ದಾವಣಗೆರೆ ಜೂ.02 –
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು,
ಎ.ಆರ್.ಟಿ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಚನ್ನಗಿರಿ ಇಲ್ಲಿ ಖಾಲಿ ಇರುವ 1
ವೈದ್ಯಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿ
ಆಹ್ವಾನಿಸಲಾಗಿದೆ.
ಮುಖ್ಯ ವೈದ್ಯಾಧಿಕಾರಿಗಳ ಕೊಠಡಿಯಲ್ಲಿ ನೇರ
ಸಂದರ್ಶನದ ಮೂಲಕ ನೇಮಕಾತಿ ನಡೆಯುತ್ತದೆ.
ಪತ್ರಿಕೆಯಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 7
ದಿನಗಳೊಳಗೆ ಅರ್ಜಿಗಳನ್ನು ಎ.ಆರ್.ಟಿ ಕೇಂದ್ರದ ರೂಂ.ನಂ 24
ರಲ್ಲಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯೊಳೆಗೆ
ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸುವವರು ಎಲ್ಲಾ ಶೈಕ್ಷಣಿಕ
ದಾಖಲಾತಿಗಳ ಮೂಲ ಪ್ರತಿಗಳು ಹಾಗೂ 2 ಪ್ರತಿ ಜೆರಾಕ್ಸ್
ಪ್ರತಿಗಳನ್ನು, ಇತ್ತೀಚಿನ ಪಾಸ್‍ಪೋರ್ಟ್ ಸೈಜಿನ 2
ಭಾವಚಿತ್ರಗಳನ್ನು ತರಬೇಕು ಹಾಗೂ ಅರ್ಜಿ ಅಲ್ಲಿಸುವವರು 65
ವರ್ಷ ವಯೋಮಿತಿ ಮೀರಿರಬಾರದು.
ನೇಮಕಾತಿಯನ್ನು ಓಂಅಔ/ಏಂSPS  ನೇಮಕಾತಿ
ನಿಯಮಾನುಸಾರ ನಡೆಸಲಾಗುವುದು ಹಾಗೂ  ನೇಮಕಾತಿ
ಸಮಿತಿಯ ನಿರ್ಧಾರವೇ ಅಂತಿಮ ನಿರ್ಧಾರವಾಗಿರುತ್ತದೆ
ಎಂದು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಯ ಎ.ಆರ್.ಟಿ ಕೇಂದ್ರದ
ನೋಡಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *