂತಾದ ರೀತಿಯಲ್ಲಿ
ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಕುಲಪತಿಗಳು
ಉತ್ತರಿಸಿದರು.
ಪ್ರಾದೇಶಿಕ ಕೇಂದ್ರದ ನೀರ್ದೆಶಕ ಡಾ. ಸುಧಾಕರ್ ಹೊಸಳ್ಳಿ
ಕಾರ್ಯಕ್ರಮ ನಿರೂಪಿಸಿ, ಉನ್ನತ ಶಿಕ್ಷಣ ಸಚಿವರು ಮತ್ತು
ಇಲಾಖೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು
ಶ್ಲಾಘಿಸಿದ್ದು, ರೆಗ್ಯುಲರ್ ಹಾಗೂ ನಾನ್ ರೆಗ್ಯುಲರ್ ಭೇದವಿಲ್ಲದೆ ವಿವಿ
ನೀಡುತ್ತಿರುವ ತಳಮಟ್ಟದ ಶೈಕ್ಷಣಿಕ ಅವಕಾಶಗಳನ್ನು
ವಿದ್ಯಾರ್ಥಿಗಳು ಬಳಸಿಕೋಳ್ಳಬೇಕು ಹಾಗೂ ನಿರಂತರವಾಗಿ
ಪ್ರಾದೇಶಿಕ ಕೇಂದ್ರದ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು
ಎಂದು ಕೆರೆ  ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಪ್ರಾದೇಶಿಕ ಕೇಂದ್ರದ
ನಿರ್ದೇಶಕರಾದ ಮೋಹನ್ ರಾಜು, ಬೆಂಗಳೂರು ಪ್ರಾದೇಶಿಕ
ಕೇಂದ್ರದ ನಿರ್ದೇಶಕರಾದ ಗಿರೀಶ್ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *