ದಾವಣಗೆರೆ ಜೂ.2
ರಸ್ತೆ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದ
ಪ್ರೇಮಾ(44 ವರ್ಷ) ಎಂಬ ಮಹಿಳೆಯನ್ನು ತಮ್ಮ ವಾಹನದಲ್ಲಿ
ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಸ್.ಎಸ್.ಆಸ್ಪತ್ರೆಗೆ ದಾಖಲಿಸಿ
ಮಾನವೀಯತೆ ಮೆರೆದ ಬಸವಾಪಟ್ಟಣ ನಾಡ ಕಚೇರಿಯ ಉಪ
ತಹಶೀಲ್ದಾರ್ ಎನ್.ಎಸ್.ಚಂದ್ರಪ್ಪ ಇವರನ್ನು ಜಿಲ್ಲಾಡಳಿತ
ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸನ್ಮಾನ
ಮಾಡಿದರು.
ಮೇ 30 ರಂದು ತ್ಯಾವಣಿಗಿ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ
ನಿರ್ವಹಿಸುತ್ತಿರುವ ಜಗಳೂರು ತಾಲ್ಲೂಕಿನ ಹಳದಂಡೆ
ಗ್ರಾಮದ ಪ್ರೇಮಾ ದಾವಣಗೆರೆಯಿಂದ ಮೋಟಾರ್ ಬೈಕಿನಲ್ಲಿ ಹಿಂದಿನ
ಸೀಟಿನಲ್ಲಿ ಕುಳಿತು ಬರುತ್ತಿರುವಾಗ ಮತ್ತಿ ಸಮೀಪ ಆಕಸ್ಮಿಕವಾಗಿ
ಅಡ್ಡ ಬಂದ ಎಮ್ಮೆಗೆ ಬೈಕ್ ಡಿಕ್ಕಿ ಹೊಡೆದು ಹಿಂಬಿದಿಯಲ್ಲಿ ಕುಳಿತಿದ್ದ
ಹೇಮಾ ಕೆಳಗೆ ಬಿದು ಒದ್ದಾಡುತ್ತಿದ್ದರು. ಅಲ್ಲಿ ಹಲವರು
ಅವರನ್ನು ನೋಡಿದರೂ ಸಹಾಯಕ್ಕೆ ಮುಂದಾಗದೇ
ಇರುವುದನ್ನು ಅಲ್ಲೇ ಸಾಗುತ್ತಿದ್ದ ಬಸವಾಪಟ್ಟಣ ನಾಡಕಚೇರಿಯ
ಉಪ ತಹಶೀಲ್ದಾರ್ ಚಂದ್ರಪ್ಪ ಆಕೆಯನ್ನು ತಮ್ಮ ಕಾರಿನಲ್ಲಿ
ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಗೆ ತಂದು ಸೇರಿಸಿ, ಆಸ್ಪತ್ರೆ
ಖರ್ಚಿಗೆಂದು ರೂ.10 ಸಾವಿರ ನೀಡಿದ್ದರು. ನಂತರ ಅವರ ತಂದೆ
ತಾಯಿಗೆ ವಿಷಯ ತಿಳಿಸಿದ್ದರು. ಬೈಕ್ ಸವಾರ ಯುವಕನಿಗೆ
ಸಣ್ಣಪುಟ್ಟ ಗಾಯಗಳಾಗಿದ್ದವು.
ಅಪಘಾತಕ್ಕೀಡಾದ ಹೆಣ್ಣುಮಗಳನ್ನು ಆಸ್ಪತ್ರೆಗೆ ಸೇರಿಸಿ
ಮಾನವೀಯತೆ ಮೆರೆದ ಉಪ ತಹಶೀಲ್ದಾರರನ್ನು ಇಂದು
ಜಿಲ್ಲಾಧಿಕಾರಿಗಳು ಸನ್ಮಾನಿಸಿ ಚಂದ್ರಪ್ಪ ಉತ್ತಮ ಕೆಲಸ ಮಾಡಿದ್ದಾರೆ.
ಎಲ್ಲರೂ ಹೀಗೇಯೇ ತಮ್ಮ ಸುತ್ತಮುತ್ತಲು ಏನಾದರೂ
ಅವಘಡಗಳು ಸಂಭವಿಸಿದರೆ ಸಹಾಯಕ್ಕೆ ಮುಂದಾಗಿ
ಮಾನವೀಯತೆ ಮೆರೆಯಬೇಕು ಎಂದರು. ಹಾಗೂ ಈ
ಸಂದರ್ಭದಲ್ಲಿ ಉಪಸ್ಥಿತರಿದ್ದ ಅಪಘಾತಕ್ಕೀಡಾದ ಮಹಿಳೆಯ ತಂದೆ
ಪಂಚಾಕ್ಷರಪ್ಪನವರಿಗೆ ಧೈರ್ಯ ಹೇಳಿದರು. ಈ
ಚಂದ್ರಪ್ಪನವರ ಧರ್ಮಪತ್ನಿ ಬಿ.ಎಸ್.ರೇಣುಕಮ್ಮ, ವೇಳೆ ರೈತ
ಮುಖಂಡರು, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪ್ರಧಾನ
ಸಂಚಾಲಕರಾದ ಹೆಚ್.ಬಿ.ಅಣ್ಣಪ್ಪ, ಆಂಜನೇಯ, ಆಶಾ
ಕಾರ್ಯಕರ್ತೆಯರು, ಇತರೆ ಅಧಿಕಾರಿ ವರ್ಗದವರು
ಹಾಜರಿದ್ದರು.